ಧೂಮಪಾನ ಕ್ಯಾನ್ಸರ್ ಗೆ ಮೂಲ ಅಂತ ಗೊತ್ತಿದ್ದರೂ ಬೀಡಿ-ಸಿಗರೇಟು ಸೇದುತ್ತೇವೆ: ಸಿದ್ದರಾಮಯ್ಯ, ಸಿಎಂ

|

Updated on: Jul 01, 2024 | 4:44 PM

ಇವತ್ತಿನ ವೈದ್ಯರಿಗೆ ಡಾ ಬಿಸಿ ರಾಯ್ ಅವರಂತೆ ಬದುಕು ನಡೆಸುವುದು ಸಾಧ್ಯವಾಗದಿದ್ದರೂ ಅವರ ಹಾಕಿಕೊಟ್ಟಿರುವ ಮಾರ್ಗದಲ್ಲಿ ನಡೆಯುವ ಪ್ರಯತ್ನವನ್ನಂತೂ ಮಾಡಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಸಮಾಜಕ್ಕೆ ವೈದ್ಯರು ನೀಡುವ ಸೇವೆ ಪದಗಳಲ್ಲಿ ಹೇಳಲಾಗದಂಥದ್ದು, ಅವರಿಂದಾಗೇ ನಾವು ಆರೋಗ್ಯದಿಂದಿರುವುದು ಸಾಧ್ಯ ಎಂದು ಅವರು ಹೇಳಿದರು.

ಬೆಂಗಳೂರು: ವಿಶ್ವ ವೈದ್ಯರ ದಿನಾಚರಣೆಯಾಗಿರುವ ಇಂದು ನಗರದ ಮಾಗಡಿ ರಸ್ತೆಯಲ್ಲಿರುವ ಆರೋಗ್ಯ ಸೌಧದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿ ಡಾ ಬಿಸಿ ರಾಯ್ ಜನ್ಮದಿನಾಚರಣೆ ಅಂಗವಾಗಿ ನಡೆಯುವ ದಿನದ ಬಗ್ಗೆ ಮಾತಾಡಿದರು. ಎಲ್ಲರೂ ಅರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ದುಶ್ಚಟಗಳಿಗೆ ಬಲಿಯಾಗಬಾರದೆಂದು ಹೇಳಿದ ಸಿದ್ದರಾಮಯ್ಯ, ಸರಿಯಾದ ಆಹಾರ ಪದ್ಧತಿ ಮತ್ತು ಸೂಕ್ತ ಜೀವನ ಶೈಲಿಯನ್ನು ಅಳವಡಿಸಿಕೊಂಡರೆ ಆರೋಗ್ಯ ಮತ್ತು ಆಯುಷ್ಯವಂತರಾಗಿ ಬಾಳಬಹುದು ಎಂದು ಹೇಳಿದರು. ಕೆಟ್ಟ ಚಟಗಳಿಗೆ ಬೇಗ ದಾಸರಾಗುವುದು ಮಾನವನ ದೌರ್ಬಲ್ಯ, ಅವು ನಮ್ಮ ದೇಹಕ್ಕೆ ಮಾರಕ, ಹಾನಿಕಾರಕ ಎಂದು ಗೊತ್ತಿದ್ದರೂ ಅವುಗಳ ಅಭ್ಯಾಸ ನಾವು ನಿಲ್ಲಿಸಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಸಿಗರೇಟು ಸೇದುತ್ತಿದ್ದ ತಮ್ಮ ಚಟದ ಬಗ್ಗೆ ಮಾತಾಡಿದ ಸಿದ್ದರಾಮಯ್ಯ ಧೂಮಪಾನದಿಂದ ಹೃದ್ರೋಗ ಶುರುವಾದಾಗ 1987 ರಲ್ಲಿ ಅದನ್ನು ತ್ಯಜಿಸಿದೆ ಎಂದು ಹೇಳಿದರು. 24 ವರ್ಷಗಳ ಹಿಂದೆ ಅಂದರೆ 2000 ಌಂಜಿಯೋಪ್ಪಾಸ್ಟಿ ಮಾಡಿಸಿಕೊಂಡಿರುವುದಾಗಿ ಹೇಳಿದ ಸಿದ್ದರಾಮಯ್ಯ ಸಿಗರೇಟು ಸೇದುತ್ತಿದ್ದ ಕಾರಣಕ್ಕೆ ಹೃದ್ರೋಗ ಬಂತು ಮತ್ತು ಅದರೊಂದಿಗೆ ಮಧುಮೇಹ ಸಹ ವಕ್ಕರಿಸಿಕೊಂಡಿತು ಎಂದು ಹೇಳಿದರು.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: