ನಾನು ಸರ್ವಧರ್ಮಗಳ ಜನರನ್ನು ಪ್ರೀತಿಸುವ ಹಿಂದೂ, ಸೆಕ್ಯುಲರಿಸಂನಲ್ಲಿ ನಂಬಿಕೆ ಉಳ್ಳವನು: ಸಿದ್ದರಾಮಯ್ಯ
ನಾನೊಬ್ಬ ಹಿಂದೂ, ಆದರೆ ನನಗೆ ಎಲ್ಲ ಜನರ ಮೇಲೆ ಪ್ರೀತಿ ಇದೆ. ಎಲ್ಲ ಧರ್ಮಗಳ ಜನರನ್ನು ನಾನು ಪ್ರೀತಿಸುತ್ತೇನೆ ಎಂದು ಸಿಎಂ ಹೇಳಿದರು. ಜಾತ್ಯಾತೀತತೆ ಅಂದರೆ ಏನು? ಸೆಕ್ಯುಲರಿಸಂ ಬಗ್ಗೆ ಸಂವಿಧಾನ ಏನು ಹೇಳುತ್ತದೆ? ಸಹಬಾಳ್ವೆ ಸಹಿಷ್ಣುತೆ-ಅದರಲ್ಲಿ ನಂಬಿಕೆ ಇಟ್ಟುಕೊಂಡಿರುವ ವ್ಯಕ್ತಿ ನಾನು ಎಂದು ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು: ಸಿದ್ದರಾಮಯ್ಯ ಹಿಂದೂ ವಿರೋಧಿಯೇ (anti-Hindu)? ಈ ಪ್ರಶ್ನೆಯನ್ನು ಖುದ್ದು ಅವರನ್ನೇ ಕೇಳಿದಾಗ ಮುಖ್ಯಮಂತ್ರಿ ಸಿಡುಕಿದರು. ಯಾರೀ ಅದು? ಅಂತ ಅವರಂದಾಗ, ಅಲ್ಲಾ ಸಾರ್ ಬಿಜೆಪಿಯವರು (BJP leaders) ಹಾಗೆ ಹೇಳುತ್ತಿದ್ದಾರೆ, ಅಂತ ಪ್ರಶ್ನೆ ಕೇಳಿದ ಪತ್ರಕರ್ತ ಹೇಳಿದರು. ಕೂಡಲೇ ತಮ್ಮ ಮುಖಭಾವ ಬದಲಿಸಿದ ಸಿದ್ದರಾಮಯ್ಯ (Siddaramaiah), ತನ್ನ ಬಗ್ಗೆ ಅವರಿಗೆ ಮಾತಾಡಲು ಬೇರೇನೂ ಇಲ್ವಲ್ಲಾ ಹಾಗಾಗೇ ಹಿಂದೂ ವಿರೋಧಿ ಅಂತ ಹೇಳುತ್ತಿರುತ್ತಾರೆ, ನಾನೊಬ್ಬ ಹಿಂದೂ, ಆದರೆ ನನಗೆ ಎಲ್ಲ ಜನರ ಮೇಲೆ ಪ್ರೀತಿ ಇದೆ. ಎಲ್ಲ ಧರ್ಮಗಳ ಜನರನ್ನು ನಾನು ಪ್ರೀತಿಸುತ್ತೇನೆ ಎಂದು ಹೇಳಿದರು. ಜಾತ್ಯಾತೀತತೆ ಅಂದರೆ ಏನು? ಸೆಕ್ಯುಲರಿಸಂ ಬಗ್ಗೆ ಸಂವಿಧಾನ ಏನು ಹೇಳುತ್ತದೆ? ಸಹಬಾಳ್ವೆ ಸಹಿಷ್ಣುತೆ-ಅದರಲ್ಲಿ ನಂಬಿಕೆ ಇಟ್ಟುಕೊಂಡಿರುವ ವ್ಯಕ್ತಿ ನಾನು ಎಂದು ಸಿದ್ದರಾಮಯ್ಯ ಹೇಳಿದರು. ಮಂಡ್ಯ ಜಿಲ್ಲೆಯ ಕೆರಗೋಡುನಲ್ಲಿರುವ ಸರ್ಕಾರೀ ಜಾಗವೊಂದರಲ್ಲಿ ಬಿಜೆಪಿ ಮತ್ತು ಹಿಂದೂ ಕಾರ್ಯಕರ್ತರು ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರಾಣ ಪ್ರತಿಷ್ಠೆ ನಡೆದ ದಿನ ಹನುಮ ಧ್ವಜ ಹಾರಿಸಿದ್ದರು. ಆದರೆ ಪೊಲೀಸರು ಅದನ್ನು ತೆರವುಗೊಳಿಸಿದ್ದರಿಂದ ಬಿಜೆಪಿ ಮುಖಂಡರು ಮಂಡ್ಯ ಮತ್ತು ಬೇರೆ ಬೇರೆ ಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

