ಶೋಷಿತರ ಸಮಾವೇಶ: ಚಿಕನ್ ಬಿರಿಯಾನಿಯನ್ನು ರಸ್ತೆಯಲ್ಲಿ ಬಿಸಾಡಿ ಹಾಳು ಮಾಡಿದ್ದಕ್ಕೆ ಸಿದ್ದರಾಮಯ್ಯ ಸರ್ಕಾರ ಹೊಣೆಯಲ್ಲವೇ?
ಎಲ್ಲರೂ ಊಟ ಮಾಡಿದ ಬಳಿಕ, ಉಳಿದ ಬಿರಿಯಾನಿಯನ್ನು ಹತ್ತಿರದ ಹಳ್ಳಿಗಳಿಗೆ ಹೋಗಿ ಬಡ ಕುಟುಂಬಗಳ ನಡುವೆ ಹಂಚುವುದು ಸಾಧ್ಯವಿರಲಿಲ್ಲವೇ? ಭೀಕರ ಬರಗಾಲದಿಂದ ತತ್ತರಿಸಿರುವ ಹಿನ್ನೆಲೆಯಲ್ಲಿ, ಮೂರು ಹೊತ್ತು ಊಟ ಮಾಡುತ್ತಿದ್ದ ರಾಜ್ಯದ ಜನತೆ ಎರಡು ಹೊತ್ತು ಮಾತ್ರ ಆಹಾರ ಸೇವಿಸಿ ದಿನಗಳನ್ನು ನೂಕುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿರುವಾಗ ಅನ್ನವನ್ನು ಹೀಗೆ ಹಾಳು ಮಾಡೋದು ಸರಿಯೇ?
ಬೆಂಗಳೂರು: ನಮ್ಮ ದೇಶದಲ್ಲಿ ಒಂದು ಹೊತ್ತಿನ ಊಟಕ್ಕೆ ಪರದಾಡುವ ಜನ ಈಗಲೂ ಇದ್ದಾರೆ, 125 ದೇಶಗಳ ಜಾಗತಿಕ ಹಸಿವು ಸೂಚ್ಯಂಕ 2023 ರ (Global Hunger Index) ಪಟ್ಟಿಯಲ್ಲಿ ಭಾರತ 111ನೇ ಸ್ಥಾನದಲ್ಲಿದೆ. ಸ್ಥಿತಿವಂತರು ಹೊಟ್ಟೆ ತುಂಬ ತಿಂದು ತೇಗಿ ಬಿಸಾಡುವ ಆಹಾರವನ್ನು ಬಡವರಿಗೆ ಹಂಚಿದರೆ, ಈ ಪರಿಸ್ಥಿತಿ ಇರಲಾರದು. ಇದನ್ನು ಯಾಕೆ ಹೇಳಬೇಕಾಗಿದೆಯೆಂದರೆ, ರಾಜ್ಯದ ಘನ ಸರ್ಕಾರ (state government) ನಿನ್ನೆ ಚಿತ್ರದುರ್ಗದಲ್ಲಿ ಶೋಷಿತರ ಸಮಾವೇಶ (Oppressed Classes Mega Convention) ನಡೆಸಿತು. ಆಫ್ ಕೋರ್ಸ್ ದೊಡ್ಡಮಟ್ಟದ ಕಾರ್ಯಕ್ರಮವೇ. ಆದರೆ ಪ್ರಶ್ನೆ ಅದಲ್ಲ, ಅಲ್ಲಿ ಬಿಸಾಡಿರುವ ಅನ್ನದ್ದು. ನಿನ್ನೆಯ ಸಮಾವೇಶದಲ್ಲಿ ಭಾಗಿಯಾದವರಿಗಾಗಿ ತಯಾರಿಸಿದ್ದ ಚಿಕನ್ ಬಿರಿಯಾನಿ ಇದು.
ಅನ್ನವನ್ನು ಯಾಕೆ ಹೀಗೆ ಬಿಸಾಡಿದ್ದಾರೆ ಅಂತ ಅರ್ಥವಾಗದು ಮಾರಾಯ್ರೇ. ಎಲ್ಲರೂ ಊಟ ಮಾಡಿದ ಬಳಿಕ, ಉಳಿದ ಬಿರಿಯಾನಿಯನ್ನು ಹತ್ತಿರದ ಹಳ್ಳಿಗಳಿಗೆ ಹೋಗಿ ಬಡ ಕುಟುಂಬಗಳ ನಡುವೆ ಹಂಚುವುದು ಸಾಧ್ಯವಿರಲಿಲ್ಲವೇ? ಭೀಕರ ಬರಗಾಲದಿಂದ ತತ್ತರಿಸಿರುವ ಹಿನ್ನೆಲೆಯಲ್ಲಿ, ಮೂರು ಹೊತ್ತು ಊಟ ಮಾಡುತ್ತಿದ್ದ ರಾಜ್ಯದ ಜನತೆ ಎರಡು ಹೊತ್ತು ಮಾತ್ರ ಆಹಾರ ಸೇವಿಸಿ ದಿನಗಳನ್ನು ನೂಕುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿರುವಾಗ ಅನ್ನವನ್ನು ಹೀಗೆ ಹಾಳು ಮಾಡೋದು ಸರಿಯೇ? ಅಸಲಿಗೆ ಬರದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಸರ್ಕಾರ ಸಮಾವೇಶ ನಡೆಸಿದ್ದೇ ದೊಡ್ಡತಪ್ಪು.
ನಗರ ಪ್ರದೇಶಗಳಲ್ಲಾದರೆ ಭಿಕ್ಷುಕರಿಗಾಗಿ ಆಶ್ರಯ ಕೇಂದ್ರಗಳನ್ನು ನಿರ್ಮಿಸಿರುತ್ತಾರೆ ಆದರೆ ಗ್ರಾಮೀಣ ಭಾಗಗಲ್ಲಿ ಭೀಕ್ಷಕರು ಹಳ್ಳಿಯ ಹೊರವಲಯಗಳಲ್ಲಿ ಗುಡಿಸಲುಗಳನ್ನು ಕಟ್ಟಿಕೊಂಡು ವಾಸಮಾಡುತ್ತಾರೆ. ಅನ್ನವನ್ನು ಹೀಗೆ ಬಿಸಾಡುವ ಬದಲು ಒಯ್ದು ಅವರಿಗೆ ಕೊಟ್ಟಿದ್ದರೆ ಸಂತಸಪಟ್ಟು ತಿನ್ನುತ್ತಿದ್ದರು. ಇಷ್ಟು ದೊಡ್ಡಪ್ರಮಾಣದಲ್ಲಿ ಅನ್ನ ಹಾಳು ಮಾಡಿರುವದಕ್ಕೆ ಖಂಡಿತವಾಗಿ ಕ್ಷಮೆ ಇಲ್ಲ. ಈ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಸಂಪುಟದ ಎಲ್ಲ ಸಚಿವರು ಉಪಸ್ಥಿತರಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ