ಶ್ರೀರಾಮಚಂದ್ರನನ್ನು ನಾವು ಬಿಜೆಪಿಯವರಿಗಿಂತ ಕಡಿಮೆಯೇನೂ ಪೂಜಿಸುವುದಿಲ್ಲ: ಸಿದ್ದರಾಮಯ್ಯ

|

Updated on: Jan 12, 2024 | 5:49 PM

ಸಿದ್ದರಾಮಯ್ಯ ತನಗೆ ಆಮಂತ್ರಣ ಪತ್ರ ಸಿಕ್ಕಿಲ್ಲ ಎನ್ನುತ್ತಾರೆ, ಒಂದು ಪಕ್ಷ ಸಿಕ್ಕಿದ್ದರೂ ಅವರು ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಹೋಗುತ್ತಿರಲಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ಮತ್ತು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧುರಿ ಆಮಂತ್ರಣ ಪತ್ರ ಸಿಕ್ಕರೂ ಹೋಗುತ್ತಿಲ್ಲ. ಹಾಗಾಗಿ ಸಿದ್ದರಾಮಯ್ಯ ಸಹ ಹೋಗುತ್ತಿರಲಿಲ್ಲ.

ಶಿವಮೊಗ್ಗ: ನಗರದಲ್ಲಿಂದು ಯುವನಿಧಿ ಗ್ಯಾರಂಟಿ ಯೋಜನೆಗೆ ಚಾಲನೆ ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಜನವರಿ 22 ರ ನಂತರ ಅಯೋಧ್ಯೆಗೆ ಹೋಗಿ ಶ್ರೀರಾಮನ (Sriram) ದರ್ಶನ ಮಾಡಿಕೊಂಡು ಬರೋದಾಗಿ ಹೇಳಿದರು. 22 ರಂದು ನಡೆಯುವ ಪ್ರಾಣ ಪ್ರತಿಷ್ಠೆ (Ram Temple Consecration ceremony) ಕಾರ್ಯಕ್ರಮಕ್ಕೆ ತನಗೆ ಆಮಂತ್ರಣ ಸಿಕ್ಕಿಲ್ಲವೆಂದು ಪುನರುಚ್ಛರಿಸಿದ ಸಿದ್ದರಾಮಯ್ಯ, ಕಾಂಗ್ರೆಸ್ ನವರು ಶ್ರೀರಾಮಚಂದ್ರನನ್ನು ಬಿಜೆಪಿಯವರಿಗಿಂತ ಕಡಿಮೆಯೇನೂ ಪೂಜಿಸಲ್ಲ, ರಾಮ ನಮಗೂ ದೇವರು, ನಾವೆಲ್ಲ ರಾಮನ ಭಕ್ತರು ಎಂದು ಸಿದ್ದರಾಮಯ್ಯ ಹೇಳಿದರು. ತಮಗಾಗಲೀ ಕಾಂಗ್ರೆಸ್ ಪಕ್ಷದ ಯಾವುದೇ ನಾಯಕನಿಗೆ ರಾಮಮಂದಿರದ ಬಗ್ಗೆ ಯಾವ ವಿರೋಧವೂ ಇಲ್ಲ, ಆದರೆ ರಾಮ ಮತ್ತು ರಾಮಮಂದಿರದ ಹೆಸರಲ್ಲಿ ಬಿಜೆಪಿ ಮಾಡುತ್ತಿರುವ ರಾಜಕೀಯವನ್ನು ನಾವು ವಿರೋಧಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು. ಜನವರಿ 22 ರಂದು ರಾಜ್ಯದ ಕಾಂಗ್ರೆಸ್ ಕಾರ್ಯಕರ್ತರು ತಮಗೆ ಹತ್ತಿರದ ರಾಮಮಂದಿರಕ್ಕೆ ಹೋಗಿ ಪೂಜೆ ಸಲ್ಲಿಸಲಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on