ಕೆರೆಗೆ ರಾಸಾಯನಿಕ ನೀರು ಮಿಶ್ರಣ; ಸಾವಿರಾರು ಮೀನುಗಳ ಮಾರಣಹೋಮ

ಜಲಚರಗಳ ಸಾವಿಗೆ ಬಣ್ಣದ ಕಾರ್ಖಾನೆಗಳ ಕೆಮಿಕಲ್ ಮಿಶ್ರಿತ ನೀರು ಕಾರಣ ಅಂತ‌ ಆರೋಪ ಮಾಡಲಾಗುತ್ತಿದೆ. ಬಿಲವಾರದಹಳ್ಳಿ, ಶಾನುಭೋಗನಹಳ್ಳಿ, ಕೆಂಚಿಗನಹಳ್ಳಿ ಪ್ರದೇಶದಲ್ಲಿ ಬಣ್ಣದ ಕಾರ್ಖಾನೆಗಳಿವೆ.

ಕೆರೆಗೆ ರಾಸಾಯನಿಕ ನೀರು ಮಿಶ್ರಣ; ಸಾವಿರಾರು ಮೀನುಗಳ ಮಾರಣಹೋಮ
ವಿಷಯುಕ್ತ ನೀರಿನಿಂದ ಮೀನುಗಳ ಸಾವು
TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Sep 19, 2022 | 2:51 PM

ಆನೇಕಲ್: ಕೆರೆಯಲ್ಲಿ ರಾಸಾಯನಿಕ ನೀರು ಮಿಶ್ರಣದಿಂದಾಗಿ ಸಾವಿರಾರು ಮೀನುಗಳ ಮಾರಣಹೋಮ ನಡೆದಿರುವಂತಹ ಘಟನೆ ಬನ್ನೇರುಘಟ್ಟ ಪಂಚಾಯತಯ ಬ್ಯಾಟರಾಯನದೊಡ್ಡಿ ಕೆರೆಯಲ್ಲಿ ನಡೆದಿದೆ. ಜಲಚರಗಳ ಸಾವಿಗೆ ಬಣ್ಣದ ಕಾರ್ಖಾನೆಗಳ ಕೆಮಿಕಲ್ ಮಿಶ್ರಿತ ನೀರು ಕಾರಣ ಅಂತ‌ ಆರೋಪ ಮಾಡಲಾಗುತ್ತಿದೆ. ಬಿಲವಾರದಹಳ್ಳಿ, ಶಾನುಭೋಗನಹಳ್ಳಿ, ಕೆಂಚಿಗನಹಳ್ಳಿ ಪ್ರದೇಶದಲ್ಲಿ ಬಣ್ಣದ ಕಾರ್ಖಾನೆಗಳಿವೆ. ತಮಿಳುನಾಡಿನಲ್ಲಿ ಸಂಪೂರ್ಣ ಬಣ್ಣದ ಕಾರ್ಖಾನೆಗಳನ್ನು ನಿಷೇಧಿಸಲಾಗಿದೆ. ಬಣ್ಣ ಕಟ್ಟಿದ ಬಳಿಕ ಕೆಮಿಕಲ್ ಮಿಶ್ರಿತ ನೀರು ಹೊರ ಬಿಡಲಾಗುತ್ತದೆ. ಕೆಮಿಕಲ್ ಮಿಶ್ರಿತ ನೀರು ಕೆರೆಗೆ ಸೇರಿ ಮೀನುಗಳು ಸಾವನ್ನಪ್ಪಿವೆ. ಸಾಲಸೋಲ ಮಾಡಿ ಮೀನುಗಳನ್ನು ಸಾಕಾಣಿಕೆ ಮಾಡಿದ ರೈತರು ಕಂಗಾಲಾಗಿದ್ದಾರೆ. ಕ್ರಮ ಕೈಗೊಳ್ಳದ ಪಂಚಾಯಿತಿ ವಿರುದ್ಧ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೌಟುಂಬಿಕ ಕಲಹ ಹಿನ್ನಲೆ ಗೃಹಿಣಿ ನೇಣಿಗೆ ಶರಣು

ವಿಜಯಪುರ: ಕೌಟುಂಬಿಕ ಕಲಹ ಹಿನ್ನಲೆ ಗೃಹಿಣಿ ನೇಣಿಗೆ ಶರಣಾಗಿರುವಂತಹ ಘಟನೆ ಜಿಲ್ಲೆಯ ಬಬಲೇಶ್ವರ ತಾಲೂಕಿನ ನಿಡೋಣಿ ಗ್ರಾಮದಲ್ಲಿ ನಡೆದಿದೆ. ರೂಪಾ ಸಂದೀಪ್ ಗಣತಿ (19) ಆತ್ಮಹತ್ಯೆಗೆ ಶರಣಾದ ಗೃಹಿಣಿ. ಪತಿ ಸಂದೀಪ್ ಜೊತೆಗೆ ಜಗಳ ಮಾಡಿದ್ದ ಕಾರಣ ನೇಣು ಹಾಕಿಕೊಂಡಿರೋ ಶಂಕೆ ವ್ಯಕ್ತವಾಗಿದೆ. ತಾವು ವಾಸ ಮಾಡುತ್ತಿದ್ದ ಶೆಡ್​ನಲ್ಲಿ ರೂಪಾ ನೇಣಿ ಹಾಕಿಕೊಂಡಿದ್ದಾರೆ. ಪತಿಯೇ ಕೊಲೆ ಮಾಡಿದ್ದಾನೆಂದು ರೂಪಾ ಪೋಷಕರು ಆರೋಪ ಮಾಡುತ್ತಿದ್ದಾರೆ. ಸ್ಥಳಕ್ಕೆ ಬಬಲೇಶ್ವರ ಪೊಲೀಸರ ಭೇಟಿ, ಪರಿಶೀಲನೆ ಮಾಡಿದ್ದು, ಪ್ರಕರಣ ದಾಖಲಾಗಿದೆ.

ಬೀದರ್ ನಗರದಲ್ಲಿ ಅಂತರ್ ರಾಜ್ಯ ಕುಖ್ಯಾತ ಮನೆಗಳ್ಳರ ಬಂಧನ

ಬೀದರ್: ಅಂತರ್ ರಾಜ್ಯ ಕುಖ್ಯಾತ ಮನೆಗಳ್ಳರ ಬಂಧನ ಮಾಡಲಾಗಿದೆ. ಸೆಪ್ಟೆಂಬರ್‌ 19 ರಂದು‌ ಇಬ್ಬರು ಕಳ್ಳರು ಒಂದೆ ದಿನ ಮೂರು ಮನೆಗಳ್ಳತನ ಮಾಡಿದ್ದರು. ಗಾಂಧಿಗಂಜ್ ಪೊಲೀಸ್ ಠಾಣೆ ನೂತನ‌ ನಗರ‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಂಧಿತರಿಂದ 10 ಲಕ್ಷ ಬೆಲೆ ಬಾಳುವ 200 ಗ್ರಾಮ ಬಂಗಾರದ ಒಡೆವೆಗಳು ಕದ್ದು ಪರಾರಿಯಾಗಿದ್ದರು. ಬಂಧಿತ ಆರೋಪಿತರು ನಟೋರಿಯಸ್ ಕ್ರೀಮಿನಲ್​ಗಳಾಗಿದ್ದು, ಸೋಲಾಪುರ ರಾಯಚೂರು ಗದಗ ಹುಬ್ಬಳ್ಳಿ ಧಾರವಾಡ ಬಾಗಲಕೋಟೆಯಲ್ಲಿಯೂ ಕಳ್ಳತನ ಮಾಡಿದ್ದಾರೆ.

ಜನನಿಬಿಡ ಪ್ರದೇಶದಲ್ಲಿ ಯುವಕನ ಬರ್ಬರ ಕೊಲೆ

ಕಲಬುರಗಿ: ಜಿಲ್ಲೆಯ ಜನನಿಬಿಡ ಪ್ರದೇಶದಲ್ಲಿ ಯುವಕನ ಬರ್ಬರ ಕೊಲೆಯಾಗಿದೆ(Murder). ಸಿನಿಮಾ ರೀತಿಯಲ್ಲಿ ಇಬ್ಬರು‌ ದುಷ್ಕರ್ಮಿಗಳು ಯುವಕನನ್ನು ಅಡ್ಡಾಡಿಸಿಕೊಂಡು ಹೋಗಿ ಕೊಲೆ ಮಾಡಿದ್ದಾರೆ. ಯುವಕನ ಕೊಲೆ ವೇಳೆ ಸ್ಥಳದಲ್ಲೇ ನೂರಾರು ಜನರು ಇದ್ರು ಯಾರು ಯುವಕನ ರಕ್ಷಣೆಗೆ ಬಂದಿಲ್ಲಾ. ಕಲಬುರಗಿ ನಗರದ ಹೌಸಿಂಗ್ ಬೋರ್ಡ್ ಕಾಲೋನಿ ನಿವಾಸಿ ಸಮೀರ್(23) ಕೊಲೆಯಾದ ಯುವಕ. ಕಲಬುರಗಿ ನಗರದ ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಲಬುರಗಿ ನಗರದ ಹಳೆ ಜೇವರ್ಗಿ ರಸ್ತೆಯಲ್ಲಿ ನಡೆದ ಕೊಲೆ ಬೆಚ್ಚಿಬೀಳಿಸುವಂತಿದೆ.

ಸೆಪ್ಟೆಂಬರ್ 17 ರಂದು ರಾತ್ರಿ ನಡು ರಸ್ತೆಯಲ್ಲೇ ನೂರಾರು ಜನರ ಸಮ್ಮುಖದಲ್ಲೇ ಯುವಕನ ಬರ್ಬರ ಕೊಲೆಯಾಗಿದೆ. ದುಷ್ಕರ್ಮಿಗಳು ಯುವಕನನ್ನು ಕೊಚ್ಚಿ ರಕ್ತದೋಕುಳಿ ಆಡುದ್ರು ಯಾರೂ ಅದನ್ನು ನಿಲ್ಲಿಸುವ ಕೆಲಸ ಮಾಡಿಲ್ಲ. ಕೊಲೆಯನ್ನು ನೋಡುತ್ತಾ ಸುಮ್ಮನೆ ನಿಂತಿದ್ದರು. ದುಷ್ಕರ್ಮಿಗಳ ಬಳಿಯಿದ್ದ ಮಾರಕಾಸ್ತ್ರಗಳನ್ನು ನೋಡಿ ಭಯದಿಂದ ದೂರ ನಿಂತಿದ್ರು. ಅನೇಕ ಬಾರಿ ಮಾರಕಾಸ್ತ್ರದಿಂದ ಇರಿದು ಯುವಕನ ಕೊಲೆ ಮಾಡಲಾಗಿದೆ. ಯುವಕನ ಬರ್ಬರ ಕೊಲೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಾರು, ಬೈಕ್​​ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸಾವು

ಮೈಸೂರು ಜಿಲ್ಲೆ ನಂಜನಗೂಡು ವಿದ್ಯಾಪೀಠದ ಬಳಿ ಕಾರು, ಬೈಕ್​​ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದಾರೆ. ರಸ್ತೆ ಅಪಘಾತದಲ್ಲಿ ಮಹೇಶ್, ಮಹದೇವ ಮೃತ ದುರ್ದೈವಿಗಳು. ಇವರು ಚಾಮರಾಜನಗರ ತಾಲೂಕಿನ ಹೆಗ್ಗೊಟರು ನಿವಾಸಿಗಳು. ಅಪಘಾತದ ಬಳಿಕ ಕಾರು ಚಾಲಕ ಪೊಲೀಸರಿಗೆ ಶರಣಾಗಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada