ವೈ ಸರಣಿಯ ವೈ20ಟಿ ಫೋನ್​ ಭಾರತದಲ್ಲಿ ಲಾಂಚ್ ಮಾಡಿದ ವಿವೋ, ಬೆಲೆ ರೂ. 15,490 ರಿಂದ ಆರಂಭ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 13, 2021 | 9:13 PM

ವಿವೋ ವೈ 20 ಟಿ ಹಿಂದಿನ ಕೆಮೆರಾ ಸೆಟಪ್ ಆಟೋ ಫೋಕಸ್ ಹೊಂದಿದೆ. ಇದು ಸೆಲ್ಫಿಗಳಿಗಾಗಿ ಸಿಂಗಲ್ ಫ್ರಂಟ್ ಕೆಮೆರಾ ಸೆಟಪ್ ಹೊಂದಿದ್ದು, ಎಫ್/1.8 ಅಪರ್ಚರ್ ಹೊಂದಿರುವ 8 ಮೆಗಾ ಪಿಕ್ಸೆಲ್ ಸೆನ್ಸರ್ ಹೊಂದಿದೆ.

ಇಂಡಿಯನ್ ಪ್ರಿಮೀಯರ್ ಲೀಗ್ ಟೂರ್ನಿಯನ್ನು ಪ್ರಾಯೋಜಿಸುತ್ತಿರುವ ಚೀನಾದ ವಿವೋ ಮೊಬೈಲ್ ಕಂಪನಿಯು ಸೋಮವಾರದಂದು ಭಾರತದಲ್ಲಿ ತನ್ನ ಹೊಸ ವೈ20ಟಿ ಪೋನ್ ಲಾಂಚ್ ಮಾಡಿದೆ. 6.51 ಇಂಚಿನ ಟಚ್ ಸ್ಕ್ರೀನ್ ಹೊಂದಿರುವ ಈ ಫೋನ್ 720X1, 600 ಮೆಗಾಪಿಕ್ಸೆಲ್ ರೆಸ್ಯೂಲ್ಯೂಷನ್ ಮತ್ತು 6ಜಿಬಿ ರ‍್ಯಾಮ್ ನೊಂದಿಗೆ ಬರುತ್ತದೆ. ಸಾಮಾನ್ಯವಾಗಿ ಎಲ್ಲ ವಿವೋ ಫೋನ್ಗಳು ಬೇಗ ಚಾರ್ಜಿಂಗ್ ಆಗುವ ಹಾಗೆ, ವಿವೊ ವೈ20ಟಿ ಸಹ ಕ್ಷಿಪ್ರ ಗತಿಯಲ್ಲಿ ಚಾರ್ಜ್ ಆಗುತ್ತದೆ.
ಕೆಮೆರಾಗಳಿಗೆ ಸಂಬಂಧಿಸಿದಂತೆ ಹೇಳುವುದಾದರೆ, ವಿವೋ ವೈ 20 ಟಿ ಹಿಂಭಾಗದಲ್ಲಿ 13 ಮೆಗಾಪಿಕ್ಸೆಲ್ ಪ್ರಾಥಮಿಕ ಕೆಮೆರಾವನ್ನು ಒಳಗೊಂಡಿರುವ ಟ್ರಿಪಲ್ ಕೆಮೆರಾ ಸೆಟಪ್ ಅನ್ನು ಎಫ್/2.2 ಅಪರ್ಚರ್ ಹೊಂದಿದೆ; ಎಫ್/2.4 ಅಪರ್ಚರ್ ಹೊಂದಿರುವ 2 ಮೆಗಾಪಿಕ್ಸೆಲ್ ಕೆಮೆರಾ, ಮತ್ತು ಎಫ್/2.4 ಅಪರ್ಚರ್ ಹೊಂದಿರುವ 2 ಮೆಗಾಪಿಕ್ಸೆಲ್ ಕೆಮೆರಾ.

ವಿವೋ ವೈ 20 ಟಿ ಹಿಂದಿನ ಕೆಮೆರಾ ಸೆಟಪ್ ಆಟೋಫೋಕಸ್ ಹೊಂದಿದೆ. ಇದು ಸೆಲ್ಫಿಗಳಿಗಾಗಿ ಸಿಂಗಲ್ ಫ್ರಂಟ್ ಕೆಮೆರಾ ಸೆಟಪ್ ಹೊಂದಿದ್ದು, ಎಫ್/1.8 ಅಪರ್ಚರ್ ಹೊಂದಿರುವ 8 ಮೆಗಾಪಿಕ್ಸೆಲ್ ಸೆನ್ಸರ್ ಹೊಂದಿದೆ. ಮುಂಭಾಗದ ಕೆಮೆರಾ ಸಹ ಆಟೋಫೋಕಸ್ ಅನ್ನು ಒಳಗೊಂಡಿದೆ.

ವಿವೋ ವೈ 20 ಟಿ ಡ್ಯುಯಲ್ ಸಿಮ್ (ಜಿಎಸ್‌ಎಂ ಮತ್ತು ಜಿಎಸ್‌ಎಂ) ಮೊಬೈಲ್ ಆಗಿದ್ದು ಅದು ನ್ಯಾನೋ-ಸಿಮ್ ಮತ್ತು ನ್ಯಾನೋ-ಸಿಮ್ ಕಾರ್ಡ್‌ಗಳನ್ನು ಅಂಗೀಕರಿಸುತ್ತದೆ. ವಿವೋ ವೈ20ಟಿ 164.41 x 76.32 x 8.41 ಎಮ್ ಎಮ್ (ಎತ್ತರ x ಅಗಲ x ದಪ್ಪ) ಮತ್ತು ಕೇವಲ 192 ಗ್ರಾಂ ತೂಗುತ್ತದೆ.

ಇದನ್ನು ಅಬ್ಸಿಡಿಯನ್ ಕಪ್ಪು ಮತ್ತು ಪ್ಯೂರಿಸ್ಟ್ ನೀಲಿ ಬಣ್ಣಗಳಲ್ಲಿ ಬಿಡುಗಡೆ ಮಾಡಲಾಗಿದ್ದು ಫೋನಿನ ದೇಹ ಪ್ಲಾಸ್ಟಿಕ್ ನಿಂದ ಮಾಡಲಾಗಿದೆ.

ಅಂದಹಾಗೆ, ನಾವು ಫೋನಿನ ಬೆಲೆ ನಿಮಗೆ ತಿಳಿಸಲಿಲ್ಲ. ಭಾರತದಲ್ಲಿ ವೈ20ಟಿ ಬೆಲೆ ರೂ.15,490 ರಿಂದ ಆರಂಭವಾಗುತ್ತದೆ.

ಇದನ್ನೂ ಓದಿ:  Viral Video: ಚುರುಕಾದ ಶ್ವಾನದ ವಿಡಿಯೋ ಹಂಚಿಕೊಂಡು ಬದುಕಿನ ಪಾಠ ಹೇಳಿದ ಆನಂದ್ ಮಹೀಂದ್ರಾ; ವಿಡಿಯೋ ನೋಡಿ