Assembly Session; ಅವರ ಮಾತು ಸಹನೆಯಿಂದ ಕೇಳಿದೆವು, ಅದರೆ ನಮ್ಮ ಮಾತು ಅವರು ಕೇಳಲಿಲ್ಲ: ಡಿಕೆ ಶಿವಕುಮಾರ್

|

Updated on: Jul 19, 2024 | 7:13 PM

ಇಷ್ಟಕ್ಕೂ ಕಾಂಗ್ರೆಸ್ ನಾಯಕರು ಅರೋಪಿಸುತ್ತಿರುವ ಬಿಜೆಪಿ ಸರ್ಕಾರd ಹಗರಣಗಳನ್ನು ಮುಖ್ಯಮಂತ್ರಿ ಹೇಳಿದ ಹಾಗೆ ತನಿಖೆಗೆ ಒಪ್ಪಿಸಲಾಗುತ್ತದೆಯೇ ಅಥವಾ ಬಟ್ಟೆಹಾವು ತೋರಿಸಿ ಬಿಜೆಪಿ ನಾಯಕರನ್ನು ಹೆದರಿಸುವ ಪ್ರಯತ್ನ ಮಾಡಲಾಗುತ್ತಿದೆಯೇ? ಬಾಯ್ಮುಚ್ಚಿಕೊಂಡಿದ್ದರೆ ಸರಿ, ಇಲ್ಲಾಂದ್ರೆ ನೋಡಿ ಮತ್ತೇ.....

ಬೆಂಗಳೂರು: ವಿಧಾನಸಭಾ ಅಧಿವೇಶನದ ಇಂದಿ ಕಾರ್ಯಕಲಾಪಗಳು ಮಗಿದ ಬಳಿಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದರು. ಕಾರ್ಯಕಲಾಪದಲ್ಲಿ ಸರ್ಕಾರವು ವಿರೋಧ ಪಕ್ಷದ ನಾಯಕರಿಗೆ ಮಾತಾಡುವ ಅವಕಾಶ ಕಲ್ಪಿಸಿತ್ತು. ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ ಅವರು ಕಳೆದ 4 ದಿನಗಳಲ್ಲಿ ಬಹಳ ಹೊತ್ತು ಮಾತಾಡಿದರು. ಬೇರೆ ಶಾಸಕರು ಸಹ ಮಾತಾಡಿದರು. ಅವರು ಮಾತಾಡುವುದನ್ನೆಲ್ಲ ನಾವು ಸಹನೆಯಿಂದ ಕೇಳಿಸಿಕೊಂಡೆವು, ಅಡ್ಡಿಪಡಿಸುವ ಗೋಜಿಗೆ ಹೋಗಲಿಲ್ಲ. ಅದರೆ ಮುಖ್ಯಮಂತ್ರಿಯವರು ಉತ್ತರ ನೀಡುವಾಗ ಅವರು ಗಲಾಟೆ ಶುರುಮಾಡಿದರು. ಅವರ ಕಾಲದಲ್ಲಿ ನಡೆದ ಹಗರಣಗಳು ಪಟ್ಟಿ ಮಾಡಿ ತನಿಖೆಗೆ ಒಪ್ಪಿಸುವ ಸರ್ಕಾರದ ನಿರ್ಧಾರದ ಬಗ್ಗೆ ಅವರಿಗೆ ಪ್ರಾಯಶಃ ಸುಳಿವು ಸಿಕ್ಕಿತ್ತು. ಹಾಗಾಗೇ ವಿರೋಧ ಪಕ್ಷದ ನಾಯಕರು ಮುಖ್ಯಮಂತ್ರಿಯವರು ಮಾತಾಡುವಾಗ ಪದೇಪದೆ ಅಡ್ಡಿಪಡಿಸಿ ಸದನದ ಸಮಯ ವ್ಯರ್ಥ ಮಾಡಿದರು, ಎಂದು ಶಿವಕುಮಾರ್ ಹೇಳಿದರು. ನಂತರ ಅವರು ಸದನದಲ್ಲಿ ಮುಖ್ಯಮಂತ್ರಿ ಓದಿದ ಅರೋಪಪಟ್ಟಿಯನ್ನು ವಿವರಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:     ಡಬಲ್ ಡೆಕ್ಕರ್ ಫ್ಲೈಓವರ್ ಉದ್ಘಾಟಿಸಿ ತಮ್ಮ ಕಾರಲ್ಲಿ ಟೆಸ್ಟ್ ರೈಡ್ ಗೆ ಹೊರಟ ಡಿಕೆ ಶಿವಕುಮಾರ್

Follow us on