Sign In

By signing in or creating an account, you agree with Associated Broadcasting Company's Terms & Conditions and Privacy Policy.

ರತನ್ ಟಾಟಾ ವಿಧಿವಶ: ಸಾರ್ವಜನಿಕರ ಅಂತಿಮ ದರ್ಶನಕ್ಕೆ ಪಾರ್ಥೀವ ಶರೀರ ಎನ್​ಸಿಪಿಎ ಆವರಣಕ್ಕೆ ಸ್ಥಳಾಂತರ

ರತನ್ ಟಾಟಾ ವಿಧಿವಶ: ಸಾರ್ವಜನಿಕರ ಅಂತಿಮ ದರ್ಶನಕ್ಕೆ ಪಾರ್ಥೀವ ಶರೀರ ಎನ್​ಸಿಪಿಎ ಆವರಣಕ್ಕೆ ಸ್ಥಳಾಂತರ

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 10, 2024 | 11:23 AM

ರತನ್ ಟಾಟಾ ವಿಧಿವಶ: ಟಾಟಾ ಸಂಸ್ಥೆಗಳ ಸಮೂಹದಲ್ಲಿ ಲಕ್ಷಾಂತರ ಜನರಿಗೆ ನೌಕರಿ ನೀಡಿದ ಉದ್ಯಮಿ ರತನ್ ಟಾಟಾ ನಿಧನಕ್ಕೆ ಪ್ರಕೃತಿ ಸಹ ರೋದಿಸುತ್ತಿದೆ. ಮುಂಬೈನಲ್ಲಿ ಇಂದು ಬೆಳಗ್ಗೆಯಿಂದಲೇ ಮೋಡ ಮುಸುಕಿದ ವಾತಾವರಣ. ಎನ್​ಸಿಪಿಎ ಆವರಣದಲ್ಲಿ ಟಾಟಾ ಸಂಸ್ಥೆಗಳ ಉದ್ಯೋಗಿಗಳು ಶೋಕತಪ್ತರಾಗಿರುವುದನ್ನ ನೋಡಬಹುದು.

ಮುಂಬೈ: ಕಳೆದ ರಾತ್ರಿ ಸುಮಾರು 11.30 ಕ್ಕೆ ವಿಧಿವಶರಾದ ಖ್ಯಾತ ಉದ್ಯಮಿ ಭಾರತ ರತ್ನ ರತನ್ ಟಾಟಾ ಅವರ ಪಾರ್ಥೀವ ಶರೀರವನ್ನು ನಗರದ ಎನ್​ಸಿಪಿಎ ಆವರಣಕ್ಕೆ ಸ್ಥಳಾಂತರಿಸಲಾಗಿದೆ. ಗಣ್ಯರು ಮತ್ತು ಸಾರ್ವಜನಿಕರು ಇಲ್ಲಿಗೆ ಬಂದು ಅಗಲಿದ ಚೇತನಕ್ಕೆ ತಮ್ಮ ಅಂತಿಮ ಸಲ್ಲಿಸಬಹುದು. ರತನ್ ಟಾಟಾ ಅವರ ಅಂತ್ಯಕ್ರಿಯೆ ಇಂದು ಸಾಯಂಕಾಲ ವೊರ್ಲಿ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Ratan Tata: ರತನ್ ಟಾಟಾ ನಾಲ್ಕು ಬಾರಿ ಪ್ರೀತಿಯ ಬಲೆಗೆ ಸಿಲುಕಿದ್ದರೂ ಬ್ರಹ್ಮಚಾರಿಯಾಗಿಯೇ ಉಳಿದಿದ್ದೇಕೆ?