ಬೆಳಗಾವಿಯಲ್ಲಿ ಆಸ್ತಿಗಾಗಿ ಸೋದರನನ್ನೇ ಕಟ್ಟಡದಿಂದ ತಳ್ಳಿ ಕೊಲ್ಲಲು ಯತ್ನ; ವೈರಲ್ ವಿಡಿಯೋ ಇಲ್ಲಿದೆ

| Updated By: ಸುಷ್ಮಾ ಚಕ್ರೆ

Updated on: Sep 14, 2021 | 4:35 PM

ಬಹುಮಹಡಿ ಕಟ್ಟಡಕ್ಕಾಗಿ ಶ್ರೀಧರ್, ಸಂದೀಪ್, ಸುನಿಲ್ ಎಂಬ ಮೂವರು ಸಹೋದರರ ಜಗಳದ ವೇಳೆ ಇಬ್ಬರು ಅಣ್ಣಂದಿರು ಸೇರಿ ಒಬ್ಬ ಸೋದರನನ್ನು ಕಟ್ಟಡದಿಂದ ಕೆಳಗೆ ತಳ್ಳಿ ಕೆಡಗಲು ಪ್ರಯತ್ನಿಸಿದ್ದಾರೆ. ಆದರೆ, ಆತ ಕಟ್ಟಡದ ರಾಡನ್ನು ಹಿಡಿದು ಪ್ರಾಣಾಪಾಯದಿಂದ ಬಚಾವಾಗಿದ್ದಾರೆ.

ಹುಟ್ಟುತ್ತಾ ಸಹೋದರರು ಬೆಳೆಯುತ್ತಾ ದಾಯಾದಿಗಳು ಎಂಬ ಗಾದೆ ಮಾತೊಂದಿದೆ. ಅದೇ ರೀತಿ ಬೆಳಗಾವಿಯಲ್ಲಿ ಅಣ್ಣ-ತಮ್ಮಂದಿರ ಆಸ್ತಿ ಗಲಾಟೆ ಈಗ ಭಾರೀ ಸುದ್ದಿಯಾಗಿದೆ. ಬಹುಮಹಡಿ ಕಟ್ಟಡಕ್ಕಾಗಿ ಕಿತ್ತಾಡಿದ ಅಣ್ಣ-ತಮ್ಮಂದಿರ ವಿಡಿಯೋ ವೈರಲ್ ಆಗಿದೆ. ಶ್ರೀಧರ್, ಸಂದೀಪ್, ಸುನಿಲ್ ಎಂಬ ಮೂವರು ಸಹೋದರರ ಜಗಳದ ವೇಳೆ ಇಬ್ಬರು ಅಣ್ಣಂದಿರು ಸೇರಿ ಒಬ್ಬ ಸೋದರನನ್ನು ಕಟ್ಟಡದಿಂದ ಕೆಳಗೆ ತಳ್ಳಿ ಕೆಡಗಲು ಪ್ರಯತ್ನಿಸಿದ್ದಾರೆ. ಕಟ್ಟಡದ 2ನೇ ‌ಮಹಡಿಯಿಂದ ಸೋದರನನ್ನು ತಳ್ಳುವುದಕ್ಕೆ ಪ್ರಯತ್ನಿಸಿದ್ದಾರೆ. ಆದರೆ, ಆತ ಕಟ್ಟಡದ ರಾಡನ್ನು ಹಿಡಿದು ಪ್ರಾಣಾಪಾಯದಿಂದ ಬಚಾವಾಗಿದ್ದಾರೆ. ಈ ಗಲಾಟೆಗೆ ಸಂಬಂಧಿಸಿದಂತೆ ತನ್ನ ಬೆಳಗಾವಿಯ ಖಡೇಬಜಾರ್ ಪೊಲೀಸರಿಂದ ನಾಲ್ವರನ್ನು ಬಂಧಿಸಲಾಗಿದೆ. ಹೊಡೆದಾಟವನ್ನು ತಪ್ಪಿಸಲು ಹೋದವರ ಮೇಲೂ ಆ ಸಹೋದರರು ಹಲ್ಲೆ ನಡೆಸಿದ್ದಾರೆ. 

ಇದನ್ನೂ ಓದಿ: ಗುಜರಿ ವಸ್ತುಗಳಿಂದಲೇ ನಿರ್ಮಾಣವಾಯ್ತು 14 ಅಡಿ ಎತ್ತರದ ಪ್ರಧಾನಿ ನರೇಂದ್ರ ಮೋದಿ ಪ್ರತಿಮೆ!

ಬೆಳಗಾವಿ ಪಾಲಿಕೆ ಚುನಾವಣೆ: ಕಾಂಗ್ರೆಸ್​ಗೆ ಬಿಜೆಪಿಗಿಂತ ಹೆಚ್ಚು ಮತ, ಆದರೆ ಗೆದ್ದ ಅಭ್ಯರ್ಥಿಗಳಲ್ಲಿ ಅವರ ಸಂಖ್ಯೆ ಹೆಚ್ಚು: ಡಿಕೆ ಶಿವಕುಮಾರ್