AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ಸಂಸ್ಕೃತದಲ್ಲಿನ ಮಂತ್ರಗಳನ್ನು ನಿತ್ಯ ಪಠಿಸುವುದರಿಂದ ಆಗುವ ಲಾಭವೇನು? ವಿಡಿಯೋ ನೋಡಿ

Daily Devotional: ಸಂಸ್ಕೃತದಲ್ಲಿನ ಮಂತ್ರಗಳನ್ನು ನಿತ್ಯ ಪಠಿಸುವುದರಿಂದ ಆಗುವ ಲಾಭವೇನು? ವಿಡಿಯೋ ನೋಡಿ

ವಿವೇಕ ಬಿರಾದಾರ
|

Updated on: Nov 11, 2024 | 6:57 AM

Share

ಸನಾತನ ಹಿಂದೂ ಧರ್ಮದಲ್ಲಿ ಲಕ್ಷಾಂತರ ಶ್ಲೋಕ ಮತ್ತು ಮಂತ್ರಗಳು ಸಂಸ್ಕೃತದಲ್ಲಿವೆ. ಸಂಸ್ಕೃತದಲ್ಲಿನ ಮಂತ್ರಗಳನ್ನು ನಿತ್ಯ ಪಠಿಸುವುದರಿಂದ ಆಗುವ ಲಾಭವೇನು? ಈ ಬಗ್ಗೆ ನಮ್ಮ ಪೂರ್ವಜರು ಏನು ಹೇಳಿದ್ದಾರೆ? ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.

ಇಂದು (ನವೆಂಬರ್​​ 11) ಕಾರ್ತಿಕ ಮಾಸದ ಎರಡನೇ ಸೋಮವಾರ. ಈ ದಿನ ಶಿವನನ್ನು ಆರಾಧಿಸಲು ಬಹಳ ಶ್ರೇಷ್ಠವಾದ ದಿನವಾಗಿದೆ. ಸನಾತನ ಹಿಂದೂ ಧರ್ಮದಲ್ಲಿ ಲಕ್ಷಾಂತರ ಶ್ಲೋಕ ಮತ್ತು ಮಂತ್ರಗಳು ಸಂಸ್ಕೃತದಲ್ಲಿವೆ. ವೇದ ಮತ್ತು ಪುರಣಾಗಳಲ್ಲಿ ಲಕ್ಷಾಂತರ ಶ್ಲೋಕ ಅಥವಾ ಮಂತ್ರಗಳು ಸಂಸ್ಕೃತದಲ್ಲಿರುವುದನ್ನು ಕಾಣಬಹುದು. ಸಂಸ್ಕೃತದಲ್ಲಿ ಮಂತ್ರ ಹೇಳುವಾಗ ಬಹಳ ಜಾಗರೂಕರಾಗಿ ಮತ್ತು ನಿಗಾ ಇಟ್ಟು ಹೇಳಬೇಕು. ಯಾವುದೇ ಮಂತ್ರ ಪಠಿಸುವಾಗ ಅಪಭ್ರಂಶ/ ತಪ್ಪಾಗಿ ಹೇಳಬಾರದು. ಇದರಿಂದ ನಮಗೆ ಸಾಕಷ್ಟು ಹಾನಿ ಎಂದು ಹಿರಿಯರು, ಋಷಿಮುನಿಗಳು ಹೇಳಿದ್ದಾರೆ. ಸಂಸ್ಕೃತದಲ್ಲಿನ ಮಂತ್ರಗಳನ್ನು ನಿತ್ಯ ಪಠಿಸುವುದರಿಂದ ಆಗುವ ಲಾಭವೇನು? ಈ ಬಗ್ಗೆ ನಮ್ಮ ಪೂರ್ವಜರು ಏನು ಹೇಳಿದ್ದಾರೆ? ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.