ಹೈದರಾಬಾದ್: ಪ್ರವಾಹದ ನೀರಿನಲ್ಲಿ ಬೈಕ್​ ಸಮೇತ ಕೊಚ್ಚಿಹೋದ ವ್ಯಕ್ತಿ

|

Updated on: Aug 21, 2024 | 9:33 AM

ಹೈದರಾಬಾದ್​ನಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಪ್ರವಾಹದಂಥಾ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಬೈಕ್​ ಸವಾರರೊಬ್ಬರು ಬೈಕ್ ಜತೆಯಲ್ಲೇ ನೀರಿನಲ್ಲಿ ತೇಲಿ ಹೋಗುತ್ತಿರುವ ವಿಡಿಯೋ ವೈರಲ್ ಆಗಿದ್ದು, ಕೊನೆಗೆ ಅವರನ್ನು ರಕ್ಷಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಹೈದರಾಬಾದ್​ನಲ್ಲಿ ಭಾರಿ ಮಳೆ ಸುರಿಯುತ್ತಿದ್ದು ಅವಾಂತರ ಸೃಷ್ಟಿಯಾಗಿದೆ. ವ್ಯಕ್ತಿಯೊಬ್ಬರು ಬೈಕ್​ ಸಮೇತ ನೀರಿನಲ್ಲಿ ಕೊಚ್ಚಿ ಹೋಗಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಹೈದರಾಬಾದ್​ನಲ್ಲಿ ಪ್ರವಾಹದಂಥಾ ಪರಿಸ್ಥಿತಿ ನಿರ್ಮಾಣವಾಗಿದ್ದು, ಎಲ್ಲೆಡೆ ಸಂಚಾರ ಅಸ್ತವ್ಯಸ್ಥಗೊಂಡಿದೆ.

ಇಂದಿರಾನಗರದ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಬೈಕ್ ಸಮೇತ ಕೊಚ್ಚಿಕೊಂಡು ಹೋಗಿರುವ ಘಟನೆ ನಡೆದಿದೆ. ಗ್ರೀನ್ ಬವರ್ಚಿ ಹೋಟೆಲ್ ಬಳಿ ದ್ವಿಚಕ್ರ ವಾಹನ ಪಲ್ಟಿಯಾದ ಪರಿಣಾಮ ವ್ಯಕ್ತಿಯೊಬ್ಬರು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ. ಈತನನ್ನು ಕಂಡು ಗಾಬರಿಗೊಂಡ ಸ್ಥಳೀಯರು ಆತನನ್ನು ರಕ್ಷಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ.

ಭಾರೀ ಮಳೆಯಿಂದಾಗಿ ಒಬ್ಬರು ಸಾವನ್ನಪ್ಪಿದ್ದಾರೆ. ಪಾರ್ಸಿ ಗುಟ್ಟಾ ಪ್ರವಾಹದಲ್ಲಿ ಮೃತದೇಹ ರಸ್ತೆಯಲ್ಲಿ ಕೊಚ್ಚಿಕೊಂಡು ಹೋಗಿತ್ತು. ಮೃತರನ್ನು ರಾಮನಗರದ ಅನಿಲ್ ಎಂದು ಗುರುತಿಸಲಾಗಿದೆ. ಟ್ರಾಫಿಕ್ ಜಾಮ್‌ನಿಂದ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮತ್ತೊಂದೆಡೆ, ಮುಂದಿನ ನಾಲ್ಕು ದಿನಗಳ ಕಾಲ ತೆಲಂಗಾಣದಾದ್ಯಂತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಗದ್ವಾಲ, ಮಹೆಬೂಬ್‌ನಗರ, ಮೇದಕ್, ನಲ್ಗೊಂಡ, ನಾಗರಕರ್ನೂಲ್, ನಾರಾಯಣಪೇಟೆ, ಸಿದ್ದಿಪೇಟೆ, ವನಪರ್ತಿಯಲ್ಲಿ ಐಎಂಡಿ ಮಳೆಯ ಮುನ್ಸೂಚನೆ ನೀಡಿದೆ. ರಂಗಾರೆಡ್ಡಿ, ಸಂಗಾರೆಡ್ಡಿ, ವಿಕಾರಾಬಾದ್ ಮತ್ತು ಭುವನಗಿರಿಯಲ್ಲಿ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ. ಖಮ್ಮಂ, ಆದಿಲಾಬಾದ್, ಕರೀಂನಗರ ಮತ್ತು ವಾರಂಗಲ್‌ಗೆ ಹಳದಿ ಅಲರ್ಟ್ ಘೋಷಿಸಲಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ