Daily Devotional: ಕನಸಿನಲ್ಲಿ ದೇವರು, ದೇವಾಲಯಗಳು ಬಂದ್ರೆ ಏನರ್ಥ? ಇಲ್ಲಿದೆ ಅಧ್ಯಾತ್ಮ ಸಂಬಂಧಿತ ವಿವರ
ಅಧ್ಯಾತ್ಮ, ದೇವರು ಇತ್ಯಾದಿ ವಿಚಾರಗಳು ಬಂದಾಗ ನಮ್ಮ ನಂಬಿಕೆ ಬಹಳ ಮುಖ್ಯವಾಗುತ್ತದೆ. ಅನೇಕರಿಗೆ ಕನಸಿನಲ್ಲಿ ದೇವಾಲಯ ಅಥವಾ ದೇವರು ಕಾಣಿಸುತ್ತಾರೆ. ನಿರ್ದಿಷ್ಟವಾದ ದೇವಸ್ಥಾನ ಅಥವಾ ದೇವರು ನಮ್ಮ ಕನಸಿನಲ್ಲಿ ಬಂದರೆ ಅಧ್ಯಾತ್ಮದ ಪ್ರಕಾರ ಅದಕ್ಕೆ ಏನರ್ಥ? ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ.
ಅನೇಕರು ಕನಸಿನಲ್ಲಿ ದೇವಾಲಯಗಳ ದೇವರ ದರ್ಶನ ಮಾಡಿರುತ್ತಾರೆ. ಕನಸಿನಲ್ಲಿ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದೆ, ಕನಸಿನಲ್ಲಿ ಧರ್ಮಸ್ಥಳ ದೇಗುಲ ಕಾಣಿಸಿತು, ಕನಸಿನಲ್ಲಿ ಮೈಸೂರಿನ ಚಾಮುಂಡೇಶ್ವರಿ ದೇವಿ ಕಾಣಿಸಿದರು ಎಂಬ ಅನುಭವವನ್ನು ಅನೇಕರು ಹಂಚಿಕೊಂಡಿದ್ದಾರೆ. ಕನಸಿನಲ್ಲಿ ದೇಗುಲ, ದೇವತಾ ಲಾಂಛನ, ಕಲ್ಯಾಣಿಗಳು, ನೀರು ಕಾಣಿಸುವುದು ಸಹಜ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ. ಅಲ್ಲದೆ, ಪದೇ ಪದೇ ಕನಸಿನಲ್ಲಿ ಹೀಗೆ ಒಂದು ದೇಗುಲ ಅಥವಾ ದೇವರ ದರ್ಶನವಾದರೆ ಅದಕ್ಕೆ ಏನು ಆಧ್ಯಾತ್ಮಿಕ ಹಿನ್ನೆಲೆ ಇದೆ? ಅದರ ಫಲಾಫಲಗಳೇನು ಎಂಬುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ವಿಡಿಯೋ ನೋಡಿ.
Published on: Nov 07, 2024 06:58 AM