Video: ನಮೀಬಿಯಾದ ಸಾಂಪ್ರದಾಯಿಕ ಡ್ರಮ್ ನುಡಿಸಿದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ನಮೀಬಿಯಾದ ಅಧ್ಯಕ್ಷ ನೆಟುಂಬೊ ನಂದಿ-ದೈತ್ವಾ ಅವರ ಆಹ್ವಾನದ ಮೇರೆಗೆ ನಮೀಬಿಯಾದ ವಿಂಡ್‌ಹೋಕ್‌ಗೆ ಬಂದಿಳಿದರು. ಪ್ರಧಾನಿ ಮೋದಿ ಅವರು ತಮ್ಮ ನಾಲ್ಕು ದಿನಗಳ ಬ್ರೆಜಿಲ್ ಪ್ರವಾಸವನ್ನು ಮುಗಿಸಿ, ನೈಋತ್ಯ ಆಫ್ರಿಕಾದ ರಾಷ್ಟ್ರವಾದ ನಮೀಬಿಯಾಕ್ಕೆ ತೆರಳಿದರು, ಅಲ್ಲಿ ಅವರಿಗೆ ಸಾಂಪ್ರದಾಯಿಕ ಸ್ವಾಗತ ದೊರೆಯಿತು. ವಿಮಾನ ನಿಲ್ದಾಣದಲ್ಲಿ ನಮೀಬಿಯಾದ ಸಾಂಪ್ರದಾಯಿಕ ಡ್ರಮ್ ನುಡಿಸಲು ಪ್ರಯತ್ನಿಸಿದರು. ಭಾರತ ಮತ್ತು ನಮೀಬಿಯಾ ನಡುವಿನ ಸಂಬಂಧಗಳು ತುಂಬಾ ಉತ್ತಮವಾಗಿವೆ.
ನಮೀಬಿಯಾ, ಜುಲೈ 09: ಪ್ರಧಾನಿ ನರೇಂದ್ರ ಮೋದಿ ನಮೀಬಿಯಾದ ಅಧ್ಯಕ್ಷ ನೆಟುಂಬೊ ನಂದಿ-ದೈತ್ವಾ ಅವರ ಆಹ್ವಾನದ ಮೇರೆಗೆ ನಮೀಬಿಯಾದ ವಿಂಡ್‌ಹೋಕ್‌ಗೆ ಬಂದಿಳಿದರು. ಪ್ರಧಾನಿ ಮೋದಿ ಅವರು ತಮ್ಮ ನಾಲ್ಕು ದಿನಗಳ ಬ್ರೆಜಿಲ್ ಪ್ರವಾಸವನ್ನು ಮುಗಿಸಿ, ನೈಋತ್ಯ ಆಫ್ರಿಕಾದ ರಾಷ್ಟ್ರವಾದ ನಮೀಬಿಯಾಕ್ಕೆ ತೆರಳಿದರು, ಅಲ್ಲಿ ಅವರಿಗೆ ಸಾಂಪ್ರದಾಯಿಕ ಸ್ವಾಗತ ದೊರೆಯಿತು. ವಿಮಾನ ನಿಲ್ದಾಣದಲ್ಲಿ ನಮೀಬಿಯಾದ ಸಾಂಪ್ರದಾಯಿಕ ಡ್ರಮ್ ನುಡಿಸಲು ಪ್ರಯತ್ನಿಸಿದರು. ಭಾರತ ಮತ್ತು ನಮೀಬಿಯಾ ನಡುವಿನ ಸಂಬಂಧಗಳು ತುಂಬಾ ಉತ್ತಮವಾಗಿವೆ. ನಮೀಬಿಯಾ ಸ್ವಾತಂತ್ರ್ಯ ಪಡೆಯುವುದಕ್ಕೂ ಮುನ್ನವೇ ನಮೀಬಿಯಾ ಹಾಗೂ ಭಾರತದ ಸಂಬಂಧ ಉತ್ತಮವಾಗಿತ್ತು. ಭಾರತವು ನಮೀಬಿಯಾದ ಸ್ವಾತಂತ್ರ್ಯವನ್ನು ಬೆಂಬಲಿಸಿದ ಮೊದಲ ದೇಶಗಳಲ್ಲಿ ಒಂದಾಗಿತ್ತು ಮತ್ತು ನಂತರ ನಮೀಬಿಯಾ ಸ್ವಾತಂತ್ರ್ಯ ಪಡೆದಾಗ, ಈ ಉತ್ತಮ ಸಂಬಂಧಗಳು ಉತ್ತಮ ಆರ್ಥಿಕ ಸಂಬಂಧಗಳಾಗಿ ರೂಪಾಂತರಗೊಂಡಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ