ಸುಜಾತ ಭಟ್ ಹೇಳಿದ್ದೆಲ್ಲ ಸತ್ಯವೆಂದು ನಾವು ಕೂಡ ನಂಬಿ ಮೋಸಹೋದೆವು: ಜಯಂತ್, ಹೋರಾಟಗಾರ
ಶವ ಹೂತಿಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಎಸ್ಐಟಿ ರಚನೆ ಮಾಡಿದಾಗ ಸುಜಾತ ಭಟ್ ಅಧಿಕಾರಿಗಳನ್ನು ಭೇಟಿ ಮಾಡಿ ಅವರಿಗೂ ದೂರು ನೀಡಿದರು ಎಂದು ಹೇಳಿದ ಜಯಂತ್, ಮಹೇಶ್ ಶೆಟ್ಟಿ ತಿಮರೋಡಿಯವರು ಸುಜಾತ ಅವರಿಗೆ ವಾಸಮಾಡಲು ಸ್ಥಳ ಒದಗಿಸಿದರು. ಮಹೇಶ್ ಅವರಿಗೂ ಸುಜಾತ ಅದೇ ಕತೆಯನ್ನು ಹೇಳಿದ್ದರು, ಆದರೆ ಮಹೇಶಣ್ಣಗೆ ವಾಸ್ತವ ಗೊತ್ತಿಲ್ಲ, ಅದು ತನಗೆ ಮಾತ್ರ ಗೊತ್ತು ಎಂದು ಜಯಂತ್ ಹೇಳಿದರು.
ದಕ್ಷಿಣ ಕನ್ನಡ, ಆಗಸ್ಟ್ 22: ಅನನ್ಯ ಭಟ್ ತಮ್ಮ ಮಗಳು ಎಂದು ಹೇಳಿಕೊಂಡು ಸುತ್ತುತ್ತಿರುವ ಸುಜಾತ ಭಟ್ (Sujata Bhat) ಹೆಸರಿನ ಮಹಿಳೆ ಹೇಳಿದ ಸುಳ್ಳುಗಳನ್ನು ತಾವು ಮತ್ತು ಮಹೇಶ್ ಶೆಟ್ಟಿ ತಿಮರೋಡಿ ಸತ್ಯವೆಂದು ನಂಬಿದ್ದೆವು ಎಂದು ಹೋರಾಟಗಾರ ಜಯಂತ್ (Jayant, activist) ಹೇಳುತ್ತಾರೆ. ನಮ್ಮ ವರದಿಗಾರನೊಂದಿಗೆ ಮಾತಾಡಿರುವ ಅವರು, ತಾನು ಪ್ರಭಾವಿ ವ್ಯಕ್ತಿಗಳು ಜಮೀನುಗಳನ್ನು ವಶಪಡಿಸಿಕೊಳ್ಳುತ್ತಿರುವುದರ ವಿರುದ್ಧ ಹೋರಾಟ ಮಾಡುತ್ತಿದ್ದಾಗ ಸುಮಾರು ಎರಡು ವರ್ಷಗಳ ಹಿಂದೆ ಸುಜಾತಾ ಭಟ್ ಈಗ ಮಾಧ್ಯಮಗಳ ಮುಂದೆ ಹೇಳಿಕೊಂಡು ತಿರುಗುತ್ತಿರುವ ವಿಷಯವನ್ನೇ ತಮ್ಮ ಮುಂದೆ ಹೇಳಿಕೊಂಡರು. ಪಾಪ ವಯಸ್ಸಾದ ಮಹಿಳೆ ಅಂತ ನಾವು ಸಹಾಯಕ್ಕೆ ಹೋದೆವು, ಹಾಯ್ ಕರ್ನಾಟಕದ ವಿಜಯ್ ಎನ್ನುವವರು ಎರಡು ಎಪಿಸೋಡ್ಗಳನ್ನು ಮಾಡಿದರು. ಮಗಳ ವಿಷಯದಲ್ಲಿ ದಾಖಲೆಗಳನ್ನು ತಂದುಕೊಡಿ ಅಂದಾಗ ಅವರು ಉಡುಪಿ ಮತ್ತು ಎಲ್ಲೆಲ್ಲೋ ಸುತ್ತಿದರೇ ಹೊರತು ದಾಖಲೆ ಕೊಡಲಿಲ್ಲ ಎಂದು ಜಯಂತ್ ಹೇಳಿದರು.
ಇದನ್ನೂ ಓದಿ: ಅನನ್ಯ ಭಟ್ ಪ್ರಕರಣ ಎಸ್ಐಟಿಗೆ ಹಸ್ತಾಂತರ: ಸುಜಾತ ಬಗ್ಗೆ ಅಚ್ಚರಿ ಸಂಗತಿ ರಿವಿಲ್ ಮಾಡಿದ ಸಹೋದರ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ