ಹೊಸ ಫೀಚರ್ಗಳೊಂದಿಗೆ ವಾಟ್ಸ್ಯಾಪ್ ಇನ್ನಷ್ಟು ಗ್ರಾಹಕ-ಸ್ನೇಹಿ ಆಗಿದೆ, ಬಳಕೆಗೆ ಮತ್ತಷ್ಟು ಹೊಸ ವಿಧಾನಗಳು!
ಪ್ರಸ್ತುತವಾಗಿ ವಾಟ್ಸ್ಯಾಪ್ ಕೇವಲ ದೀರ್ಘಾವಧಿಯ ವಿಡಿಯೊಗಳಿಗೆ ಸೆಂಡ್ ಆಪ್ಷನ್ ತೋರಿಸುತ್ತದೆ ಮತ್ತು ಕಿರು ಅವಧಿಯ ವಿಡಿಯೋಗಳಿಗೆ ಟಾಗಲ್ ಬಟನ್ ಅನ್ನು ತೋರಿಸುತ್ತದೆ.
ಫೇಸ್ಬುಕ್ ಒಡೆತನದ ವಾಟ್ಸ್ಯಾಪ್ ಯಾವತ್ತಿಗೂ ಯೂಸರ್ ಫ್ರೆಂಡ್ಲೀ ಮತ್ತು ಸಾಮಾಜಿಕ ಜಾಲತಾಣಗಳ ವಿಷಯಕ್ಕೆ ಬಂದರೆ ಅತ್ಯಂತ ಜನಪ್ರಿಯವೂ ಹೌದು. ತನ್ನ ಗ್ರಾಹಕರಿಗೆ ಅದು ಹೊಸ ಫೀಚರ್ ಗಳನ್ನು ಬಿಡುಗಡೆ ಮಾಡಿದ್ದು ಅದಕ್ಕೆ ನ್ಯೂ ವಿಡಿಯೋ ಕಂಟ್ರೋಲ್ ಮತ್ತು ಗ್ರೂಪ್ ಕಾಲ್ ಶಾರ್ಟ್ ಕಟ್ಸ್ ಅಂತ ಹೆಸರಿಟ್ಟಿದೆ. ಯೆಲ್ಲೋ ಪೇಜಸ್ನಂಥ ಬ್ಯುಸಿನೆಸ್ ಡೈರೆಕ್ಟರಿಯನ್ನು ಲಾಂಚ್ ಮಾಡುವ ಸಿದ್ಧತೆ ಮಾಡಿಕೊಳ್ಳುತ್ತಿರುವ ಬಗ್ಗೆಯೂ ವಾಟ್ಸ್ಯಾಪ್ ಖಚಿತಪಡಿಸಿದೆ. ಅಲ್ಲದೆ ಸಂಸ್ಥೆಯು ಬಳಕೆದಾರರರಿಗೆ ಇಮೇಜ್ ಮತ್ತು ಸ್ಟಿಕ್ಕರ್ಗಳನ್ನು ಶೇರ್ ಮಾಡಲು ನೆರವಾಗುವಂಥ ಫೀಚರ್ ಅನ್ನು ತಯಾರು ಮಾಡುತ್ತಿರುವ ಕುರಿತು ವರದಿಯೊಂದು ಪ್ರಕಟವಾಗಿದೆ.
ಈ ಫೀಚರ್ ನ್ಯೂ ವಿಡಿಯೋ ಕಂಟ್ರೋಲ್ (ಹೊಸ ವೀಡಿಯೊ ನಿಯಂತ್ರಣಗಳು) ಎಂದು ಕರೆಯಲಾಗುತ್ತದೆ ಮತ್ತು ಇದು ಐಒಎಸ್ 2.21.190.11 ಗಾಗಿ ವಾಟ್ಸ್ಯಾಪ್ ಬೀಟಾದಲ್ಲಿ ಲಭ್ಯವಿದೆ. ವಾಟ್ಸ್ಯಾಪ್ ಹೊಸ ವಿಡಿಯೋ ಕಂಟ್ರೋಲ್‌ಗಳು ಬಳಕೆದಾರರು ವೀಡಿಯೊವನ್ನು ಹಂಚಿಕೊಂಡಾಗ ಮೆಸೇಜಿಂಗ್ ಆ್ಯಪ್ ಇಂಟರ್‌ಫೇಸ್‌ಗೆ ಹಲವಾರು ಹೊಸ ಕಾರ್ಯವಿಧಾನಗಳು ಲಭ್ಯವಾಗುತ್ತವೆ.
ಪ್ರಸ್ತುತವಾಗಿ ವಾಟ್ಸ್ಯಾಪ್ ಕೇವಲ ದೀರ್ಘಾವಧಿಯ ವಿಡಿಯೊಗಳಿಗೆ ಸೆಂಡ್ ಆಪ್ಷನ್ ತೋರಿಸುತ್ತದೆ ಮತ್ತು ಕಿರು ಅವಧಿಯ ವಿಡಿಯೋಗಳಿಗೆ ಟಾಗಲ್ ಬಟನ್ ಅನ್ನು ತೋರಿಸುತ್ತದೆ.
ಅದರ ಐಒಎಸ್ ಬೀಟಾ ಆಪ್‌ನಲ್ಲಿ ಈ ವಾಟ್ಸಾಪ್ ಅಪ್‌ಡೇಟ್ ಆದ ನಂತರ, ಬಳಕೆದಾರರು ವೀಡಿಯೊದ ಮೇಲೆ ಹೆಚ್ಚಿನ ನಿಯಂತ್ರಣವನ್ನು ಪಡೆಯುತ್ತಾರೆ ಮತ್ತು ಜಿಐಎಫ್ ಟಾಗಲ್ ಬಟನ್‌ನ ಎದುರು ಭಾಗದಲ್ಲಿ ಒಂದು ಬಟನ್ ಇದ್ದು ಅದು ಬಳಕೆದಾರರಿಗೆ ವೀಡಿಯೊವನ್ನು ಮ್ಯೂಟ್ ಮಾಡಲು ಮತ್ತು ಯಾವುದೇ ಶಬ್ದವಿಲ್ಲದೆ ಹಂಚಿಕೊಳ್ಳಲು ಸಹಾಯ ಮಾಡುತ್ತದೆ.
ಅಲ್ಲದೆ, ವೀಡಿಯೊ ಮ್ಯೂಟ್ ಬಟನ್‌ನ ಪಕ್ಕದಲ್ಲಿ ಹಾಕಿರುವ ಟೈಲ್ ವೀಡಿಯೊ ಗಾತ್ರ ಮತ್ತು ಉದ್ದದ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಡಬ್ಲ್ಯೂಎಬೀಟಾಇನ್ಫೋ ವರದಿಯ ಪ್ರಕಾರ, ಪ್ರತಿ ಬಾರಿ ಬಳಕೆದಾರನೊಬ್ಬ ವೀಡಿಯೊವನ್ನು ಎಡಿಟ್ ಮಾಡಿದಾಗ, ವೀಡಿಯೊದ ಗಾತ್ರ ಮತ್ತು ಅವಧಿ ತಕ್ಷಣವೇ ಆಪ್ಡೇಟ್ ಆಗುತ್ತದೆ.
ಇದನ್ನೂ ಓದಿ: ಬಾಯ್ಫ್ರೆಂಡ್ ಜತೆ ಬಿಗ್ ಬಾಸ್ ಒಟಿಟಿ ವಿನ್ನರ್ ದಿವ್ಯಾ ಅಗರ್ವಾಲ್ ಮೋಜು ಮಸ್ತಿ; ವಿಡಿಯೋ ವೈರಲ್