ಮಂಗಳೂರಿನ ಸುರತ್ಕಲ್ ಮೀನುಗಾರನಿಗೆ ಒಲಿದ ಅದೃಷ್ಟ ಲಕ್ಷ್ಮಿ; ಬಲೆಗೆ ಬಿದ್ದ 400 ಕೆಜಿಗೂ ಹೆಚ್ಚು ಮೀನುಗಳು
Mangalore News: ದಡದಿಂದ ಬೀಸುವ ಕೈರಂಪೊನಿ ಬಲೆಗೆ ಮತ್ಸ್ಯ ಸಮೂಹವೇ ಬಿದ್ದಿದೆ. ಬಂಗುಡೆ, ಕೊಡ್ಡಾಯಿ, ಕಲ್ಲೂರು ಮೀನುಗಳ ಮಹಾಬೇಟೆಯಿಂದ ಜೀವನ್ ಪಿರೇರಾ ಎಂಬ ಮೀನುಗಾರ ಖುಷಿಯಾಗಿದ್ದಾರೆ.
ಮಂಗಳೂರು: ದಕ್ಷಿಣ ಕನ್ನಡದ ಸುರತ್ಕಲ್ (Suratkal) ಗೊಡ್ಡೆಕೊಪ್ಲ ಕಡಲ ಕಿನಾರೆಯಲ್ಲಿ ಮೀನುಗಾರನಿಗೆ ಅದೃಷ್ಟ ಲಕ್ಷ್ಮೀ ಒಲಿದಿದ್ದಾಳೆ. ಬಲೆ ಬೀಸಿದ ಮೀನುಗಾರನಿಗೆ ಮೀನಿನ ರಾಶಿಯೇ ಸಿಕ್ಕಿದೆ. ದಡದಿಂದ ಬೀಸುವ ಕೈರಂಪೊನಿ ಬಲೆಗೆ ಮತ್ಸ್ಯ ಸಮೂಹವೇ ಬಿದ್ದಿದೆ. ಬಂಗುಡೆ, ಕೊಡ್ಡಾಯಿ, ಕಲ್ಲೂರು ಮೀನುಗಳ (Fishes) ಮಹಾಬೇಟೆಯಿಂದ ಜೀವನ್ ಪಿರೇರಾ ಎಂಬ ಮೀನುಗಾರ ಖುಷಿಯಾಗಿದ್ದಾರೆ. ಸುಮಾರು 400ಕ್ಕೂ ಅಧಿಕ ಕೆ.ಜಿಯ ಮೀನುಗಳು ಬಲೆಗೆ ಬಿದ್ದು ಅಚ್ಚರಿ ಮೂಡಿಸಿದೆ. ಬಲೆಗೆ ಬಿದ್ದ ಮೀನುಗಳ ವಿಡಿಯೋ ಭಾರೀ ವೈರಲ್ ಆಗಿದೆ.