ಮತದಾರರ ದತ್ತಾಂಶ ಕಳವು: ಚಿಲುಮೆ ಸಂಸ್ಥೆ ಸಿಬ್ಬಂದಿ ನಡೆಸಿದ ಅಕ್ರಮ ಸರ್ವೇ ಸಿಸಿಟಿವಿಗಳಲ್ಲಿ ಸೆರೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 19, 2022 | 1:34 PM

ಸರ್ವೇ ಮಾಡಲು ಬಂದ ಚಿಲುಮೆ ಸಂಸ್ಥೆಯ ಸಿಬ್ಬಂದಿಯ ಜೊತೆ ಬಸವನಗುಡಿಯ ಬಾಲಾಜಿ ಹೆಸರಿನ ನಿವಾಸಿ ಜೊತೆ ಜಗಳ ಮಾಡುತ್ತಿರುವುದು ಸಿಸಿಟಿಟಿ ಕೆಮೆರಾದಲ್ಲಿ ಸೆರೆಯಾಗಿದೆ.

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆದಿದೆ ಎಂದು ಆರೋಪಿಸಲಾಗಿರುವ ಮತದಾರರ ದತ್ತಾಂಶ ಕಳವು (Voter Data Theft) ಪ್ರಕರಣದಲ್ಲಿ ಚಿಲುಮೆ (Chilume) ಹೆಸರಿನ ಸಂಸ್ಥೆ ನಡೆಸಿದ ಅಕ್ರಮ ಸರ್ವೆ (Illegal survey) ಬೆಳಕಿಗೆ ಬಂದಿದೆ. ಸರ್ವೇ ಮಾಡಲು ಬಂದ ಸಂಸ್ಥೆಯ ಸಿಬ್ಬಂದಿಯ ಜೊತೆ ಬಸವನಗುಡಿಯ ಬಾಲಾಜಿ ಹೆಸರಿನ ನಿವಾಸಿ ಇದು ಅಕ್ರಮ ಅಂತ ನೀವು ಯಾರು ಅಂತ ಪ್ರಶ್ನಿಸಿ ಜಗಳ ಮಾಡುತ್ತಿರುವುದು ಸಿಸಿಟಿಟಿ ಕೆಮೆರಾದಲ್ಲಿ ಸೆರೆಯಾಗಿದೆ. ನಂತರ ಚಿಲುಮೆ ಸಂಸ್ಥೆಯ ಸಿಬ್ಬಂದಿ ಬೇರೆಯವರ ಮನೆಗಳಿಗೂ ವೋಟರ್ ಐಟಿ ವೆರಿಫಿಕೇಷನ್ ನೆಪದಲ್ಲಿ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿರುವ ದೃಶ್ಯ ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮತ್ತಷ್ಟು ವಿಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ