ಮೈಸೂರು ದಸರಾ ಉತ್ಸವಕ್ಕೆ ತಯಾರಾಗುತ್ತಿರುವ ಗಜಪಡೆಗೆ ಇಂದು ನಡೆಯಿತು ತೂಕ ಪರೀಕ್ಷೆ!

|

Updated on: Sep 27, 2023 | 12:28 PM

ಗಜಪಡೆಯ ಲೀಡರ್ ಅಭಿಮನ್ಯು ಜಂಬೂ ಸವಾರಿ ದಿನ ಅಂಬಾರಿ ಹೊರಲಿರುವುದರಿಂದ ಕಳೆದ ವಾರ ಅವನ ಹೆಗಲ ಮೇಲೆ ಅಂಬಾರಿಯಷ್ಟು ಭಾರದ ಮರಳು ಮೂಟೆಗಳನ್ನು ಹೊರೆಸಿ ಅರಮಮನೆಯಿಂದ ಬನ್ನಿಮಂಟಪದವರೆಗೆ ನಡೆಸಲಾಯಿತು. ಇಂದು ಬೆಳಗ್ಗೆ ಗಜಪಡೆಯ ಎಲ್ಲ ಸದಸ್ಯರ ತೂಕ ಪರೀಕ್ಷೆ ಮಾಡಲಾಗಿದೆ. ನಿಮಗೆ ಗೊತ್ತಿರಬಹುದು, ಸಾಮಾನ್ಯವಾಗಿ ವಯಸ್ಕ ಅನೆಗಳ ತೂಕ 5,000 ಕೇಜಿಗಳಿಂದ 7,000 ಕೇಜಿಗಳಷ್ಟಿರುತ್ತದೆ.

ಮೈಸೂರು: ರಾಜ್ಯದ ಸಾಂಸ್ಕೃತಿಕ ನಗರದಲ್ಲಿ ಅತ್ಯಂತ ವಿಜೃಂಭಣೆ, ಸಡಗರ ಸಂಭ್ರಮಗಳಿಂದ ನಡೆಯುವ ನಾಡಹಬ್ಬ ದಸರಾಗೆ (Nada Habba Dasara) ಕೆಲವೇ ವಾರಗಳು ಬಾಕಿ ಉಳಿದಿವೆ. ದಸರಾ ಉತ್ಸವ ಪ್ರಮುಖ ಅಕರ್ಷಣೆ ಜಂಬೂ ಸವಾರಿ (Jumbo Savari) ಅಂತ ಯಾರಿಗೆ ಗೊತ್ತಿಲ್ಲ? ವೈಭವೋಪೇತ ಜಂಬೂ ಸವಾರಿಯನ್ನು ವೀಕ್ಷಿಸಲು ದೇಶವಿದೇಶಗಳಿಂದ ಜನ ಮೈಸೂರಿಗೆ ಬರುತ್ತಾರೆ. ಇದರಲ್ಲಿ ಪಾಲ್ಗೊಳ್ಳುವ ಗಜಪಡೆಗೆ ಕಳೆದ ಮೂರ್ನಾಲ್ಕು ವಾರಗಳಿಂದ ತಾಲೀಮು (practice and rehearsal) ಶುರುವಾಗಿದೆ. ಆನೆಗಳಿಗೆ ದುಬಾರೆ ಆನೆ ಶಿಬಿರದಿಂದ ಮೈಸೂರಿಗೆ ಕರೆತಂದ ಬಳಿಕ ರಾಜಭೋಗ ಒದಗಿಸಲಾಗುತ್ತದೆ. ಗಜಪಡೆಯ ಲೀಡರ್ ಅಭಿಮನ್ಯು (Abhimanyu ) ಜಂಬೂ ಸವಾರಿ ದಿನ ಅಂಬಾರಿ ಹೊರಲಿರುವುದರಿಂದ ಕಳೆದ ವಾರ ಅವನ ಹೆಗಲ ಮೇಲೆ ಅಂಬಾರಿಯಷ್ಟು ಭಾರದ ಮರಳು ಮೂಟೆಗಳನ್ನು ಹೊರೆಸಿ ಅರಮಮನೆಯಿಂದ ಬನ್ನಿಮಂಟಪದವರೆಗೆ ನಡೆಸಲಾಯಿತು. ಇಂದು ಬೆಳಗ್ಗೆ ಗಜಪಡೆಯ ಎಲ್ಲ ಸದಸ್ಯರ ತೂಕ ಪರೀಕ್ಷೆ ಮಾಡಲಾಗಿದೆ. ನಿಮಗೆ ಗೊತ್ತಿರಬಹುದು, ಸಾಮಾನ್ಯವಾಗಿ ವಯಸ್ಕ ಅನೆಗಳ ತೂಕ 5,000 ಕೇಜಿಗಳಿಂದ 7,000 ಕೇಜಿಗಳಷ್ಟಿರುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ