ಭಾರೀ ಮಳೆಯಲ್ಲೇ ಕೆಟ್ಟು ನಿಂತ ಮುಂಬೈ ಮೋನೋರೈಲು; ಕಂಗಾಲಾದ 500ಕ್ಕೂ ಹೆಚ್ಚು ಪ್ರಯಾಣಿಕರು
ಭಾರೀ ಮಳೆಯಿಂದಾಗಿ ಮುಂಬೈನಲ್ಲಿ ಮೋನೋರೈಲು ಸೇವೆ ಸ್ಥಗಿತಗೊಂಡಿತು. ಧಾರಾಕಾರ ಮಳೆಯ ನಡುವೆ ಮುಂಬೈ ಮೋನೋರೈಲು ರೈಲು ಎರಡು ನಿಲ್ದಾಣಗಳ ನಡುವೆ ನಿಂತ ಕಾರಣದಿಂದ 500ಕ್ಕೂ ಹೆಚ್ಚು ಪ್ರಯಾಣಿಕರು ರೈಲಿನೊಳಗೆ ಸಿಕ್ಕಿಹಾಕಿಕೊಂಡರು. ಎತ್ತರದ ಹಳಿಯಲ್ಲಿ ಚಲಿಸುವ ರೈಲು 2 ಗಂಟೆಗಳಿಗೂ ಹೆಚ್ಚು ಕಾಲ ಸಿಲುಕಿಕೊಂಡಿತ್ತು. ವಿದ್ಯುತ್ ಸರಬರಾಜು ಸಮಸ್ಯೆಯಿಂದ ರೈಲು ಸಿಲುಕಿಕೊಂಡಿತ್ತು. ಅಗ್ನಿಶಾಮಕ ದಳ ಮತ್ತು ರಕ್ಷಣಾ ಅಧಿಕಾರಿಗಳು ಕ್ರೇನ್‌ಗಳನ್ನು ಬಳಸಿ ಪ್ರಯಾಣಿಕರನ್ನು ಸ್ಥಳಾಂತರಿಸಲು ರಕ್ಷಣಾ ಕಾರ್ಯಾಚರಣೆ ನಡೆಸಿದರು.
ಮುಂಬೈ, ಆಗಸ್ಟ್ 19: ಮಹಾರಾಷ್ಟ್ರದ ಮುಂಬೈನಲ್ಲಿ ಭಾರೀ ಮಳೆಯಾಗುತ್ತಿದೆ. ಇಲ್ಲಿನ ಚೆಂಬೂರು ಮತ್ತು ಭಕ್ತಿ ಪಾರ್ಕ್ ನಡುವೆ ಭಾರೀ ಮಳೆಯಿಂದಾಗಿ ಮುಂಬೈನಲ್ಲಿ (Mumbai Rains) ಮೋನೋರೈಲು ಸೇವೆ ಸ್ಥಗಿತಗೊಂಡಿತು. ಧಾರಾಕಾರ ಮಳೆಯ ನಡುವೆ ಮುಂಬೈ ಮೋನೋರೈಲು ರೈಲು ಎರಡು ನಿಲ್ದಾಣಗಳ ನಡುವೆ ನಿಂತ ಕಾರಣದಿಂದ 500ಕ್ಕೂ ಹೆಚ್ಚು ಪ್ರಯಾಣಿಕರು ರೈಲಿನೊಳಗೆ ಸಿಕ್ಕಿಹಾಕಿಕೊಂಡರು. ಎತ್ತರದ ಹಳಿಯಲ್ಲಿ ಚಲಿಸುವ ರೈಲು 2 ಗಂಟೆಗಳಿಗೂ ಹೆಚ್ಚು ಕಾಲ ಸಿಲುಕಿಕೊಂಡಿತ್ತು. ವಿದ್ಯುತ್ ಸರಬರಾಜು ಸಮಸ್ಯೆಯಿಂದ ರೈಲು ಸಿಲುಕಿಕೊಂಡಿತ್ತು. ಅಗ್ನಿಶಾಮಕ ದಳ ಮತ್ತು ರಕ್ಷಣಾ ಅಧಿಕಾರಿಗಳು ಕ್ರೇನ್‌ಗಳನ್ನು ಬಳಸಿ ಪ್ರಯಾಣಿಕರನ್ನು ಸ್ಥಳಾಂತರಿಸಲು ರಕ್ಷಣಾ ಕಾರ್ಯಾಚರಣೆ ನಡೆಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ