ಚಾರ್ಮಾಡಿ ಘಾಟ್​ನಲ್ಲಿ ಮಳೆ, ರಸ್ತೆಗುಂಟ ನದಿಯೋಪಾದಿಯಲ್ಲಿ ಹರಿದ ನೀರು

|

Updated on: Oct 10, 2024 | 10:29 AM

ಗುಡ್ಡದ ಮೇಲಿಂದ ಕೆಳಕ್ಕೆ ಹರಿಯುತ್ತಿರುವ ನೀರು ರಸ್ತೆಗುಂಟ ಸಾಗಿ ಹೊಗುತ್ತಿರುವುದು ಸೋಜಿಗದ ಸಂಗತಿಯೇ. ಮಳೆಗಾಲದಲ್ಲಿ ನಮಗೆ ಇಂಥ ದೃಶ್ಯಗಳು ನೋಡಲು ಸಿಕ್ಕಲಾರವು. ಘಾಟ್ ಪ್ರದೇಶಗಳಲ್ಲಿ ಮಳೆ ವರ್ಷದ ಎಲ್ಲ ಸಮಯದಲ್ಲಿ ಆಗುತ್ತಿರುತ್ತದೆ, ಅದರೆ ಅಲ್ಪ ಪ್ರಮಾಣದಲ್ಲಿ. ಇದು ದೊಡ್ಡ ಪ್ರಮಾಣದ ಮಳೆ.

ಮಂಗಳೂರು: ಮಳೆಗಾಲ ತೀರಿತು ಅಂತ ನಿಟ್ಟುಸಿರಾಗಿದ್ದರೆ ನೀವು ನಿರೀಕ್ಷಿಸಿದ ಸ್ಥಿತಿ ಎದುರಾಗಬಹುದು. ಚಾರ್ಮಾಡಿ ಘಾಟ್ ನಲ್ಲಿ ಕಂಡ ದೃಶ್ಯವಿದು. ಈ ಭಾಗದಲ್ಲಿ ನಿನ್ನೆ ಮಳೆ ಸುರಿದ ಕಾರಣ ಗುಡ್ಡಗಳಿಂದ ಜಾರಿದ ನೀರು ರಸ್ತೆಯ ಮೇಲೆ ನದಿಯೋಪಾದಿಯಲ್ಲಿ ಹರಿಯುತ್ತಿದೆ. ವಾಹನ ಸವಾರರು ಅದರಲ್ಲೂ ವಿಶೇಷವಾಗಿ ಕಾರು ಚಾಲಕರು ಪಡಬಾರದ ಪಡಿಪಾಟಲು ಪಡುತ್ತಿದ್ದಾರೆ. ಹರಿಯುವ ನೀರಿನ ರಭಸ ಜೋರಿಲ್ಲದ ಕಾರಣ ವಾಹನಗಳನ್ನು ಮುಂದಕ್ಕೆ ಓಡಿಸೋದು ಸಾಧ್ಯವಾಗುತ್ತಿರಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಚಾರ್ಮಾಡಿ ಘಾಟ್ ನಲ್ಲಿ ಕೃತಕ ಜಲಪಾತ ಮತ್ತು ಇಬ್ಬನಿ ಸೃಷ್ಟಿಸಿರುವ ದೃಶ್ಯವೈಭವವನ್ನು ಒಬ್ಬ ಕವಿಯೇ ಚೆನ್ನಾಗಿ ಬಣ್ಣಿಸಬಲ್ಲ