ಈ ಸಲ ಹಿಜಾಬ್ ತೆಗೆದಿಟ್ಟು ಪರೀಕ್ಷೆ ಬರೆದಿದ್ದೇವೆ, ಮುಂದಿನ ಸಲ ಧರಿಸಲು ಸರ್ಕಾರ ಅನುಮತಿ ನೀಡಬೇಕು: ವಿದ್ಯಾರ್ಥಿನಿಯರು
ಪರೀಕ್ಷಾ ಹಾಲ್ ನೊಳಗೆ ಹಿಜಾಬ್ ಧರಿಸಿ ಹೋಗಲು ಅನುಮತಿ ಇರಲಿಲ್ಲವೆಂದು ಹೇಳಿದ ವಿದ್ಯಾರ್ಥಿನಿಯರು ಈ ಬಾರಿ ನಾವು ಅದನ್ನು ತೆಗೆದಿಟ್ಟು ಪರೀಕ್ಷೆ ಬರೆದಿದ್ದೇವೆ. ಆದರೆ, ಮುಂದಿನ ನಮಗೆ ಹಿಜಾಬ್ ಧರಿಸುವ ಅನುಮತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಬೇಕೆಂದು ಒಬ್ಬ ವಿದ್ಯಾರ್ಥಿನಿ ಮನವಿ ಮಾಡಿದಳು.
ಶಿವಮೊಗ್ಗ: ರಾಜ್ಯಾದ್ಯಂತ ಎಸ್ ಎಸ್ ಎಲ್ ಸಿ ಪರೀಕ್ಷೆಗಳು (SSLC Exams) ಸೋಮವಾರದಿಂದ ಪ್ರಾರಂಭವಾಗಿವೆ. ಎಲ್ಲೆಡೆ ಬೇಸಿಗೆ ಶುರುವಾಗಿದೆ ಮತ್ತು ಧಗೆಯಲ್ಲೇ ಮಕ್ಕಳು ಪರೀಕ್ಷೆಗ ಮೊದಲ ಪರೀಕ್ಷೆ ಬರೆದಿದ್ದಾರೆ. ಮುಸ್ಲಿಂ ಸಮುದಾಯದ (Muslim community) ವಿದ್ಯಾರ್ಥಿನಿಯರು ಪರೀಕ್ಷೆಗಳನ್ನು ಬಾಯ್ಕಾಟ್ (boycott) ಮಾಡುತ್ತಾರೇನೋ ಎಂಬ ಆತಂಕವಂತೂ ಇತ್ತು. ಶನಿವಾರದಂದೇ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು ಮುಸ್ಲಿಂ ವಿದ್ಯಾರ್ಥಿನಿಯರು ಪರೀಕ್ಷಾ ಕೇಂದ್ರದವರೆಗೆ ಹಿಜಾಬ್ ಧರಿಸಿಕೊಂಡು ಹೋಗಬಹುದಾದರೂ, ತಾವು ಪರೀಕ್ಷೆ ಬರೆಯುವ ಹಾಲ್ ನೊಳಗೆ ಅದನ್ನು ಧರಿಸಿ ಹೋಗುವಂತಿಲ್ಲ ಅಂತ ಸ್ಪಷ್ಟಪಡಿಸಿದ್ದರು. ಶಿವಮೊಗ್ಗನಲ್ಲಿ ಪರೀಕ್ಷೆ ಬರೆದು ಹೊರಬಂದ ಮುಸ್ಲಿಂ ವಿದ್ಯಾರ್ಥಿನಿಯರೊಂದಿಗೆ ಟಿವಿ9 ಪ್ರತಿನಿಧಿ ಮಾತಾಡಿದ್ದಾರೆ. ಪರೀಕ್ಷೆ ಚೆನ್ನಾಗಿ ಬರೆದಿದ್ದೇವೆ ಅಂತ ಅವರೆಲ್ಲ ಹೇಳಿದರು.
ಪರೀಕ್ಷಾ ಹಾಲ್ ನೊಳಗೆ ಹಿಜಾಬ್ ಧರಿಸಿ ಹೋಗಲು ಅನುಮತಿ ಇರಲಿಲ್ಲವೆಂದು ಹೇಳಿದ ವಿದ್ಯಾರ್ಥಿನಿಯರು ಈ ಬಾರಿ ನಾವು ಅದನ್ನು ತೆಗೆದಿಟ್ಟು ಪರೀಕ್ಷೆ ಬರೆದಿದ್ದೇವೆ. ಆದರೆ, ಮುಂದಿನ ನಮಗೆ ಹಿಜಾಬ್ ಧರಿಸುವ ಅನುಮತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಬೇಕೆಂದು ಒಬ್ಬ ವಿದ್ಯಾರ್ಥಿನಿ ಮನವಿ ಮಾಡಿದಳು.
ನಾವು ತಲೆಭಾಗವನ್ನು ಯಾವಾಗಲೂ ಮುಚ್ಚಬೇಕು, ಅದು ನಮ್ಮ ಸಂಪ್ರದಾಯ, ಮನೆಯಿಂದ ಪರೀಕ್ಷಾ ಕೇಂದ್ರದವರೆಗೆ ನಾವು ಹಿಜಾಬ್ ಧರಿಸಿ ಬರುವ ಅನುಮತಿ ಇದೆ. ಆದರೆ ಅದನ್ನು ಧರಿಸಿ ಒಳಗೆ ಹೋಗುವಂತಿರಲಿಲ್ಲ. ಪರೀಕ್ಷೆ ಬರೆಯಲು ನಮಗೇನೂ ತೊಂದರೆಯಾಗಲಿಲ್ಲ. ಆದರೆ ತಲೆಮೇಲೆ ಹಿಜಾಬ್ ಇಲ್ಲದಿದ್ದಿದ್ದು ನಮ್ಮ ಮನಸನ್ನು ಕಾಡುತಿತ್ತು. ಹಾಗಾಗಿ ಮುಂದಿನ ಸಲ ನಮಗೆ ಅದನ್ನು ಧರಿಸಿಯೇ ಪರೀಕ್ಷೆ ಬರೆಯಲು ಸರ್ಕಾರ ಅನುಮತಿ ನೀಡಬೇಕು, ಎಂದು ವಿದ್ಯಾರ್ಥಿನಿಯರು ಹೇಳಿದರು.
ಇದನ್ನೂ ಓದಿ: ಇಂದಿನಿಂದ ಕರ್ನಾಟಕದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭ; ಹಿಜಾಬ್ ಧರಿಸಿ ಪರೀಕ್ಷಾ ಕೇಂದ್ರಕ್ಕೆ ಬಂದ ವಿದ್ಯಾರ್ಥಿನಿ