AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SA: 4,6,6,4.. ಒಂದೇ ಓವರ್​ನಲ್ಲಿ ಕಿಂಗ್ ಕೊಹ್ಲಿಯ ರೌದ್ರಾವತಾರ ಹೇಗಿತ್ತು ನೋಡಿ

IND vs SA: 4,6,6,4.. ಒಂದೇ ಓವರ್​ನಲ್ಲಿ ಕಿಂಗ್ ಕೊಹ್ಲಿಯ ರೌದ್ರಾವತಾರ ಹೇಗಿತ್ತು ನೋಡಿ

ಪೃಥ್ವಿಶಂಕರ
|

Updated on: Nov 30, 2025 | 5:32 PM

Share

Virat Kohli Aggressive Batting: ಶತಕ ಬಾರಿಸಿದ ನಂತರ ವಿರಾಟ್ ಕೊಹ್ಲಿ ತಮ್ಮ ಬ್ಯಾಟಿಂಗ್ ಗೇರ್ ಬದಲಿಸಿ ಆಫ್ರಿಕಾ ಸ್ಪಿನ್ನರ್ ಸುಬ್ರಯೇನ್ ಓವರ್‌ನಲ್ಲಿ ಅಬ್ಬರಿಸಿದರು. 2 ಬೌಂಡರಿ ಹಾಗೂ 2 ಸಿಕ್ಸರ್‌ಗಳ ಸಹಿತ ಒಟ್ಟು 21 ರನ್ ಗಳಿಸಿದರು. ಫ್ಲಿಕ್ ಶಾಟ್, ಕೌ ಕಾರ್ನರ್, ಲಾಂಗ್-ಆನ್ ಮತ್ತು ಎಕ್ಸ್‌ಟ್ರಾ ಕವರ್ ಮೂಲಕ ವಿರಾಟ್ ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಇದು ಕೊಹ್ಲಿಯ ಆಕ್ರಮಣಕಾರಿ ಆಟದ ಉತ್ತಮ ಉದಾಹರಣೆ.

ರಾಂಚಿ ಮೈದಾನದಲ್ಲಿ ರಾಜನಂತೆ ರಾರಾಜಿಸಿದ ವಿಶ್ವ ಕ್ರಿಕೆಟ್​ನ ರನ್ ಮಷಿನ್ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿದರು. ಕೇವಲ 102 ಎಸೆತಗಳಲ್ಲಿ ತಮ್ಮ 52 ನೇ ಏಕದಿನ ಶತಕ ಬಾರಿಸುವ ಮೂಲಕ ಕೊಹ್ಲಿ ಇತಿಹಾಸವನ್ನು ಸೃಷ್ಟಿಸಿದರು. ಈ ಶತಕದ ಮೂಲಕ ಕೊಹ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಂದೇ ಸ್ವರೂಪದಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಆಟಗಾರನೆಂಬ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ. ಸಚಿನ್ ತಮ್ಮ ವೃತ್ತಿಜೀವನದಲ್ಲಿ ಟೆಸ್ಟ್ ಸ್ವರೂಪದಲ್ಲಿ 51 ಶತಕಗಳನ್ನು ಬಾರಿಸಿದ್ದರು.

ಶತಕ ಬಾರಿಸಿದ ಬಳಿಕ ತಮ್ಮ ಬ್ಯಾಟಿಂಗ್ ಗೇರ್ ಬದಲಿಸಿದ ವಿರಾಟ್, ಆಫ್ರಿಕಾ ಸ್ಪಿನ್ನರ್ ಪ್ರೆನೆಲನ್ ಸುಬ್ರಯೇನ್ ಅವರ ಓವರ್‌ನಲ್ಲಿ ಸತತ ನಾಲ್ಕು ಬೌಂಡರಿಗಳನ್ನು ಬಾರಿಸಿದರು, ಅದರಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್ ಸೇರಿದ್ದವು. ಆ ಓವರ್ ಒಟ್ಟು 21 ರನ್‌ಗಳು ಬಂದವು. ಓವರ್​ನ ಮೂರನೇ ಎಸೆತವನ್ನು ಫ್ಲಿಕ್ ಶಾಟ್ ಮೂಲಕ ಬೌಂಡರಿಗಟ್ಟಿದ ಕೊಹ್ಲಿ, ಆ ನಂತರ ಕೌ ಕಾರ್ನರ್ ಹಾಗೂ ಲಾಂಗ್-ಆನ್​ ಮೇಲೆ ಸತತ 2 ಸಿಕ್ಸರ್‌ಗಳನ್ನು ಬಾರಿಸಿದರು. ಕೊನೆಯ ಎಸೆತವನ್ನು ಎಕ್ಸ್‌ಟ್ರಾ ಕವರ್ ಓವರ್‌ನಲ್ಲಿ ಫೋರ್ ಬಾರಿಸುವ ಮೂಲಕ ಕೊಹ್ಲಿ ಓವರ್​ಗೆ ಅಂತ್ಯ ಹಾಡಿದರು.