ಆದಿಚುಂಚನಗಿರಿಯ ಒಕ್ಕಲಿಗ ವಧು-ವರರ ಸಮಾವೇಶದಲ್ಲಿ ಒಬ್ಬ ಯುವತಿಗೆ 50 ಯುವಕರ ಅನುಪಾತದಲ್ಲಿ ಅರ್ಜಿಗಳು!

ಆದಿಚುಂಚನಗಿರಿಯ ಒಕ್ಕಲಿಗ ವಧು-ವರರ ಸಮಾವೇಶದಲ್ಲಿ ಒಬ್ಬ ಯುವತಿಗೆ 50 ಯುವಕರ ಅನುಪಾತದಲ್ಲಿ ಅರ್ಜಿಗಳು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Nov 14, 2022 | 1:56 PM

ರಾಜ್ಯದ ಪ್ರಮುಖ ಸಮುದಾಯಗಳಲ್ಲಿ ಒಂದಾಗಿರುವ ಒಕ್ಕಲಿಗ ಸಮುದಾಯದಲ್ಲೂ ಮದುವೆಗೆ ಅರ್ಹ ಯುವತಿಯರ ಸಮಸ್ಯೆ ಸೃಷ್ಟಿಯಾಗಿದೆಯೇ?

ಮಂಡ್ಯ: ನಮ್ಮಲ್ಲಿನ ಕೆಲ ಸಮುದಾಯಗಳಲ್ಲಿ ಮದುವೆಗೆ ಅರ್ಹರಾಗಿರುವ ಯುವತಿಯರ ಕೊರತೆಯಿದೆ ಎಂಬ ಸಂಗತಿ ನಮಗೆ ಗೊತ್ತಿದೆ. ಆದರೆ, ರಾಜ್ಯದ ಪ್ರಮುಖ ಸಮುದಾಯಗಳಲ್ಲಿ ಒಂದಾಗಿರುವ ಒಕ್ಕಲಿಗ (Vokkaliga) ಸಮುದಾಯದಲ್ಲೂ ಅಂಥ ಸಮಸ್ಯೆ ಸೃಷ್ಟಿಯಾಗಿದೆಯೇ? ಈ ದೃಶ್ಯವನ್ನು ನೋಡುತ್ತಿದ್ದರೆ ಹೌದೆನ್ನದೆ ವಿಧಿಯಿಲ್ಲ. ಮಂಡ್ಯದ ಆದಿಚುಂಚನಗಿರಿಯಲ್ಲಿ (Adichunchanagiri) ನಡೆಯುತ್ತಿರುವ ರಾಜ್ಯಮಟ್ಟದ ವಧು-ವರರ ಸಮಾವೇಶದಲ್ಲಿ (convention) ಮದುವೆಗೆ ಅರ್ಹರಿದ್ದ ಯುವತಿಯರ ಸಂಖ್ಯೆ 200. ಆದರೆ, ವಧು ಬೇಕೆಂದು ಅರ್ಜಿ ಸಲ್ಲಿಸಿದ ಯುವಕರ ಸಂಖ್ಯೆ 10,000 ಕ್ಕೂ ಹೆಚ್ಚಂತೆ! ಎಲ್ಲಿಯ 200 ಎಲ್ಲಿಯ 10,000 ಸ್ವಾಮಿ? ಇದು ಬಹಳ ಗಂಭೀರವಾದ ಸಂಗತಿ, ಸರ್ಕಾರ ಮತ್ತು ಸರ್ಕಾರಗಳು ಯೋಚಿಸಬೇಕು.

Published on: Nov 14, 2022 01:33 PM