Delhi Assembly Polls: ಸಾಯಂಕಾಲದವರೆಗೆ ತಾಳ್ಮೆಯಿರಲಿ, ಅರವಿಂದ್ ಕೇಜ್ರಿವಾಲ್ 4 ನೇ ಬಾರಿ ಸಿಎಂ ಅಗಲಿದ್ದಾರೆ: ಅತಿಶಿ, ದೆಹಲಿ ಸಿಎಂ
ದೆಹಲಿಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬದಲಾವಣೆಯ ಗಾಳಿ ಬೀಸಿರುವುದು ಖಚಿತವಾಗಿದ್ದು 27 ವರ್ಷಗಳ ನಂತರ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಸ್ಪಷ್ಟವಾಗುತ್ತಿದೆ. ಆಮ್ ಆದ್ಮಿ ಪಾರ್ಟಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಮತ್ತು ಅರವಿಂದ್ ಕೇಜ್ರವಾಲ್ 4ನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾಗುವ ಕನಸು ನುಚ್ಚುನೂರಾಗುತ್ತಿದೆ. ಮುಖ್ಯಮಂತ್ರಿ ಈಗಲೂ ಆಶಾಭಾವನೆ ತಳೆದಿರುವುದು ಆಶ್ಚರ್ಯ ಮೂಡಿಸುತ್ತದೆ.
ದೆಹಲಿ: ದೆಹಲಿ ವಿಧಾನನಸಭಾ ಕ್ಷೇತ್ರದಲ್ಲಿ ಬಿಜೆಪಿ 50 ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೂ ಅಲ್ಲಿನ ಮುಖ್ಯಮಂತ್ರಿ ಅತಿಶಿ ಮರ್ಲೆನಾ ಅವರು ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಆದ್ಮಿ ಪಾರ್ಟಿ ನಿಚ್ಚಳ ಬಹುಮತದಿಂದ ಗೆಲುವು ಸಾಧಿಸಲಿದೆ ಮತ್ತು ಕೇಜ್ರಿವಾಲ್ 4 ನೇ ಬಾರಿಗೆ ಮುಖ್ಯಮಂತ್ರಿಯಾಗಲಿದ್ದಾರೆ ಎನ್ನುತ್ತಾರೆ. ಇದು ಒಳ್ಳೆಯತನ ಮತ್ತು ಕೆಟ್ಟತನ ನಡುವೆ ನಡೆಯುತ್ತಿರುವ ಯುದ್ಧವಾಗಿದೆ ಹಾಗೂ ದೆಹಲಿ ಜನರ ಮತ್ತು ಭಗವಂತನ ಆಶೀರ್ವಾದ ಸದಾ ತಮ್ಮ ಪಕ್ಷದ ಮೇಲಿದೆ, ಆಪ್ ರಚನೆಯಾದಾಗ ಯಾರೂ ಅದೊಂದು ಪ್ರಬಲ ರಾಜಕೀಯ ಪಕ್ಷವಾದೀತು ಅಂದುಕೊಂಡಿರಲಿಲ್ಲ, ಸಾಯಂಕಾಲದವರೆಗೆ ತಾಳ್ಮೆಯಿರಲಿ, ಎಲ್ಲವೂ ನಿಚ್ಚಳವಾಗಿ ಗೊತ್ತಾಗಲಿದೆ ಎಂದು ಅತಿಶಿ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ:
