Loading video

ಕರ್ನಾಟಕ ಬಂದ್; ಕನ್ನಡದ ರಕ್ಷಣೆಗೆ ಮತ್ತು ಕನ್ನಡನಾಡಿಗಾಗಿ ಬಂದ್ ಕರೆ ನೀಡಿದ್ದೇವೆ: ವಾಟಾಳ್ ನಾಗರಾಜ್

|

Updated on: Mar 22, 2025 | 12:32 PM

ಕನ್ನಡ ಪರ ಹೋರಾಟಗಾರರು ಬಂದ್​ಗೆ ಕರೆ ನೀಡಿದರೆ ಅದು ಮಾಧ್ಯಮದವರಿಗೆ ಮೆಣಸಿನಕಾಯಿ ತಿಂದಂತಾಗುತ್ತದೆ, ಪರೀಕ್ಷಾ ಸಮಯದಲ್ಲಿ ಯಾಕೆ ಬಂದ್ ಗೆ ಕರೆ ನೀಡಿದ್ದೀರಿ ಅಂತ ಪ್ರಶ್ನೆ, ಆದರೆ ಶನಿವಾರ ಎಸ್ಸೆಸ್ಸಿಲ್ಸಿ ಪರೀಕ್ಷೆ ಇಲ್ಲ, ಅದನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಂದ ದೃಢೀಕರಿಸಿಕೊಳ್ಳಲಾಗಿದೆ, ಮಕ್ಕಳಿಗೆ ಎರಡು ದಿನ ಮನೆಯಲ್ಲೇ ಕೂತು ಅಭ್ಯಾಸ ಮಾಡಲು ಅವಕಾಶ ಸಿಕ್ಕಂತಾಗುತ್ತದೆ ಎಂದು ನಾಗರಾಜ್ ಹೇಳಿದರು.

ಬೆಂಗಳೂರು, ಮಾರ್ಚ್ 22: ಯಾರಿಗೂ ಬೇಡದ ಕರ್ನಾಟಕ ಬಂದ್ (Karnataka Bandh) ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಗೆ ಯಾಕೆ ಬೇಕು ಅಂತ ಕೇಳಿದರೆ ಅವರು ತಮ್ಮದೇ ಆದ ಸಮರ್ಥನೆ ನೀಡುತ್ತಾರೆ. ಟಿವಿ9 ನಡೆಸಿರುವ ಎಕ್ಸ್​​ಕ್ಲೂಸಿವ್ ಸಂದರ್ಶನದಲ್ಲಿ ಮಾತಾಡಿರುವ ನಾಗರಾಜ್ ಬಂದ್ ಬೇಕಾಗಿರೋದು ಹೋಟೆಲ್​ ನಡೆಸುವವರಿಗಲ್ಲ, ಅದು ಕನ್ನಡಿಗರಿಗೆ ಬೇಕಾಗಿದೆ ಕರ್ನಾಟಕಕ್ಕೆ ಬೇಕಾಗಿದೆ, ಯಾರು ಹೇಳುತ್ತಾರೆ ಬೆಂಬಲ ಇಲ್ಲ ಅಂತ, ಸಾಮಾಜಿಕ ಜಾಲತಾಣಗಳಲ್ಲಿ ನೋಡಿ, ಕೋಟ್ಯಾಂತರ ಜನ ಬಂದ್ ಬೇಕು ಎಂದು ಹೇಳುತ್ತಿದ್ದಾರೆ, ನಾವು ಕನ್ನಡನಾಡಿಗಾಗಿ ಬಂದ್​ಗೆ ಕರೆ ನೀಡಿದ್ದೇವೆ ಎಂದು ಅವರು ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಯಾರೇನೇ ಹೇಳಿದರೂ ಮಾರ್ಚ್​ 22ಕ್ಕೆ ಕರೆ ನೀಡಿರುವ ಕರ್ನಾಟಕ ಬಂದ್ ನಿಲ್ಲಿಸಲಾಗದು: ವಾಟಾಳ್ ನಾಗರಾಜ್