ರವಿಯವರನ್ನು ಬಿಡುಗಡೆ ಮಾಡುವಂತೆ ಹೈಕೋರ್ಟ್ ನೀಡಿದ ಆದೇಶ ಸ್ವಾಗತಾರ್ಹ: ಬಿವೈ ವಿಜಯೇಂದ್ರ
ಪೊಲೀಸರು ಮೇಲಿಂದ ಬರುತ್ತಿದ್ದ ಆದೇಶಗಳ ಒತ್ತಡದಲ್ಲಿದ್ದಿದ್ದು ಸ್ಪಷ್ಟವಾಗಿ ಗೊತ್ತಾಗುತ್ತದೆ, ಒಬ್ಬ ಭಯೋತ್ಪಾದಕನನ್ನು ನಡೆಸಿಕೊಳ್ಳುವ ಹಾಗೆ ರವಿಯವರನ್ನು ನಡೆಸಿಕೊಂಡಿದ್ದಾರೆ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ ಪರಮೇಶ್ವರ್ ಇಬ್ಬರೂ ರಾಜ್ಯದ ಜನತೆಯ ಕ್ಷಮೆ ಕೇಳಬೇಕು ಎಂದು ಬಿವೈ ವಿಜಯೇಂದ್ರ ಹೇಳಿದರು.
ಹಾವೇರಿ: ಬೆಳಗಾವಿಯಿಂದ ಬೆಂಗಳೂರಿಗೆ ಪ್ರಯಾಣಿಸುವಾಗ ಹಾವೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಸಿಟಿ ರವಿಯವರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಹೈಕೋರ್ಟ್ ನೀಡಿರುವ ಆದೇಶವನ್ನು ಸ್ವಾಗತಿಸುತ್ತೇವೆ, ಪೊಲೀಸರು ಆದೇಶದ ಪ್ರತಿಗಾಗಿ ಕಾಯುತ್ತಿದ್ದಾರೆ, ಒಬ್ಬ ಜನ ಪ್ರತಿನಿಧಿಯನ್ನು ರಾಜ್ಯ ಸರ್ಕಾರ ಕಾನೂನುಬಾಹಿರವಾಗಿ ನಡೆಸಿಕೊಂಡಿದೆ ಮತ್ತು ಯಾವುದೇ ನೋಟೀಸ್ ಇಲ್ಲದೆ ಅವರನ್ನು ಬಂಧಿಸಿದ್ದು ಒಂದು ಅಕ್ಷಮ್ಯ ಅಪರಾಧ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಯಡಿಯೂರಪ್ಪ ಹುಟ್ಟುಹಬ್ಬ ಆಚರಣೆ ವಿಷಯವೇ ಅಲ್ಲ, ಚರ್ಚೆ ಕೂಡ ಆಗಿಲ್ಲ: ಬಿವೈ ವಿಜಯೇಂದ್ರ