Weekly Horoscope: ಕಾರ್ತಿಕ ಮಾಸದ ಆರಂಭದಲ್ಲೇ ಈ 4 ರಾಶಿಗಳಿಗೆ ರಾಜಯೋಗ! ನಿಮ್ಮ ರಾಶಿ ಹೇಗಿದೆ?

Updated on: Nov 08, 2026 | 8:32 AM

ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ನವೆಂಬರ್ 9 ರಿಂದ 15, 2026ರ ವಾರದ ರಾಶಿಫಲವನ್ನು ಪ್ರಸ್ತುತಪಡಿಸಿದ್ದಾರೆ. ಈ ಅವಧಿಯಲ್ಲಿ ಕಾರ್ತಿಕ ಮಾಸದ ಆರಂಭ, ಗ್ರಹಗಳ ಸ್ಥಾನಪಲ್ಲಟಗಳು ಹಾಗೂ ವಿವಿಧ ಪರ್ವಕಾಲಗಳ ಮಹತ್ವವನ್ನು ವಿವರಿಸಿದ್ದಾರೆ. ದ್ವಾದಶ ರಾಶಿಗಳ ಮೇಲೆ ಆಗುವ ಶುಭ ಮತ್ತು ಅಶುಭ ಪರಿಣಾಮಗಳು, ಜಾಗರೂಕತೆ ಹಾಗೂ ಪರಿಹಾರೋಪಾಯಗಳ ಕುರಿತು ಮಾರ್ಗದರ್ಶನ ನೀಡಿದ್ದಾರೆ.

ಟಿವಿ9 ಕನ್ನಡ ಡಿಜಿಟಲ್​ನ ವಾರ ಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು ನವೆಂಬರ್ 9 ರಿಂದ ನವೆಂಬರ್ 15, 2026ರ ವಾರದ ಫಲಾಫಲಗಳನ್ನು ತಿಳಿಸಿದ್ದಾರೆ. ಈ ಅವಧಿಯು ಪರಾಭವನಾಮ ಸಂವತ್ಸರ, ದಕ್ಷಿಣಾಯನ, ಆಶ್ವೇಜ ಮಾಸ ಮುಕ್ತಾಯಗೊಂಡು ಕಾರ್ತಿಕ ಮಾಸದ ಪ್ರಾರಂಭವನ್ನು ಸೂಚಿಸುತ್ತದೆ.

ಈ ವಾರದಲ್ಲಿ ಅಮಾವಾಸ್ಯೆ, ಪಾಡ್ಯ, ಬಿದಿಗೆ, ತದಿಗೆ, ಚೌತಿ, ಪಂಚಮಿ, ಷಷ್ಟಿ ಮುಂತಾದ ಸಪ್ತ ತಿಥಿಗಳು ಇವೆ. ಕೇದಾರೇಶ್ವರ ವ್ರತ, ಬಲೀಂದ್ರ ಪೂಜೆ, ಬಲಿ ಪಾಡ್ಯಮಿ, ಹಾಸನಾಂಬ ದೇವಸ್ಥಾನದ ಬಾಗಿಲು ಮುಚ್ಚುವಿಕೆ, ಅಕ್ಕನ ತದಿಗೆ, ವಿನಾಯಕಿ ಚತುರ್ಥಿ, ಪಾಂಡವ ಪಂಚಮಿ, ತಲಕಾಡಿನಲ್ಲಿ ವೈದ್ಯನಾಥೇಶ್ವರ ರಥೋತ್ಸವ ಮತ್ತು ವಿಕ್ರಮಶಕೆಯ ಪ್ರಾರಂಭದಂತಹ ಪ್ರಮುಖ ಘಟನೆಗಳು ನಡೆಯಲಿವೆ ಎಂದು ಬಸವರಾಜ ಗುರೂಜಿ ತಿಳಿಸಿದ್ದಾರೆ.

 

Published on: Nov 08, 2026 08:32 AM
Loading...
Unable to load recommendations.
Follow Us
ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More