ಗೋಡೌನ್‌ನಲ್ಲಿ ಮೂಟೆಗಳ ಅಡಿ ಸಿಲುಕಿದ ಕಾರ್ಮಿಕರು; ಓರ್ವ ಸಾವು
ಐವರು ಕಾರ್ಮಿಕರು ಗೋಡೌನ್‌ನಲ್ಲಿ ಮೂಟೆಗಳನ್ನು ಇಳಿಸುತ್ತಿದ್ದಾಗ ಅವಘಡ ಸಂಭವಿಸಿದೆ. ಮೇಲೆ ಹೇರಿಟ್ಟ ಗೋಧಿಯ ಮೂಟೆಗಳು ಇದ್ದಕ್ಕಿದ್ದಂತೆ ಕೆಳಗೆ ಬಿದ್ದವು. ತಕ್ಷಣ ಕಾರ್ಮಿಕರು ಓಡಲು ಪ್ರಯತ್ನಿಸಿದರೂ ಅವರು ಅದರಡಿ ಸಿಲುಕಿದ್ದಾರೆ.
ಗುಜರಾತ್ನ ಅಮ್ರೇಲಿಯಲ್ಲಿ ದಾರುಣ ಘಟನೆಯೊಂದು ನಡೆದಿದೆ. ಕೆಲವು ಕಾರ್ಮಿಕರು ಸ್ಥಳೀಯ ಗೋಡೌನ್‌ನಲ್ಲಿ ಗೋಧಿಯ ಮೂಟೆಗಳನ್ನು ಇಳಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಇದ್ದಕ್ಕಿದ್ದಂತೆ ಮೂಟೆಗಳು ಕಾರ್ಮಿಕರ ಮೇಲೆ ಬಿದ್ದವು. ಗೋಣಿಚೀಲಗಳು ಕುಸಿದು ಒಬ್ಬ ಕಾರ್ಮಿಕ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ನಡೆದಿದೆ. ಗೋಣಿಚೀಲದಡಿ ಸಿಲುಕಿದ್ದ ಕಾರ್ಮಿಕರನ್ನು ಸಹ ಕಾರ್ಮಿಕರು ಹೊರತೆಗೆದಿದ್ದಾರೆ. ಇದರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:21 pm, Tue, 10 September 24