ಥ್ಯಾಂಕ್ಯೂ… ನಿವೃತ್ತಿಯ ಸುಳಿವು ನೀಡಿದ ವಿರಾಟ್ ಕೊಹ್ಲಿ
Australia vs India, 2nd ODI: ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ರೋಹಿತ್ ಶರ್ಮಾ 73 ರನ್ ಬಾರಿಸಿ ಮಿಂಚಿದರು. ಹಾಗೆಯೇ ಶ್ರೇಯಸ್ ಅಯ್ಯರ್ 61 ರನ್ಗಳ ಕೊಡುಗೆ ನೀಡಿದರು. ಈ ಭರ್ಜರಿ ಶತಕಗಳ ನೆರವಿನೊಂದಿಗೆ ಟೀಮ್ ಇಂಡಿಯಾ ಸ್ಟ್ರೇಲಿಯಾಗೆ ಸ್ಪರ್ಧಾತ್ಮಕ ಗುರಿ ನೀಡಿದೆ,
ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ಗೆ ಗುಡ್ ಬೈ ಹೇಳಲಿದ್ದಾರಾ? ಇಂತಹ ಪ್ರಶ್ನೆಗೆ ಕಾರಣ ಕೊಹ್ಲಿ ಥ್ಯಾಂಕ್ಯೂನೊಂದಿಗೆ ಹೆಜ್ಜೆ ಹಾಕುರುವುದು. ಹೌದು, ಅಡಿಲೇಡ್ ಮೈದಾನದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾಗಿದ್ದರು.
ಇತ್ತ ಶೂನ್ಯದೊಂದಿಗೆ ಪೆವಿಲಿಯನ್ ಕಡೆ ಭಾರದ ಹೆಜ್ಜೆ ಹಾಕಿದ ವಿರಾಟ್ ಕೊಹ್ಲಿಗೆ ಪ್ರೇಕ್ಷಕರು ಎದ್ದು ನಿಂತು ಬೀಳ್ಕೊಟ್ಟರು. ಇದೇ ವೇಳೆ ಕೊಹ್ಲಿಯು ಕೈ ಸನ್ನೆ ಮೂಲಕ ಧನ್ಯವಾದಗಳನ್ನು ತಿಳಿಸಿದ್ದಾರೆ.
ಈ ಧನ್ಯವಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಕಿಂಗ್ ಕೊಹ್ಲಿ ಶೀಘ್ರದಲ್ಲೇ ನಿವೃತ್ತಿ ಘೋಷಿಸಲಿದ್ದಾರೆ ಎಂಬ ಸುದ್ದಿಗಳು ಹರಿದಾಡಲಾರಂಭಿಸಿದೆ.
ಅದರಲ್ಲೂ ಇದು ವಿರಾಟ್ ಕೊಹ್ಲಿಗೆ ಕೊನೆಯ ಆಸ್ಟ್ರೇಲಿಯಾ ಸರಣಿ. ಹೀಗಾಗಿಯೇ ಅಡಿಲೇಡ್ ಪ್ರೇಕ್ಷಕರು ಕೊಹ್ಲಿಗೆ ಸ್ಟ್ಯಾಂಡಿಂಗ್ ಓವೇಶನ್ ನೀಡಿದ್ದಾರೆ. ಇತ್ತ ಮೊದಲೆರಡು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿರುವ ಕಾರಣ ಕೊಹ್ಲಿಯನ್ನು ಮುಂಬರುವ ಸರಣಿಗೆ ಆಯ್ಕೆ ಮಾಡುವ ಸಾಧ್ಯತೆ ಕೂಡ ಕ್ಷೀಣಿಸಿದೆ. ಹೀಗಾಗಿ ಆಸ್ಟ್ರೇಲಿಯಾ ಪ್ರವಾಸದ ಬಳಿಕ ಕಿಂಗ್ ಕೊಹ್ಲಿ ನಿವೃತ್ತಿ ಘೋಷಿಸಿದರೂ ಅಚ್ಚರಿಪಡಬೇಕಿಲ್ಲ.
ಇನ್ನು ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ರೋಹಿತ್ ಶರ್ಮಾ 73 ರನ್ ಬಾರಿಸಿ ಮಿಂಚಿದರು. ಹಾಗೆಯೇ ಶ್ರೇಯಸ್ ಅಯ್ಯರ್ 61 ರನ್ಗಳ ಕೊಡುಗೆ ನೀಡಿದರು. ಈ ಅರ್ಧಶತಕಗಳ ನೆರವಿನೊಂದಿಗೆ ಟೀಮ್ ಇಂಡಿಯಾ 50 ಓವರ್ಗಳಲ್ಲಿ 250 ರನ್ ಕಲೆಹಾಕಿದೆ.

