ಭಾರೀ ಮಳೆಗೆ ಕೃಷ್ಣ ಥಿಯೇಟರ್​ ಗೋಡೆ ಕುಸಿತ; ಬೈಕ್​ ಜಖಂ ಆಗಿದ್ದಕ್ಕೆ ಜನರ ಆಕ್ರೋಶ

ಭಾರೀ ಮಳೆಗೆ ಕೃಷ್ಣ ಥಿಯೇಟರ್​ ಗೋಡೆ ಕುಸಿತ; ಬೈಕ್​ ಜಖಂ ಆಗಿದ್ದಕ್ಕೆ ಜನರ ಆಕ್ರೋಶ

TV9 Web
| Updated By: ಮದನ್​ ಕುಮಾರ್​

Updated on:Jun 18, 2022 | 1:43 PM

Bengaluru Rain: ಬೆಂಗಳೂರಿನಲ್ಲಿ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಕೃಷ್ಣ ಚಿತ್ರಮಂದಿರದ ಗೋಡೆ ಕುಸಿದಿದ್ದು, ಬೈಕ್ ಜಖಂ ಆಗಿದೆ. ಬೈಕ್​ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಳೆ ಸುರಿದರೆ ಆಗುವ ಅನಾಹುತಗಳು ಒಂದೆರಡಲ್ಲ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದರೆ ಜನರು ಎಲ್ಲಿಲ್ಲದ ಕಷ್ಟ ಅನುಭವಿಸಬೇಕಾಗುತ್ತದೆ. ಶುಕ್ರವಾರ (ಜೂನ್​ 17) ರಾಜ್ಯ ರಾಜಧಾನಿಯಲ್ಲಿ ಧಾರಾಕಾರ ಮಳೆ (Bengaluru Rain) ಬಂದಿದೆ. ನೀರಿನಲ್ಲಿ ಯುವಕನೋರ್ವ ಕೊಚ್ಚಿಕೊಂಡು ಹೋಗಿ ಪ್ರಾಣ ಕಳೆದುಕೊಂಡಿರುವುದು ನೋವಿನ ಸಂಗತಿ. ಇನ್ನು ಬೆಂಗಳೂರಿನ ಕೃಷ್ಣ ಚಿತ್ರಮಂದಿರದ ಗೋಡೆ ಕೂಡ ಕುಸಿದಿದೆ. ಇದರ ಪರಿಣಾಮವಾಗಿ ಬೈಕ್​ ಜಖಂ ಆಗಿದೆ. ಥಿಯೇಟರ್ ಬಳಿ ಬೈಕ್ ಮಾಲೀಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿತ್ರಮಂದಿರದ ಮಾಲಿಕರನ್ನು ಸ್ಥಳಕ್ಕೆ ಕರೆಸುವಂತೆ ಸಿಬ್ಬಂದಿಗಳಿಗೆ ಒತ್ತಾಯ ಮಾಡಲಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published on: Jun 18, 2022 01:43 PM