Wayanad Landslide: ವಯನಾಡು ಭೂಕುಸಿತ, ರಕ್ಷಣಾ ಕಾರ್ಯಾಚರಣೆ ತೀವ್ರ, ಮೂವರು ಸಾವು, ಐವರು ನಾಪತ್ತೆ

Edited By:

Updated on: Jul 08, 2026 | 10:34 AM

ಕೇರಳದ ವಯನಾಡು ಜಿಲ್ಲೆಯ ಕೆಲಾಡಿ (ಕಲ್ಲಾಡಿ) ಪ್ರದೇಶದಲ್ಲಿ ಭೀಕರ ಭೂಕುಸಿತ ಸಂಭವಿಸಿದ್ದು, ಮೂವರು ಸಾವನ್ನಪ್ಪಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಇನ್ನೂ ಐವರು ನಾಪತ್ತೆಯಾಗಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತೀವ್ರ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿದೆ. ನಿರಂತರ ಮಳೆ ಮತ್ತು ಪ್ರದೇಶದಲ್ಲಿನ ಕೆಸರು ಮಿಶ್ರಿತ ಮಣ್ಣು ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ.

ವಯನಾಡು, ಜುಲೈ 08: ಕೇರಳದ ವಯನಾಡು ಜಿಲ್ಲೆಯ ಕೆಲಾಡಿ (ಕಲ್ಲಾಡಿ) ಪ್ರದೇಶದಲ್ಲಿ ಭೀಕರ ಭೂಕುಸಿತ ಸಂಭವಿಸಿದ್ದು, ಮೂವರು ಸಾವನ್ನಪ್ಪಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಇನ್ನೂ ಐವರು ನಾಪತ್ತೆಯಾಗಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತೀವ್ರ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿದೆ. ನಿರಂತರ ಮಳೆ ಮತ್ತು ಪ್ರದೇಶದಲ್ಲಿನ ಕೆಸರು ಮಿಶ್ರಿತ ಮಣ್ಣು ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ.

ಸುರಂಗ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಈ ದುರಂತ ಸಂಭವಿಸಿದ್ದು, ರಸ್ತೆಯು ಸಂಪೂರ್ಣವಾಗಿ ಮಣ್ಣಿನಿಂದ ಆವೃತವಾಗಿತ್ತು. ಎನ್​ಡಿಆರ್​ಎಫ್ ಮತ್ತು ಸ್ಥಳೀಯ ಸಿಬ್ಬಂದಿಗಳು ರಾತ್ರಿಯಿಡೀ ಕಾರ್ಯನಿರ್ವಹಿಸಿ ರಸ್ತೆಯನ್ನು ತೆರವುಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ, ಇದರಿಂದ ರಕ್ಷಣಾ ವಾಹನಗಳ ಸಂಚಾರ ಸುಗಮವಾಗಿದೆ. ನಾಪತ್ತೆಯಾಗಿರುವವರನ್ನು ಪತ್ತೆ ಹಚ್ಚಲು ಜೆಸಿಬಿ ಯಂತ್ರಗಳನ್ನು ಬಳಸಿ ಮಣ್ಣನ್ನು ತೆರವು ಮಾಡಲಾಗುತ್ತಿದೆ.

ದುರಂತ ಸಂಭವಿಸಿದಾಗ ಕಾಮಗಾರಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದರೂ, ಬಹುತೇಕ ಕಾರ್ಮಿಕರು ಸುರಂಗ ಕಾಮಗಾರಿ ಸ್ಥಳದ ಸಮೀಪದ ತಾತ್ಕಾಲಿಕ ಶೆಡ್‌ಗಳಲ್ಲಿ ವಾಸವಾಗಿದ್ದರು. ಪ್ರಮುಖವಾಗಿ, ಕಾಮಗಾರಿ ಸ್ಥಳದಿಂದ ತೆಗೆದ ಮಣ್ಣನ್ನು ಬೆಟ್ಟದ ಮುಂಭಾಗದಲ್ಲಿ ಅವೈಜ್ಞಾನಿಕವಾಗಿ ಶೇಖರಣೆ ಮಾಡಿದ್ದೇ ಈ ಭೂಕುಸಿತದ ತೀವ್ರತೆಗೆ ಕಾರಣವೆಂದು ಪ್ರಾಥಮಿಕವಾಗಿ ಹೇಳಲಾಗುತ್ತಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯಬೇಕಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Jul 08, 2026 10:32 AM
Follow Us