AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಮಗುವನ್ನು ಆಟೋದಲ್ಲಿ ಕೂರಿಸಿ ಬಾರ್​ಗೆ ಕುಡಿಯಲು ಹೋದ ಮಹಿಳೆ

Video: ಮಗುವನ್ನು ಆಟೋದಲ್ಲಿ ಕೂರಿಸಿ ಬಾರ್​ಗೆ ಕುಡಿಯಲು ಹೋದ ಮಹಿಳೆ

ನಯನಾ ರಾಜೀವ್
|

Updated on:Dec 28, 2025 | 12:18 PM

Share

ಮಗುವನ್ನು ಆಟೋದಲ್ಲಿ ಕೂರಿಸಿ ತಾಯಿಯೊಬ್ಬಳು ಹತ್ತಿರದ ಬಾರ್​ಗೆ ಕುಡಿಯಲು ಹೋಗಿದ್ದ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಇ-ಆಟೋದಲ್ಲಿ ತನ್ನ 4 ವರ್ಷದ ಮಗನನ್ನು ಕೂರಿಸಿ ಆಕೆ ಬಾರ್​ಗೆ ಕುಡಿಯಲು ಹೋಗಿದ್ದಳು. ಪೊಲೀಸ್ ಸಿಬ್ಬಂದಿ ಬಾಲಕನನ್ನು ಗಮನಿಸಿದ್ದಾರೆ ಮತ್ತು ಸುರಕ್ಷಿತವಾಗಿ ಬಾಲಕನನ್ನು ಮನೆಗೆ ಸೇರಿಸಿದ್ದಾರೆ. ಮಹಿಳೆ ತನ್ನ ಮಗನೊಂದಿಗೆ ಇ-ರಿಕ್ಷಾವನ್ನು ಬಾಡಿಗೆಗೆ ಪಡೆದಿದ್ದಳು ಮತ್ತು ಹತ್ತಿರದ ಬಾರ್‌ಗೆ ಹೋಗುವಾಗ ಮಗುವಿನೊಂದಿಗೆ ಕಾಯಲು ಚಾಲಕನನ್ನು ಕೇಳಿಕೊಂಡಿದ್ದಳು. ಮಗುವಿನ ಸುರಕ್ಷತೆಯ ಬಗ್ಗೆ ಕಳವಳಗೊಂಡ ಇ-ರಿಕ್ಷಾ ಚಾಲಕ ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸಿದರು.

ಗುರುಗ್ರಾಮ, ಡಿಸೆಂಬರ್ 28: ಮಗುವನ್ನು ಆಟೋದಲ್ಲಿ ಕೂರಿಸಿ ತಾಯಿಯೊಬ್ಬಳು ಹತ್ತಿರದ ಬಾರ್​ಗೆ ಕುಡಿಯಲು ಹೋಗಿದ್ದ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಇ-ಆಟೋದಲ್ಲಿ ತನ್ನ 4 ವರ್ಷದ ಮಗನನ್ನು ಕೂರಿಸಿ ಆಕೆ ಬಾರ್​ಗೆ ಕುಡಿಯಲು ಹೋಗಿದ್ದಳು. ಪೊಲೀಸ್ ಸಿಬ್ಬಂದಿ ಬಾಲಕನನ್ನು ಗಮನಿಸಿದ್ದಾರೆ ಮತ್ತು ಸುರಕ್ಷಿತವಾಗಿ ಬಾಲಕನನ್ನು ಮನೆಗೆ ಸೇರಿಸಿದ್ದಾರೆ. ಮಹಿಳೆ ತನ್ನ ಮಗನೊಂದಿಗೆ ಇ-ರಿಕ್ಷಾವನ್ನು ಬಾಡಿಗೆಗೆ ಪಡೆದಿದ್ದಳು ಮತ್ತು ಹತ್ತಿರದ ಬಾರ್‌ಗೆ ಹೋಗುವಾಗ ಮಗುವಿನೊಂದಿಗೆ ಕಾಯಲು ಚಾಲಕನನ್ನು ಕೇಳಿಕೊಂಡಿದ್ದಳು. ಮಗುವಿನ ಸುರಕ್ಷತೆಯ ಬಗ್ಗೆ ಕಳವಳಗೊಂಡ ಇ-ರಿಕ್ಷಾ ಚಾಲಕ ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸಿದರು.

ಪೊಲೀಸ್ ಅಧಿಕಾರಿಗಳು ತಕ್ಷಣ ಪ್ರತಿಕ್ರಿಯಿಸಿ ಅಲ್ಲಿಗೆ ಬಂದು ವಿಚಾರಣೆ ನಡೆಸಿದ್ದಾರೆ.ಪೊಲೀಸ್ ಅಧಿಕಾರಿಗಳು ಮಗುವನ್ನು ಮಹಿಳೆಗೆ ಹಸ್ತಾಂತರಿಸುವ ಮೊದಲು ಮಹಿಳೆಯೊಂದಿಗೆ ಮಾತನಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಆಕೆ ಕಂಠಪೂರ್ತಿ ಕುಡಿದಿದ್ದಳು. ಇ-ರಿಕ್ಷಾ ಚಾಲಕನ ಜಾಗರೂಕತೆ ಮತ್ತು ಪೊಲೀಸರ ತ್ವರಿತ ಪ್ರತಿಕ್ರಿಯೆಯನ್ನು ಹಲವರು ಶ್ಲಾಘಿಸಿದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Dec 28, 2025 12:16 PM
Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More