Video: ಕೇವಲ 180 ಮೀಟರ್​​ ದೂರಕ್ಕೆ ಓಲಾ ಬೈಕ್ ಬುಕ್ ಮಾಡಿದ ಯುವತಿ, ಕಾರಣವೇನು?

Updated on: Jun 08, 2025 | 8:49 AM

ಈ ತಂತ್ರಜ್ಞಾನ ಯುಗದಲ್ಲಿ ಜನರು ಹೇಗೆ ಇದನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಇಲ್ಲಿದೆ. ಸಾಮಾನ್ಯವಾಗಿ ಯಾವುದೇ ಕೆಲಸದ ನಿಮಿತ್ತ ಹೊರ ಹೋಗಬೇಕಿದ್ದರೆ ಒಂದೋ ಸ್ವಂತ ವಾಹನವಿಲ್ಲದಿದ್ದರೆ ಮತ್ತೊಂದು ಯಾರು ಓಡಿಸುತ್ತಾರೆ ಆರಾಮವಾಗಿ ಬಾಡಿಗೆ ವಾಹನದಲ್ಲಿ ಕುಳಿತು ಹೋಗಬಹುದು ಎನ್ನುವ ಕಾರಣಕ್ಕೋ ಓಲಾ, ಊಬರ್​ನಂತರ ಆ್ಯಪ್​ಗಳನ್ನು ಬಳಸುತ್ತಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಯುವತಿಯೊಬ್ಬಳು ಕೇವಲ 180 ಮೀಟರ್ ದೂರದ ಪ್ರಯಾಣಕ್ಕೆ ಓಲಾ ಬೈಕ್ ಬುಕ್ ಮಾಡಿದ್ದಾರೆ. ಆದರೆ ಕಾರಣ ಹಾಸ್ಯದಾಯಕವಾಗಿದೆ. ಅವರು ಹೋಗುವ ದಾರಿಯಲ್ಲಿ ಬೀದಿನಾಯಿಗಳ ಕಾಟ ಹೆಚ್ಚಿದ್ದ ಕಾರಣ ಮನೆಯ ಹತ್ತಿರ ಬಂದ ಬಳಿಕ ಓಲಾ ಬೈಕ್ ಬುಕ್ ಮಾಡಿದ್ದಾರೆ. ಓಲಾ ಬೈಕ್ ಚಾಲಕ ಈ ರೈಡಿನ ವ್ಲಾಗ್ ಮಾಡಿದ್ದಾರೆ.

ಆಕೆ ಪಾವತಿಸಿದ್ದು ಕೇವಲ 19 ರೂ. ಮಾತ್ರ. ಈ ವೀಡಿಯೊ ಇಲ್ಲಿಯವರೆಗೆ 2.8 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳು ಮತ್ತು 72 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿದೆ. ಇನ್​​ಸ್ಟಾಗ್ರಾಂನಲ್ಲಿ @rohitvlogstar ಖಾತೆಯಿಂದ ಈ ವಿಡಿಯೋ ಹಂಚಿಕೊಳ್ಳಲಾಗಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Jun 08, 2025 08:47 AM
Follow Us
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More