ಯತ್ನಾಳ್ ಮನೆಗೆ ಹೋಗುತ್ತೇವೆಂದು ನಾವ್ಯಾವತ್ತೂ ಹೇಳಿಲ್ಲ: ಬಿಎಸ್ ಯಡಿಯೂರಪ್ಪ

|

Updated on: Nov 25, 2023 | 1:21 PM

ಇನ್ನೊಬ್ಬ ಅಸಮಾಧಾನಿತ ಬಿಜೆಪಿ ನಾಯಕ ವಿ ಸೋಮಣ್ಣ ಅವರೊಂದಿಗೆ ಮಾತಾಡಿ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನವನ್ನು ಯಡಿಯೂರಪ್ಪ ಮಾಡುತ್ತಿದ್ದಾರೆ. ಆದರೆ ಯಡಿಯೂರಪ್ಪನವರೇ ಹೇಳುವಂತೆ ಸೋಮಣ್ಣ ಕರೆ ಸ್ವೀಕರಿಸುತ್ತಿಲ್ಲ. ಅರವಿಂದ ಲಿಂಬಾವಳಿ ಮತ್ತು ರಮೇಶ್ ಜಾರಕಿಹೊಳಿ ಸಹ ವಿಜಯೇಂದ್ರ ರಾಜ್ಯಾಧ್ಯಕ್ಷ ಆದಾಗಿನಿಂದ ಅಸಮಾಧಾನದಿಂದ ಕುದಿಯುತ್ತಿದ್ದಾರೆ.

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಮತ್ತು ಅವರ ಮಗ ಬಿವೈ ವಿಜಯೇಂದ್ರ (BY Vijayendra) ಜೊತೆ ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್​ಗೆ (Basangouda Patil Yatnal) ಇರುವ ವೈಷಮ್ಯ, ತಿಕ್ಕಾಟ, ಸಂಘರ್ಷ ಮತ್ತು ಕೋಪ-ತಾಪ ನಾವೆಲ್ಲ ಅಂದುಕೊಂಡಿರುವುದಕ್ಕಿಂತ ಹೆಚ್ಚು ಆಳ ಮತ್ತು ಆಗಾಧವಾಗಿದೆ. ಇವತ್ತು ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಯಡಿಯೂರಪ್ಪನವರಿಗೆ; ಬಸನಗೌಡ ಯತ್ನಾಳ್ ವಿಜಯಪುರ ಕ್ಷೇತ್ರದ ಅಭಿವೃದ್ಧಿಗೆ ಬಿಡುಗಡೆಯಾದ ಹಣವನ್ನು ವಿಜಯೇಂದ್ರ ತಡೆಹಿಡಿದಿದ್ದರು ಹಾಗಾಗಿ ಅವರು ತನ್ನ ಮನೆಗೆ ಬರೋದು ಬೇಡ ಅಂತ ಹೇಳಿರುವುದನ್ನು ತಿಳಿಸಿದಾಗ ಬಹಳ ತೀಕ್ಷ್ಣವಾಗಿ, ‘ಅವರ ಮನೆಗ ಹೋಗುತ್ತೇವೆ ಅಂದಿದ್ಯಾರು?’ ಅಂತ ಮರುಸವಾಲು ಹಾಕಿದರು. ಅದನ್ನೇ ನಾವು ಹೇಳಿದ್ದು. ಕೇವಲ ಯತ್ನಾಳ್ ಅವರಿಗೆ ಮಾತ್ರ ಯಡಿಯೂರಪ್ಪ ಕುಟುಂಬದ ಮೇಲೆ ಸಿಟ್ಟಿಲ್ಲ; ತಮ್ಮ ಹಾಗೂ ವಿಜಯೇಂದ್ರ ವಿರುದ್ಧ ಬಹಳ ಸಮಯದಿಂದ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಾಪಾತದ ಆರೋಪಗಳನ್ನು ಮಾಡುತ್ತಿರುವ ಯತ್ನಾಳ್ ಮೇಲೂ ಮಾಜಿ ಮುಖ್ಯಮಂತ್ರಿಗಳ ಕುಟುಂಬಕ್ಕೆ ಅಷ್ಟೇ ಸಿಟ್ಟಿದೆ.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on