ಹಬ್ಬದ ಸಂದರ್ಭದಲ್ಲಿ ವಾಹನ ಖರೀದಿದಾರರಿಗೆ ಶಾಕ್​! ಕಾರು, ಬೈಕ್ ಬೆಲೆಯಲ್ಲಿ ಏರಿಕೆ ಸಾಧ್ಯತೆ

Edited By:

Updated on: Mar 21, 2026 | 7:45 PM

ಯುದ್ಧದ ಪರಿಣಾಮವಾಗಿ ಯುಗಾದಿ-ರಂಜಾನ್ ವೇಳೆಗೆ ಕಾರು, ಬೈಕ್ ಖರೀದಿದಾರರಿಗೆ ಆಘಾತ ಕಾದಿದೆ. ಕಚ್ಚಾ ವಸ್ತುಗಳ ಕೊರತೆ, ಸಾರಿಗೆ ವೆಚ್ಚ ಹೆಚ್ಚಳದಿಂದ ಏಪ್ರಿಲ್ ಮೊದಲ ವಾರದಿಂದ ಆಟೋಮೊಬೈಲ್ ಬೆಲೆಗಳು 10-15% ಏರಿಕೆಯಾಗುವ ಸಾಧ್ಯತೆಯಿದೆ. ಪ್ರತಿ ಕಾರಿಗೆ ಕನಿಷ್ಠ 40-50 ಸಾವಿರ ರೂಪಾಯಿ ಹೆಚ್ಚಳ ನಿರೀಕ್ಷಿಸಲಾಗಿದೆ. ಹೋಟೆಲ್ ಉದ್ಯಮದಂತೆ ವಾಹನ ಕ್ಷೇತ್ರಕ್ಕೂ ಯುದ್ಧದ ಬಿಸಿ ತಟ್ಟಿದೆ.

ಬೆಂಗಳೂರು, ಮಾರ್ಚ್​​ 21: ಗಲ್ಫ್​ ರಾಷ್ಟ್ರಗಳ ಯುದ್ಧದಿಂದಾಗಿ ಕಚ್ಛಾ ತೈಲ ಪೂರೈಕೆಯಲ್ಲಿ ಮಾತ್ರ ಸಮಸ್ಯೆಯಾಗಿಲ್ಲ. ಪ್ಲಾಸ್ಟಿಕ್, ಫೈಬರ್, ಐರನ್​​ ಮತ್ತು ಇತರೆ ಲೋಹಗಳ ಸರಬರಾಜಿನಲ್ಲೂ ವ್ಯತ್ಯಯವಾಗಿದೆ. ಇದ್ರಿಂದ ಆಟೋಮೊಬೈಲ್​​ ಇಂಡಸ್ಟ್ರಿಗೂ ಬಿಸಿ ತಟ್ಟಿದೆ. ಮುಂದಿನ ವಾರದ ಬಳಿಕ ಕಾರು ಹಾಗೂ ಬೈಕ್​​ಗಳ ದರ ಶೇಕಡ 10ರಿಂದ 15ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಪ್ರತಿ ಕಾರುಗಳ ಮೇಲೆ 40ರಿಂದ 50ಸಾವಿರದಷ್ಟು ಬೆಲೆ ಏರಿಕೆ ಆಗುವ ಸಾಧ್ಯತೆ ಇದೆ. ಮಾರುತಿ ಸುಜಕಿ, ಟಾಟಾ ಮೋಟಾರ್ಸ್, ಮಹೀಂದ್ರಾ, ಕಿಯಾ, ಮರ್ಸಿಡಿಸ್​​​ ಬೆಂಜ್​ನಂತಹ ಕಂಪನಿಗಳು ಕೂಡ ಬೆಲೆ ಹೆಚ್ಚಿಸಲು ಪ್ಲ್ಯಾನ್ ಮಾಡಿವೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow Us