ಸರ್ಕಾರ ರೈತರ ಹಿತ ಕಾಪಾಡಲು ಪ್ರಯತ್ನಿಸುತ್ತಿದ್ದರೆ ವಿರೋಧ ಪಕ್ಷಗಳ ನಾಯಕರು ನೀರಿನ ಮೇಲೆ ರಾಜಕಾರಣ ಮಾಡುತ್ತಿದ್ದಾರೆ: ಡಿಕೆ ಶಿವಕುಮಾರ್
ತಾನು ಅಂಕಿ-ಅಂಶಗಳನ್ನು ಹೇಳುವ ಪ್ರಯತ್ನ ಮಾಡಲ್ಲ, ಯಾಕೆಂದರೆ ಅವು ಹಿತಕರ ಅನಿಸುವುದಿಲ್ಲ; ಅದರೆ, ರಾಜ್ಯದ ಅತ್ಯಂತ ಹಿರಿಯ ನಾಯಕರಾಗಿರುವ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಎಕಾನಾಮಿಕ್ಸ್ ಟೈಮ್ಸ್ ಪತ್ರಿಕೆ ನೀಡಿರುವ ಸಂದರ್ಶನವನ್ನು ಇವರೆಲ್ಲ ಓದಲಿ, ವಾಸ್ತವಾಂಶ ಗೊತ್ತಾಗುತ್ತದೆ ಎಂದು ಶಿವಕುಮಾರ್ ಹೇಳಿದರು.
ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar); ಬಿಎಸ್ ಯಡಿಯೂರಪ್ಪ (BS Yediyurappa), ಬಸವರಾಜ ಬೊಮ್ಮಾಯಿ (Basavaraj Bommai) ಮತ್ತು ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರ ಧೋರಣೆಗಳನ್ನು ಖಂಡಿಸಿದರು. ರಾಜ್ಯದಲ್ಲಿದ್ದಾಗ ಇವರು ರಾಜ್ಯದ ಬಗ್ಗೆ ಮಾತಾಡುತ್ತಾರೆ, ರಾಜ್ಯದ ಹೊರಗೆ ರಾಜಕಾರಣ ಮಾಡಲು ಹೋಗುತ್ತಾರೆ ಎಂದು ಶಿವಕುಮಾರ್ ಹೇಳಿದರು. ಇವರೆಲ್ಲ ನೀರಿನ ಮೇಲೆ ರಾಜಕಾರಣ ಮಾಡುತ್ತಿದ್ದಾರೆ, ರೈತರನ್ನು ಉಳಿಸುವ ಕಾರ್ಯದಲ್ಲಿ ನಾವು ಪ್ರಾಮಾಣಿಕವಾಗಿ ತೊಡಗಿದ್ದರೆ, ಇವರಿಗೆ ರಾಜಕಾರಣ ಮುಖ್ಯವಾಗಿದೆ ಎಂದು ಅವರು ಹೇಳಿದರು. ರಾಜ್ಯದ ಹಿತವನ್ನು ನಾವು ಹಿಂದೆಯೂ ಕಾಪಾಡಿದ್ದೇವೆ, ಇವತ್ತೂ ಕಾಪಾಡುತ್ತೇವೆ ಮತ್ತು ಮುಂಬರುವ ದಿನಗಳಲ್ಲೂ ಕಾಪಾಡುತ್ತೇವೆ ಎಂದು ಶಿವಕುಮಾರ್ ಹೇಳಿದರು. ತಾನು ಅಂಕಿ-ಅಂಶಗಳನ್ನು ಹೇಳುವ ಪ್ರಯತ್ನ ಮಾಡಲ್ಲ, ಯಾಕೆಂದರೆ ಅವು ಹಿತಕರ ಅನಿಸುವುದಿಲ್ಲ; ಅದರೆ, ರಾಜ್ಯದ ಅತ್ಯಂತ ಹಿರಿಯ ನಾಯಕರಾಗಿರುವ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಎಕಾನಾಮಿಕ್ಸ್ ಟೈಮ್ಸ್ ಪತ್ರಿಕೆ ನೀಡಿರುವ ಸಂದರ್ಶನವನ್ನು ಇವರೆಲ್ಲ ಓದಲಿ, ವಾಸ್ತವಾಂಶ ಗೊತ್ತಾಗುತ್ತದೆ ಎಂದು ಶಿವಕುಮಾರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ