ಸಾಯುವುದಕ್ಕೂ ಮೊದಲು ಕೃಷಿ ತಾಪಂಡಗೆ ವೈಶಾಕ್ ಕಳುಹಿಸಿದ ಸಂದೇಶ ಏನು?
ಉದ್ಯಮಿಗೆ ಬೆದರಿಕೆ ಹಾಕಿದ್ದ ಪ್ರಕರಣದ ಆರೋಪಿ, ನಟಿ ಕೃಷಿ ತಾಪಂಡಾ ಗೆಳೆಯ ವೈಶಾಕ್ ರಾಜರಾಜೇಶ್ವರಿ ನಗರದ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾವು ಬದುಕಿನ ಹೋರಾಟದಲ್ಲಿದ್ದ ಆತನಿಗೆ ನಟಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗೋಣವೆಂದು ಧೈರ್ಯ ತುಂಬಿದರೂ ಪ್ರಯೋಜನವಾಗಲಿಲ್ಲ. ನಟಿ ಮನೆಗೆ ಬರುವಷ್ಟರಲ್ಲಿ ಆತ ನೇಣಿಗೆ ಶರಣಾಗಿದ್ದು, ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಉದ್ಯಮಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಜೈಲು ಸೇರಿ ಇತ್ತೀಚೆಗಷ್ಟೇ ಹೊರಬಂದಿದ್ದ ವೈಶಾಕ್, ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತಮ್ಮ ಗೆಳತಿ, ನಟಿ ಕೃಷಿ ತಾಪಂಡಾಗೆ ಮೆಸೇಜ್ ಮಾಡಿರುವುದು ಬೆಳಕಿಗೆ ಬಂದಿದೆ. ‘ನನಗೆ ಜೀವನವೇ ಸಾಕಾಗಿದೆ, ಬದುಕಲು ಇಷ್ಟವಿಲ್ಲ’ ಎಂದು ಆತ ನಿನ್ನೆ ಸಂಜೆ ನಟಿಗೆ ವಾಟ್ಸಾಪ್ ಸಂದೇಶ ಕಳುಹಿಸಿದ್ದನು. ಈ ವೇಳೆ ನಟಿ ಕೃಷಿ ತಾಪಂಡಾ ಅವರು ‘ಕ್ಷೇಮವನ’ದಲ್ಲಿದ್ದರು. ವಿಷಯ ತಿಳಿಯುತ್ತಿದ್ದಂತೆ ಆತಂಕಗೊಂಡ ನಟಿ, ‘ಆ ರೀತಿ ಯಾವುದೇ ತಪ್ಪು ನಿರ್ಧಾರ ಮಾಡಿಕೊಳ್ಳಬೇಡ, ನಾನು ಮನೆಗೆ ಬರುತ್ತೇನೆ, ಅಲ್ಲಿಯವರೆಗೂ ಕಾಯಿ. ನಾವಿಬ್ಬರೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗಿ ಬರೋಣ, ಅಲ್ಲಿಗೆ ಹೋಗಿ ಪೂಜೆ ಮಾಡಿಸಿದರೆ ಮನಸ್ಸು ಹಗುರವಾಗುತ್ತದೆ’ ಎಂದು ಸಮಾಧಾನಪಡಿಸಿದ್ದರು. ಆದರೆ ನಟಿ ಮನೆಗೆ ತಲುಪುವಷ್ಟರಲ್ಲಿ ವೈಶಾಕ್ ನೇಣಿಗೆ ಶರಣಾಗಿದ್ದನು.
ಆದರೆ ತಡರಾತ್ರಿ ನಟಿ ಕೃಷಿ ತಾಪಂಡಾ ಅವರು ಮನೆಗೆ ಬರುವಷ್ಟರಲ್ಲಿ ವೈಶಾಕ್ ಆತ್ಮಹತ್ಯೆ ಮಾಡಿಕೊಂಡಿದ್ದನು. ಇದನ್ನು ಕಂಡು ದಿಕ್ಕೆಟ್ಟ ನಟಿ, ತಕ್ಷಣವೇ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ವೈಶಾಕ್ಗೆ ಈಗಾಗಲೇ ಮದುವೆ ಆಗಿತ್ತು. ಪತ್ನಿ ಜೊತೆ ಅವರು ಮಾತು ಬಿಟ್ಟಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಕಲ್ಲಯ್ಯಜ್ಜ ಶ್ರೀಗಳಿಗೆ ಮಠದ ಟ್ರಸ್ಟಿಗಳಿಂದಲೇ ಜೀವ ಬೆದರಿಕೆ ಆರೋಪ
‘11 ವರ್ಷಗಳಾದ್ರೂ ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಕರ ನೇಮಕಾತಿ ಇಲ್ಲ’
ಐವರು ಜಲಸಮಾಧಿ ಕೇಸ್: ಘಟನೆಯಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಹೇಳಿದ್ದೇನು?
ಜಾರಕಿಹೊಳಿ ಬಾಮೈದನ ಮನೆ ಮೇಲೆ ಇಡಿ ದಾಳಿ: 24 ಗಂಟೆ ಕಳೆದ್ರೂ ಮುಗಿಯದ ಶೋಧ

