ಸರ್ಕಾರವನ್ನು ಕಿತ್ತೆಸೆಯುವವರೆಗೆ ಬಿಜೆಪಿಯ ಹೋರಾಟ ಮುಂದುವರಿಯಲಿದೆ, ವಿಶ್ರಮಿಸುವುದಿಲ್ಲ: ಅರ್ ಅಶೋಕ

Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 23, 2025 | 5:16 PM

ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ, ಇದು ಅಭಿವೃದ್ಧಿಶೂನ್ಯ ಸರ್ಕಾರವಾಗಿದೆ, ಹಾಗಾಗಿ ಇದನ್ನು ಕಿತ್ತೆಸುಯುವವರೆಗೆ ಬಿಜೆಪಿ ನಾಯಕರು ವಿಶ್ರಮಿಸುವುದಿಲ್ಲ, ತಮ್ಮ ರಾಷ್ಟ್ರೀಯ ನಾಯಕರು ಮತ್ತು ರಾಜ್ಯದ ನಾಯಕರ ಜೊತೆ ಸಮಾಲೋಚನೆ ನಡೆಸಿ ಮುಂದಿನ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸುತ್ತೇವೆ ಎಂದು ಅರ್ ಅಶೋಕ ಹೇಳಿದರು

ಹಾವೇರಿ, ಜೂನ್ 23: ವಸತಿ ಹಂಚಿಕೆ ಯೋಜನೆ ಅಡಿ ಭ್ರಷ್ಟಾಚಾರ ನಡೆದಿದೆ ಎಂದು ಆಳಂದ್ ಶಾಸಕ ಬಿಆರ್ ಪಾಟೀಲ್ (BR Patil) ಆರೋಪ ಮಾಡಿದ ಬಳಿಕ ಕಾಂಗ್ರೆಸ್ ಶಾಸಕರೇ ವಸತಿ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ (BZ Zameer Ahmed Khan) ರಾಜೀನಾಮೆ ನೀಡಬೇಕೆಂದು ಹೇಳುತ್ತಿರುವುದನ್ನು ವಿರೋಧ ಪಕ್ಷದ ನಾಯಕ ಆರ್ ಅಶೋಕ ಸ್ವಾಗತಿಸಿದರು. ನಗರದಲ್ಲಿಂದು ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿದ ಅಶೋಕ, ಕಾಂಗ್ರೆಸ್ ಪಕ್ಷದ ಕೆಲ ಉತ್ತಮ ಶಾಸಕರು ಜಮೀರ್ ರಾಜೀನಾಮೆ ನೀಡಬೇಕೆಂದು ಹೇಳುತ್ತಿದ್ದಾರೆ, ಅದನ್ನು ಸ್ವಾಗತಿಸುತ್ತೇವೆ, ಭ್ರಷ್ಟಾಚಾರದಲ್ಲಿ ಮುಳುಗಿರುವ ಸರ್ಕಾರವನ್ನೇ ವಜಾ ಮಾಡಬೇಕು, ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಲಿ ಎಂದು ಅಶೋಕ ಹೇಳಿದರು.

ಇದನ್ನೂ ಓದಿ:  ಹೌಸಿಂಗ್ ಬೋರ್ಡ್ ಕಲೆಕ್ಷನ್ ಬೋರ್ಡ್, ಮನಿ ಕೊಟ್ರೆ ಮನೆ: ಅಶೋಕ್ ವ್ಯಂಗ್ಯ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ