ರಾತ್ರಿ ಸುರಿದ ಮಳೆಯಿಂದಾಗಿ ನಾಗವಾರ ಮತ್ತು ಕೆ ಆರ್ ಪುರಂನ ಎರಡು ಬಡಾವಣೆಗಳು ಸಂಪೂರ್ಣ ಜಲಾವೃತ
ನಾಗಾವಾರದ ಖಾಸಗಿ ಶಾಲೆಯೊಂದರಲ್ಲಿ ನೀರು ನುಗ್ಗಿದ್ದರಿಂದ ರಜೆ ಘೋಷಿಸಬೇಕಾದ ಅನಿವಾರ್ಯತೆ ಎದುರಾಯಿತು. ಪ್ರತಿವರ್ಷ ಇದೇ ಗೋಳು ಅಂತ ನಿವಾಸಿಗಳು ದೂರಿದರೂ ಪಾಲಿಕೆ ವತಿಯಿಂದ ಯಾವುದೇ ಕ್ರಮ ಜಾರಿಗೊಂಡಿಲ್ಲ.
Bengaluru: ಕಳೆದ ರಾತ್ರಿ ಬೆಂಗಳೂರಲ್ಲಿ ಸುರಿದ ಭಾರಿ ಮಳೆಯಿಂದಾಗಿ ನಾಗವಾರದ (Nagwara) ಎನ್ ಜಿ ಲೇಔಟ್ ಮತ್ತು ಕೆ ಆರ್ ಪುರಂನ (KR Puram) ಸಾಯಿ ಲೇಔಟ್ ಸಂಪೂರ್ಣವಾಗಿ ಜಲಾವೃತಗೊಂಡಿವೆ (inundated). ಮನೆಗಳಲ್ಲೆಲ್ಲ ನೀರಿನ ಜೊತೆ ಹುಳ-ಹುಪ್ಪಡಿ ನುಗ್ಗಿದ್ದರಿಂದ ನಿವಾಸಿಗಳಿ ನಿದ್ರೆ ಮಾಡುವುದು ಸಾಧ್ಯವಿರಲಿಲ್ಲ. ಜನರು ಮನೆಯಿಂದ ಹೊರಬರುವುದು ಸಾಧ್ಯವಿಲ್ಲ ಮಾರಾಯ್ರೇ. ನಾಗಾವಾರದ ಖಾಸಗಿ ಶಾಲೆಯೊಂದರಲ್ಲಿ ನೀರು ನುಗ್ಗಿದ್ದರಿಂದ ರಜೆ ಘೋಷಿಸಬೇಕಾದ ಅನಿವಾರ್ಯತೆ ಎದುರಾಯಿತು. ಪ್ರತಿವರ್ಷ ಇದೇ ಗೋಳು ಅಂತ ನಿವಾಸಿಗಳು ದೂರಿದರೂ ಪಾಲಿಕೆ ವತಿಯಿಂದ ಯಾವುದೇ ಕ್ರಮ ಜಾರಿಗೊಂಡಿಲ್ಲ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.