ಒಂದು ದಿನದ ಮಟ್ಟಿಗೆ ಮುಷ್ಕರ ಮುಂದೂಡಿದರೆ ಆಗುವ ಪ್ರಯೋಜನವಾದರೂ ಏನು? ಅನಂತ್ ಸುಬ್ಬಾರಾವ್

Updated on: Aug 04, 2025 | 5:11 PM

ಒಂದು ದಿನದ ಮಟ್ಟಿಗೆ ಮುಷ್ಕರ ಮುಂದೂಡಿದರೆ ಅದರಿಂದ ಆಗುವ ಪ್ರಯೋಜನವಾದರೂ ಏನು? ಮಂಗಳವಾರ ಮಾಡುವ ಮುಷ್ಕರ ಬುಧವಾರ ಮಾಡುತ್ತೇವೆ ಎಂದು ಸುಬ್ಬಾರಾವ್ ಹೇಳಿದರು. ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಯವರೊಂದಿಗೆ ನಡೆದ ಕೆಎಸ್​ಆರ್​ಟಿಸಿ ನೌಕರರ ಮಾತುಕತೆ ವಿಫಲಗೊಂಡಿವೆ. ಮುಷ್ಕರ ನಡೆಸಲು ನೌಕರರ ಸಂಘ ಮುಂದಾಗಿದ್ದರೆ ಹೈಕೋರ್ಟ್ ಮುಷ್ಕರವನ್ನು ಒಂದು ದಿನ ಮುಂದೂಡುವಂತೆ ಹೇಳಿದೆ.

ಬೆಂಗಳೂರು, ಆಗಸ್ಟ್ 4: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೆ ಸಭೆ ನಡೆಸಿದ ಬಳಿಕ ನಮ್ಮ ವರದಿಗಾನೊಂದಿಗೆ ಮಾತಾಡಿ ಕೆಎಸ್​ಆರ್​ಟಿಸಿ ನೌಕರರ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಹೆಚ್ ವಿ ಅನಂತ್ ಸುಬ್ಬರಾವ್ ಅವರು ಹೈಕೋರ್ಟ್ ಮುಷ್ಕರವನ್ನು ಒಂದು ದಿನದ ಮಟ್ಟಿಗೆ ಮುಂದೂಡುವಂತೆ ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಲಿಲ್ಲ. ಉಚ್ಚ ನ್ಯಾಯಾಲಯ ಆದೇಶ ಪ್ರತಿ ನಮಗಿನ್ನೂ ಸಿಕ್ಕಿಲ್ಲ, ಸಿಕ್ಕ ಬಳಿಕ ಪ್ರತಿಕ್ರಿಯಿಸುತ್ತೇನೆ ಎಂದು ಹೇಳಿದ ಅವರು ಕೋರ್ಟ್ ನೌಕರರಿಗೆ ಆದೇಶ ನೀಡುವ ಬದಲು ಸರ್ಕಾರಕ್ಕೆ ನಮ್ಮ ಬೇಡಿಕೆಗಳನ್ನು ಪೂರೈಸುವಂತೆ ಹೇಳಬಹುದಲ್ಲ ಎಂದರು.

ಇದನ್ನೂ ಓದಿ:  ನಾಳೆ ಮುಷ್ಕರ ನಡೆಸಲು ಮುಂದಾಗಿದ್ದ ಸಾರಿಗೆ ನೌಕರರಿಗೆ ಶಾಕ್ ಕೊಟ್ಟ ಕೋರ್ಟ್

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ