ಇನ್ನೊಮ್ಮೆ ಬಿಜೆಪಿಗೆ ಮತ ಹಾಕಿ, ಅಸ್ಸಾಂನಿಂದ ನುಸುಳುಕೋರರನ್ನು ಹೊರಹಾಕುತ್ತೇವೆ; ಅಮಿತ್ ಶಾ

Updated on: Dec 29, 2025 | 9:21 PM

ಇನ್ನೂ 5 ವರ್ಷಗಳ ಕಾಲ ಬಿಜೆಪಿಗೆ ಮತ ನೀಡಿ ಗೆಲ್ಲಿಸಿದರೆ ಅಸ್ಸಾಂನೊಳಗೆ ಬರುವ ಪ್ರತಿಯೊಬ್ಬ ನುಸುಳುಕೋರರನ್ನು ನಾವು ಹೊರಹಾಕುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. "ಇನ್ನೂ 5 ವರ್ಷಗಳ ಕಾಲ ಬಿಜೆಪಿಗೆ ಮತ ನೀಡಿ, ನಾವು ಅಸ್ಸಾಂನಿಂದ ಮಾತ್ರವಲ್ಲದೆ ಇಡೀ ದೇಶದಿಂದಲೇ ಅಕ್ರಮ ನುಸುಳುವವರನ್ನು ಓಡಿಸುತ್ತೇವೆ. ನುಸುಳುಕೋರರು ಅತಿಕ್ರಮಿಸಿದ ಪ್ರತಿಯೊಂದು ಭೂಮಿಯನ್ನು ನಾವು ಮುಕ್ತಗೊಳಿಸುತ್ತೇವೆ" ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಗುವಾಹಟಿ, ಡಿಸೆಂಬರ್ 29: ಅಸ್ಸಾಂನಲ್ಲಿ ಇಂದು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಬಿಜೆಪಿಗೆ ಇನ್ನೂ 5 ವರ್ಷಗಳ ಅಧಿಕಾರವನ್ನು ನೀಡುವಂತೆ ಕೇಳಿಕೊಂಡರು. ಅಸ್ಸಾಂ ಮತ್ತು ದೇಶದ ಉಳಿದ ಭಾಗಗಳಿಂದ ಅಕ್ರಮ ನುಸುಳುಕೋರರನ್ನು ಹೊರಹಾಕಲು ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಬಹಳ ಅಗತ್ಯವಿದೆ ಎಂದು ಅವರು ಹೇಳಿದರು.

15ನೇ ಶತಮಾನದ ವೈಷ್ಣವ ಸಂತ-ಸುಧಾರಕ ಶ್ರೀಮಂತ ಶಂಕರದೇವ ಅವರ ಜನ್ಮಸ್ಥಳವನ್ನು ಜಾಗತಿಕ ಆಧ್ಯಾತ್ಮಿಕ ಕೇಂದ್ರವಾಗಿ ಪುನರಾಭಿವೃದ್ಧಿ ಮಾಡುವ ನಾಗಾಂವ್‌ನಲ್ಲಿ 200 ಕೋಟಿ ರೂ. ವೆಚ್ಚದ ಬಟದ್ರವ ಸಾಂಸ್ಕೃತಿಕ ಯೋಜನೆಯನ್ನು ಉದ್ಘಾಟಿಸಿ ಅಮಿತ್ ಶಾ ಈ ಹೇಳಿಕೆ ನೀಡಿದ್ದಾರೆ.

“ಇನ್ನೂ 5 ವರ್ಷಗಳ ಕಾಲ ಬಿಜೆಪಿಗೆ ಮತ ನೀಡಿ, ನಾವು ಅಸ್ಸಾಂನಿಂದ ಮಾತ್ರವಲ್ಲದೆ ಇಡೀ ದೇಶದಿಂದಲೇ ಅಕ್ರಮ ನುಸುಳುವವರನ್ನು ಓಡಿಸುತ್ತೇವೆ. ನುಸುಳುಕೋರರು ಅತಿಕ್ರಮಿಸಿದ ಪ್ರತಿಯೊಂದು ಭೂಮಿಯನ್ನು ನಾವು ಮುಕ್ತಗೊಳಿಸುತ್ತೇವೆ” ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ