ತುಮಕೂರು: ಖಾಲಿ ಕೋಳಿಗೂಡನ್ನು ಹೊಕ್ಕಿದ್ದ ಬೃಹತ್ ನಾಗರಹಾವಿನ ರಕ್ಷಣೆ!
ದಿಲಿಪ್ ಬಹಳ ಜಾಗರೂಕತೆಯಿಂದ ಹಾವನ್ನು ರಕ್ಷಿಸಿ ಸುರಕ್ಷಿತವಾದ ಸ್ಥಳಕ್ಕ ಅದನ್ನು ತೆಗೆದುಕೊಂಡು ಹೋಗಿ ಬಿಟ್ಟಿದ್ದಾರೆ.
ತುಮಕೂರು: ವಿಡಿಯೋದಲ್ಲಿ ನಿಮಗೆ ಕಾಣುತ್ತಿರುವುದು ಕಟ್ಟಿಗೆಯ ಕೋಳಿಗೂಡು ಅನ್ನೊದೇನೋ ಸರಿ, ಆದರೆ ಅಲ್ಲಿರುವ ವ್ಯಕ್ತಿ ಹಿಡಿಯಲು ಪ್ರಯತ್ನಿನಿಸುತ್ತಿರುವುದು ಕೋಳಿಯನ್ನಲ್ಲ (hen), ಒಂದು ಬೃಹತ್ ಗಾತ್ರದ ನಾಗರಹಾವನ್ನು (huge cobra)! ತುಮಕೂರು ತಾಲ್ಲೂಕಿನ ಕೋರಾ ಗ್ರಾಮದ ನಿವಾಸಿ ಕೃಷ್ಣಮೂರ್ತಿಯವರು ಮನೆ ಆವರಣದಲ್ಲಿರಿಸಿರುವ ಕೋಳಿ ಗೂಡಿನಲ್ಲಿ ಹಾವು ಸೇರಿಕೊಂಡಿದ್ದು ಕುಟುಂಬದವರ ಗಮನಕ್ಕೆ ಬಂದಾಗ ಅವರು ಆ ಭಾಗದ ಉರಗ ತಜ್ಞ ದಿಲಿಪ್ (Dilip) ಅವರಿಗೆ ಫೋನ್ ಮಾಡಿದ್ದಾರೆ. ದಿಲಿಪ್ ಬಹಳ ಜಾಗರೂಕತೆಯಿಂದ ಹಾವನ್ನು ರಕ್ಷಿಸಿ ಸುರಕ್ಷಿತವಾದ ಸ್ಥಳಕ್ಕ ಅದನ್ನು ತೆಗೆದುಕೊಂಡು ಹೋಗಿ ಬಿಟ್ಟಿದ್ದಾರೆ.
Latest Videos