RCB vs CSK: ಕಿಂಗ್ ಕೊಹ್ಲಿಯ ನೋ ಲುಕ್ ಸಿಕ್ಸರ್ಗೆ ಹುಚ್ಚೆದ್ದು ಕುಣಿದ ಫ್ಯಾನ್ಸ್; ವಿಡಿಯೋ
Virat Kohli's No-Look Six: Latest ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ಮತ್ತು ಸಿಎಸ್ಕೆ ನಡುವೆ ಐಪಿಎಲ್ ಪಂದ್ಯ ನಡೆಯುತ್ತಿದೆ. ಟಾಸ್ ಗೆದ್ದ ಸಿಎಸ್ಕೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಆರ್ಸಿಬಿಗೆ ವಿರಾಟ್ ಕೊಹ್ಲಿ 18 ಎಸೆತಗಳಲ್ಲಿ 28 ರನ್ (1 ಸಿಕ್ಸರ್, 2 ಬೌಂಡರಿ) ಗಳಿಸಿ ಅವಶ್ಯಕ ಆರಂಭ ಒದಗಿಸಿದರು. ಆರಂಭಿಕ ಓವರ್ಗಳಲ್ಲಿ ನಿಧಾನಗತಿಯ ಔಟ್‌ಫೀಲ್ಡ್‌ನ ಸವಾಲನ್ನು ಎದುರಿಸಿ, ಕೊಹ್ಲಿ ಇನ್ನಿಂಗ್ಸ್‌ನ ಮೊದಲ ಸಿಕ್ಸರ್ ಸಿಡಿಸಿ ಅಬ್ಬರಿಸಿದರು.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ನ ಹೈವೋಲ್ಟೇಜ್ ಕದನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್ಕೆ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿರುವ ಆರ್ಸಿಬಿಗೆ ಸ್ಫೋಟಕವಲ್ಲದಿದ್ದರೂ ಅವಶ್ಯಕ ಆರಂಭ ಸಿಕ್ಕಿದೆ. ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ ಉಪಯುಕ್ತ ಇನ್ನಿಂಗ್ಸ್ ಆಡುವ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು.
ಆರಂಭಿಕರಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ಗೆ ಮೊದಲ ಮೂರು ಓವರ್ಗಳಲ್ಲಿ ಯಾವುದೇ ಬೌಂಡರಿ ಗಳಿಸಲು ಸಾಧ್ಯವಾಗಲಿಲ್ಲ. ಇವರಿಬ್ಬರು ಬೌಂಡರಿಗಳಿಗೆ ಪ್ರಯತ್ನಿಸಿದರಾದರೂ ಔಟ್ಫಿಲ್ಡ್ ಸ್ಲೋ ಇದ್ದ ಕಾರಣ ಬಾಲ್ ನೆಲಕ್ಕೆ ಬಿದ್ದ ಕೂಡಲೇ ಅಲ್ಲಿಯೇ ಉಳಿಯುತ್ತಿತ್ತು. ಹೀಗಾಗಿ ಕೆಲವು ಬೌಂಡರಿ ಅವಕಾಶಗಳು ಕೈತಪ್ಪಿದವು. ಆದಾಗ್ಯೂ ಇನ್ನಿಂಗ್ಸ್‌ನ 4ನೇ ಓವರ್ನಲ್ಲಿ ಮೈಚಳಿ ಬಿಟ್ಟು ಬ್ಯಾಟ್ ಬೀಸಿದ ಕೊಹ್ಲಿ, ಮ್ಯಾಟ್ ಹೆನ್ರಿ ಬೌಲ್ ಮಾಡಿದ ಈ ಓವರ್ನ ಎರಡನೇ ಎಸೆತವನ್ನು ಸಿಕ್ಸರ್ಗಟ್ಟಿದರು.
ಕೊಹ್ಲಿಯ ಈ ನೋ ಲುಕ್ ಸಿಕ್ಸರ್ಗೆ ಅಭಿಮಾನಿಗಳು ಹುಚ್ಚೆದ್ದು ಕುಣಿದರು. ಇದು ಆರ್ಸಿಬಿ ಇನ್ನಿಂಗ್ಸ್‌ನ ಮೊದಲ ಸಿಕ್ಸರ್ ಆಗಿತ್ತು. ಅದೇ ಓವರ್ನ ಐದನೇ ಎಸೆತದಲ್ಲಿ ಕೊಹ್ಲಿ ಒಂದು ಬೌಂಡರಿ ಕೂಡ ಬಾರಿಸಿದರು. ಐದನೇ ಓವರ್ನಲ್ಲೂ ಒಂದು ಬೌಂಡರಿ ಬಾರಿಸಿದ ಕೊಹ್ಲಿ ಅದೇ ಓವರ್ನಲ್ಲಿ ಮತ್ತೊಂದು ದೊಡ್ಡ ಹೊಡೆತಕ್ಕೆ ಯತ್ನಿಸಿ ಔಟಾದರು. ಕೊಹ್ಲಿ ತಮ್ಮ ಇನ್ನಿಂಗ್ಸ್ನಲ್ಲಿ 18 ಎಸೆತಗಳನ್ನು ಎದುರಿಸಿ 2 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 28 ರನ್ ಬಾರಿಸಿ ಔಟಾದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಮದುವೆ ಬಳಿಕ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಚಿಕ್ಕಣ್ಣ, ಪಾವನಾ ಭೇಟಿ
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್ ಅಪ್ಡೇಟ್:ಪರಿಷ್ಕರಣೆಗೆ ಗಡುವು ವಿಸ್ತರಣೆ
ಉಜ್ಬೆಕಿಸ್ತಾನ್ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ

