ಉಡುಪಿ: ದೈವ ನುಡಿಯಂತೆ ಆಗಸದ ಎತ್ತರಕ್ಕೆ ಚಿಮ್ಮಿದ ನೀರು; ಬಬ್ಬುಸ್ವಾಮಿ ಪವಾಡ ವಿಡಿಯೋ ವೈರಲ್​

| Updated By: ವಿವೇಕ ಬಿರಾದಾರ

Updated on: Dec 06, 2022 | 7:11 PM

ಉಡುಪಿಯ ಕಸ್ತೂರ್ಬಾ ನಗರ ಚಿಪ್ಪಾಡಿಯಲ್ಲಿ ಬಬ್ಬುಸ್ವಾಮಿ ಅಣತಿಯಂತೆ ದೈವಸ್ಥಾನದ ನೀರಿನ ಸಮಸ್ಯೆ ಮುಕ್ತಿ ಸಿಕ್ಕಿದೆ.

ಉಡುಪಿ: ಕರಾವಳಿಯಲ್ಲಿನ ದೈವ ಸಾನಿಧ್ಯಕ್ಕೆ ಸಿಕ್ಕಿತು ಮತ್ತೊಂದು ನಿದರ್ಶನ. ಉಡುಪಿಯ (Udupi) ಕಸ್ತೂರ್ಬಾ ನಗರ ಚಿಪ್ಪಾಡಿಯಲ್ಲಿ ಬಬ್ಬುಸ್ವಾಮಿ (Babbuswamy) ಅಣತಿಯಂತೆ ದೈವಸ್ಥಾನದ ನೀರಿನ ಸಮಸ್ಯೆ ಮುಕ್ತಿ ಸಿಕ್ಕಿದೆ. ಶ್ರೀ ದೈವರಾಜ ಬಬ್ಬುಸ್ವಾಮಿ ಕಮಿಟಿ ದೈವ ಸ್ಥಾನದ ನೀರಿನ ಸಮಸ್ಯೆಗಾಗಿ ದರ್ಶನ ಸೇವೆ ನಡೆಸಿದ್ದರು. ದರ್ಶನ ಸೇವೆಯ ಸಂದರ್ಭದಲ್ಲಿ ಬಬ್ಬುಸ್ವಾಮಿ ನೀರಿನ ಸೆಲೆಯಿರುವ ಜಾಗ ತೋರಿಸಿದ್ದರು. ದೈವ ತೋರಿಸಿದ ಜಾಗದಲ್ಲಿ ಬೋರ್ ವೆಲ್ ಕೊರೆದಾಗ ಜೀವಜಲ ಆಗಸದ ಎತ್ತರಕ್ಕೆ ಚಿಮ್ಮಿದೆ. ಸದ್ಯ ದೈವದ ಕಾರಣೀಕತೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

Published on: Dec 06, 2022 04:22 PM