ಸೋತಲ್ಲೇ ಗೆಲುವನ್ನು ಹುಡುಕುವ ಛಲ ನನ್ನ ಮಗನಲ್ಲಿ ಹುಟ್ಟಿಬಿಟ್ಟಿದೆ: ಲಕ್ಷ್ಮಿ ಹೆಬ್ಬಾಳ್ಕರ್, ಸಚಿವೆ

|

Updated on: Jun 28, 2024 | 7:59 PM

ಅಸಲಿಗೆ ಲಕ್ಷ್ಮಿ ಹೆಬ್ಬಾಳ್ಕರ್ ರಾಜಕಾರಣದಲ್ಲಿ ಇನ್ನೂ ಪ್ರಬುದ್ಧನಲ್ಲದ ತಮ್ಮ ಮಗ ಮೃಣಾಲ್ ಹೆಬ್ಬಾಳ್ಕರ್ ನನ್ನು ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದಿಂದ ನಿಲ್ಲಿಸಿದ್ದೇ ತಪ್ಪು. ಮೃಣಾಲ್ ರಾಜಕೀಯದಲ್ಲಿ ಇನ್ನೂ ಪಳಗಬೇಕಿದೆ, ನಾಮಬಲದಿಂದ ಗೆಲ್ಲಿಸುತ್ತೇನೆಂದು ಸಚಿವೆ ಅಂದುಕೊಂಡಿದ್ದರೇನೋ? ಗ್ಯಾರಂಟಿ ಯೋಜನೆಗಳೂ ಅವರ ನೆರವಿಗೆ ಬರಲಿಲ್ಲ.

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಹಳ ದಿನಗಳ ನಂತರ ಮಾಧ್ಯಮಗಳ ಮುಂದು ಇಂದು ಪ್ರತ್ಯಕ್ಷರಾದರು. ಲೋಕಸಭಾ ಚುನಾವಣೆಯಲ್ಲಿ ಮಗನ ಸೋಲಿನಿಂದ ಅವರು ಹತಾಶರಾಗಿದ್ದು ಸತ್ಯ. ಆದರೆ ಸೋಲಿನಿಂದ ಧೃತಿಗೆಟ್ಟಿಲ್ಲ, ಶಸ್ತ್ರಾಸ್ತ್ರ ಚೆಲ್ಲಿಲ್ಲ, ರಾಜಕಾರಣದಲ್ಲಿ ಸೋಲು ಗೆಲುವು ಇದ್ದಿದ್ದೇ, ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ನಮ್ಮದು, ಸೋತಲ್ಲೇ ಗೆಲ್ಲುವ ಛಲ ನನ್ನ ಮಗನಲ್ಲಿ ಹುಟ್ಟಿಬಿಟ್ಟಿದೆ, ಸೋತಿದ್ದು ಯಾಕೆ ಅಂತ ಆತ್ಮಾವಲೋಕ ಮಾಡಿಕೊಳ್ಳುತ್ತಿರುವ ಕಾರಣ ಮೌನಕ್ಕೆ ಶರಣಾಗಿದ್ದೇವೆಯೇ ಹೊರತು ಬೇರೇನೂ ಕಾರಣವಲ್ಲ ಎಂದು ಸಚಿವೆ ಹೇಳಿದರು. ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಡಿಕೆ ಶಿವಕುಮಾರ್ ಸೊಕ್ಕಿನಿಂದ ಮೃಣಾಲ್ ಸೋತರು ಎಂದು ರಮೇಶ್ ಜಾರಕಿಹೊಳಿ ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವೆ, ವಿಧಾನ ಪರಿಷತ್ ಚುನಾವಣೆಯಲ್ಲಿ ನನ್ನ ಸಹೋದರ ಚನ್ನರಾಜ್ ಹಟ್ಟಿಹೊಳಿ ದಾಖಲೆ ಅಂತರದಿಂದ ಗೆದ್ದರು, 2023 ರ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಜಾರಕಿಹೊಳಿ ಭಗೀರಥ ಪ್ರಯತ್ನ ಮಾಡಿದರು, ಸೋಲಿನ ಹಾರ ನನ್ನ ಕೊರಳಿಗೆ ತೊಡಗಿಸುವುದಾಗಿ ಹೇಳಿದ್ದರು,ಅವರ ಹಾರಕ್ಕಾಗಿ ಈಗಳು ಕಾಯುತ್ತಿದ್ದೇನೆ ಎಂದು ಹೇಳಿದ ಅವರು ಅದು ಯಾರ ಸೊಕ್ಕು ಎಂದು ಪ್ರಶ್ನಿಸಿದರು.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಲಕ್ಷ್ಮಿ ಹೆಬ್ಬಾಳ್ಕರ್ ಹೆಸರು ಹೇಳದೆ ಆ ಯವ್ವ ಏನೇನೋ ಮಾತಾಡ್ತಾರೆ ಎಂದು ಟೀಕಿಸಿದ ರಮೇಶ್ ಜಾರಕಿಹೊಳಿ

Follow us on