Weekly Horoscope: ಜೂನ್​ 9 ರಿಂದ 15 ರವರೆಗಿನ ವಾರ ಭವಿಷ್ಯ

Updated on: Jun 08, 2025 | 7:18 AM

ಡಾ. ಬಸವರಾಜ ಗುರೂಜಿ ಅವರು ಜೂನ್ 9 ರಿಂದ 15ರ ವಾರದ ರಾಶಿ ಭವಿಷ್ಯವನ್ನು ತಿಳಿಸಿದ್ದಾರೆ. ಈ ವಾರದಲ್ಲಿ ಮೇಷ ಮತ್ತು ವೃಷಭ ರಾಶಿಯವರಿಗೆ ಗ್ರಹಗಳ ಶುಭಫಲಗಳಿವೆ. ಹಣಕಾಸು, ಉದ್ಯೋಗ, ಮತ್ತು ಕುಟುಂಬದಲ್ಲಿನ ವಿಷಯಗಳ ಕುರಿತು ವಿವರವಾದ ಮಾಹಿತಿಯನ್ನು ಒಳಗೊಂಡಿದೆ. ವಾರದ ವಿಶೇಷ ದಿನಗಳು ಮತ್ತು ಧಾರ್ಮಿಕ ಆಚರಣೆಗಳ ಬಗ್ಗೆಯೂ ತಿಳಿಸಲಾಗಿದೆ.

ಬೆಂಗಳೂರು, ಜೂನ್​ 08: ವಾರ ಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಜೂನ್ 09 ರಿಂದ 15ರ ವರೆಗಿನ ವಾರದ ರಾಶಿ ಭವಿಷ್ಯವನ್ನು ತಿಳಿಸಿಕೊಟ್ಟಿದ್ದಾರೆ. ಈ ವಾರ ವಿಶ್ವಾವಸಾನ ಸಂವತ್ಸರ, ಉತ್ತರಾಯಣ, ಜೇಷ್ಠ ಮಾಸ, ಗ್ರೀಷ್ಮ ಋತು, ಶುಕ್ಲ ಪಕ್ಷ ಮತ್ತು ಕೃಷ್ಣ ಪಕ್ಷಗಳ ಸಂಯೋಗವಿದೆ. ಈ ವಾರ ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿ ದುರ್ಗಾ ದೇವಿ ಮತ್ತು ವೆಂಕಟೇಶ್ವರ ಸ್ವಾಮಿಗಳ ಉತ್ಸವ, ವಟಸಾವಿತ್ರಿ ವ್ರತ, ಭೂಮಿ ಹುಣ್ಣಿಮೆ, ಸಂತ ಕಬೀರದಾಸರ ಜಯಂತಿ, ಕಂಚಿ ವರದರಾಜ ಸ್ವಾಮಿಗಳ ರಥೋತ್ಸವ, ಮೇಲುಕೋಟೆಯಲ್ಲಿ ಪಲ್ಲಕ್ಕಿ ಉತ್ಸವ, ಮಿಥುನ ಸಂಕ್ರಮಣ, ತಂದೆಗಳ ದಿನ ಮತ್ತು ಸಂಕಷ್ಟ ಚತುರ್ಥಿ ಆಚರಣೆಗಳು ನಡೆಯಲಿವೆ. ಶನಿ ಗ್ರಹ ಮೀನ ರಾಶಿಯಲ್ಲಿ, ಶುಕ್ರ ಗ್ರಹ ಮೇಷ ರಾಶಿಯಲ್ಲಿ, ಗುರು, ಬುಧ ಮತ್ತು ರವಿ ಗ್ರಹಗಳು ವಾರದ ಅಂತ್ಯದಲ್ಲಿ ಮಿಥುನ ರಾಶಿಗೆ ಪ್ರವೇಶಿಸಲಿವೆ ಎಂದು ಹೇಳಿದ್ದಾರೆ. ರಾಹು ಕುಂಭ ರಾಶಿಯಲ್ಲಿದ್ದು, ಕುಜ ಮತ್ತು ಕೇತು ಗ್ರಹಗಳು ಸಿಂಹ ರಾಶಿಯಲ್ಲಿ ಇರಲಿವೆ.

Follow Us
Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More