Viral Video: ಗೂಳಿಯ ಮೇಲೇರಿ ಸವಾರಿ ಹೊರಟ ಯುವಕ ;ವಿಡಿಯೋ ಇಲ್ಲಿದೆ ನೋಡಿ

|

Updated on: Apr 05, 2024 | 5:03 PM

ಕಣ್ಣಿಗೊಂದು ಕಪ್ಪು ಕನ್ನಡಕ ಹಾಕಿ ನಾನು ಯಾವ ಹೀರೋಗಳಿಗೂ ಕಮ್ಮಿಯಿಲ್ಲ ಎಂಬಂತೆ ಗೂಳಿಯ ಮೇಲೇರಿ ನಗರದ ರಸ್ತೆಯಲ್ಲಿ ಸ್ಟೈಲ್ ಆಗಿ ಸವಾರಿ ಹೊರಟಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ವಿಡಿಯೋ ಇಲ್ಲಿದೆ ನೋಡಿ.

ಹರಿಯಾಣದಲ್ಲಿ ವ್ಯಕ್ತಿಯೊಬ್ಬ ಗೂಳಿಯ ಮೇಲೆ ಸವಾರಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಯುವಕನೊಬ್ಬ ಫಾರ್ಮಲ್ ಡ್ರೆಸ್, ಫಾರ್ಮಲ್ ಶೂ, ಕಣ್ಣಿಗೊಂದು ಕಪ್ಪು ಕನ್ನಡಕ ಹಾಕಿ ನಾನು ಯಾವ ಹೀರೋಗಳಿಗೂ ಕಮ್ಮಿಯಿಲ್ಲ ಎಂಬಂತೆ ಗೂಳಿಯ ಮೇಲೇರಿ ನಗರದ ರಸ್ತೆಯಲ್ಲಿ ಸ್ಟೈಲ್ ಆಗಿ ಸವಾರಿ ಹೊರಟಿರುವ ದೃಶ್ಯವನ್ನು ಕಾಣಬಹುದು. @bull_rider_077 ಎಂಬ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಬುಲ್​ ರೈಡರ್​​ ಎಂದೇ ಫೇಮಸ್​​​ ಆಗಿರುವ ಈತ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ 2ಲಕ್ಷಕ್ಕೂ ಅಧಿಕ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Apr 05, 2024 05:02 PM