ಕಸ್ತೂರಿ ರಂಗನ್ ವರದಿ ವಿರೋಧಿಸಿ ಸಾಗರದಲ್ಲಿ ಪಶ್ಚಿಮ ಘಟ್ಟ ರೈತ ಸಹಕಾರ ವೇದಿಕೆಯಿಂದ ಬೃಹತ್ ಪಾದಯಾತ್ರೆ

Edited By:

Updated on: Sep 03, 2026 | 5:28 PM

ಡಾ. ಕಸ್ತೂರಿ ರಂಗನ್ ವರದಿಯ ನ್ಯೂನತೆಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಪಶ್ಚಿಮಘಟ್ಟ ರೈತ ಸಹಕಾರ ವೇದಿಕೆಯಿಂದ ಶಿವಮೊಗ್ಗದ ಸಾಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಶಾಸಕ ಬೇಳೂರು ಗೋಪಾಲಕೃಷ್ಣ ಅವರು ವರದಿಯಿಂದ ಜನವಸತಿ, ಕೃಷಿ ಭೂಮಿ ಹೊರಗಿಡಲು ಮತ್ತು ಭೌತಿಕ ಸರ್ವೆ ನಡೆಸಲು ಒತ್ತಾಯಿಸಿದರು. ವರದಿ ಹಿಂಪಡೆಯುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಈ ವೇಳೆ ಘೋಷಿಸಲಾಯಿತು.

ಶಿವಮೊಗ್ಗ, ಸೆಪ್ಟೆಂಬರ್​​ 03: ಕಸ್ತೂರಿ ರಂಗನ್ ವರದಿ ವಿರೋಧಿಸಿ ಪಶ್ಚಿಮ ಘಟ್ಟ ರೈತ ಸಹಕಾರ ವೇದಿಕೆಯಿಂದ ಪಾದಯಾತ್ರೆ ಸಾಗರದಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆವಿನಹಳ್ಳಿ ಗ್ರಾಮದಿಂದ ಸಾಗರದವರೆಗೂ ಪಾದಯಾತ್ರೆ ನಡೆಸಿರುವ ಹೋರಾಟಗಾರರು, ಕಸ್ತೂರಿ ರಂಗನ್ ವರದಿ ಮಾರ್ಪಾಡು ಮಾಡುವಂತೆ ಆಗ್ರಹಿಸಿದ್ದಾರೆ. ಪಾದಯಾತ್ರೆಯಲ್ಲಿ ಸಾವಿರಾರು ರೈತರು, ಕಾಂಗ್ರೆಸ್​​ ಶಾಸಕ ಬೇಳೂರು ಗೋಪಾಲಕೃಷ್ಣ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ್ ಗೌಡ, ಮಾಜಿ ಶಾಸಕ ಹರತಾಳು ಹಾಲಪ್ಪ ಸೇರಿ ಹಲವರು ಭಾಗಿಯಾಗಿದ್ದರು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us