Video: ಮೇಡಂ ಅರ್ಜೆಂಟ್ ಕಾಲ್ ಮಾಡಬೇಕಿತ್ತು ಎಂದು ಫೋನ್​​​ ಕೇಳಿ ಈ ವ್ಯಕ್ತಿ ಮಾಡಿದ್ದೇನು ನೋಡಿ?

Video: ಮೇಡಂ ಅರ್ಜೆಂಟ್ ಕಾಲ್ ಮಾಡಬೇಕಿತ್ತು ಎಂದು ಫೋನ್​​​ ಕೇಳಿ ಈ ವ್ಯಕ್ತಿ ಮಾಡಿದ್ದೇನು ನೋಡಿ?

ಅಕ್ಷತಾ ವರ್ಕಾಡಿ
|

Updated on: Aug 21, 2024 | 10:08 AM

ಫೋನ್​ ಕಳೆದುಕೊಂಡಿದ್ದೀನಿ, ತುರ್ತಾಗಿ ಫೋನ್ ಮಾಡಬೇಕಿತ್ತು ಎಂದು ಪೆಟ್ರೋಲ್ ಬಂಕ್‌ನ ಮಹಿಳಾ ಸಿಬ್ಬಂದಿ ಬಳಿ ಕೇಳಿದ್ದಾನೆ. ಅಪರಿಚಿತರಾಗಿದ್ದರೂ ಕೂಡ ಮಹಿಳೆ ಆತನಿಗೆ ಫೋನ್​ ಕೊಟ್ಟಿದ್ದಾಳೆ. ಸ್ವಲ್ಪ ಸಮಯದ ವರೆಗೆ ಫೋನಿನಲ್ಲಿ ಮಾತನಾಡುತ್ತಿದ್ದಂತೆ ನಟಿಸಿ ಬಳಿಕ ಅಲ್ಲಿಂದ ಫೋನ್ ಜೊತೆ​ ಪಾರಾಗಿದ್ದಾನೆ. ಘಟನೆಗೆ ಸಂಬಂಧಿಸಿದ ಸಂಪೂರ್ಣ ದೃಶ್ಯ ಪೆಟ್ರೋಲ್ ಬಂಕ್‌ನಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಪಾಡೇರು (ಆಂಧ್ರ ಪ್ರದೇಶ): ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರ ಬಳಿ ಅಪರಿಚಿತ ವ್ಯಕ್ತಿಯೊಬ್ಬರು ಬಂದು ಅರ್ಜೆಂಟ್ ಕಾಲ್ ಮಾಡಲು ಫೋನ್ ಕೇಳಿದ್ದು, ಬಳಿಕ ಆತ ಫೋನ್​​ ಜೊತೆ ಪರಾರಿಯಾಗಿರುವ ಘಟನೆ ಆಂಧ್ರ ಪ್ರದೇಶದ ಪಾಡೇರು ಬಳಿಯ ಪೆಟ್ರೋಲ್ ಬಂಕ್‌ನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದ ಸಂಪೂರ್ಣ ದೃಶ್ಯ ಪೆಟ್ರೋಲ್ ಬಂಕ್‌ನಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ.

ಫೋನ್​ ಕಳೆದುಕೊಂಡಿದ್ದೀನಿ, ತುರ್ತಾಗಿ ಫೋನ್ ಮಾಡಬೇಕಿತ್ತು ಎಂದು ಪೆಟ್ರೋಲ್ ಬಂಕ್‌ನ ಮಹಿಳಾ ಸಿಬ್ಬಂದಿ ಬಳಿ ಕೇಳಿದ್ದಾನೆ. ಅಪರಿಚಿತರಾಗಿದ್ದರೂ ಕೂಡ ಮಹಿಳೆ ಆತನಿಗೆ ಫೋನ್​ ಕೊಟ್ಟಿದ್ದಾಳೆ. ಬಳಿಕ ಬೇರೊಂದು ಗಾಡಿಗೆ ಮಹಿಳೆ ಪೆಟ್ರೋಲ್​​​​ ತುಂಬಿಸುತ್ತಿರುವ ವೇಳೆ ವ್ಯಕ್ತಿ ಅಲ್ಲಿಂದ ಪಾರಾಗಿದ್ದಾನೆ. ಸದ್ಯ ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು ಸಿಸಿಟಿವಿ ದೃಶ್ಯ ಬಳಸಿ ತನಿಖೆ ಪ್ರಾರಂಭಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಇದನ್ನೂ ಓದಿ: Video: ಪಿಸ್ತೂಲ್, ಚಾಕು ಹಿಡಿದು ಚಿನ್ನ ಕದಿಯಲು ಬಂದ ನಾಲ್ವರನ್ನು ಕೋಲಿನಿಂದ ಹೊಡೆದು ಓಡಿಸಿದ ಮಾಲೀಕ