ಅನನ್ಯ ಭಟ್ ಪ್ರಕರಣ ಎಸ್ಐಟಿಗೆ ಹಸ್ತಾಂತರ: ಸುಜಾತ ಬಗ್ಗೆ ಅಚ್ಚರಿ ಸಂಗತಿ ರಿವಿಲ್ ಮಾಡಿದ ಸಹೋದರ
ಧರ್ಮಸ್ಥಳದಲ್ಲಿ ನಾಪತ್ತೆಯಾಗಿರುವ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯ ಭಟ್ ಪ್ರಕರಣದ ತನಿಖೆಯನ್ನು ಎಸ್ಐಟಿಗೆ ವಹಿಸಲಾಗಿದೆ. ಅನನ್ಯ ಭಟ್ ನಾಪತ್ತೆ ಪ್ರಕರಣ 2003 ರಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಅನನ್ಯ ಭಟ್ ಅವರ ತಾಯಿ ಎನ್ನಲಾದ ಸುಜಾತಾ ಭಟ್ ದೂರು ನೀಡಿದ್ದರು. ಸದ್ಯ, ಪ್ರಕರಣದ ತನಿಖೆ ಎಸ್ಐಟಿ ನಡೆಸಲಿದೆ.

ಮಂಗಳೂರು, ಆಗಸ್ಟ್ 20: ಡಿಜಿ&ಐಜಿಪಿ ಆದೇಶದ ಮೇರೆಗೆ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯ ಭಟ್ (Ananya Bhat) ನಾಪತ್ತೆ ಪ್ರಕರಣದ ತನಿಖೆಯನ್ನು ಎಸ್ಐಟಿಗೆ (SIT) ಹಸ್ತಾಂತರಿಸಲಾಗಿದೆ. 2003ರಲ್ಲಿ ಧರ್ಮಸ್ಥಳದಲ್ಲಿ ಅನನ್ಯ ನಾಪತ್ತೆಯಾದ ಬಗ್ಗೆ ದೂರು ದಾಖಲಾಗಿತ್ತು. ಅನನ್ಯ ತಾಯಿ ಎನ್ನಲಾಗಿರುವ ಸುಜಾತ ಭಟ್ ಅವರು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಸದ್ಯ ಅನನ್ಯ ಭಟ್ ನಾಪತ್ತೆ ಪ್ರಕರಣದ ತನಿಖೆ ಎಸ್ಐಟಿಗೆ ಹಸ್ತಾಂತರಗೊಂಡಿದೆ.
ಸುಜಾತಾ ಭಟ್ ಎಂಬವರ ಮಗಳು ಅನನ್ಯಾ ಭಟ್ ಮಣಿಪಾಲದಲ್ಲಿ ವೈದ್ಯಕೀಯ ಶಿಕ್ಷಣ ಓದುತ್ತಿದ್ದವರು ಧರ್ಮಸ್ಥಳಕ್ಕೆ ತೆರಳಿದ ನಂತರ ನಾಪತ್ತೆಯಾಗಿದ್ದರು. ಆಕೆಯನ್ನು ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು ಎಂಬ ಆರೋಪಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಳೆದ ಕೆಲವು ದಿನಗಳಿಂದ ಮುನ್ನೆಲೆಗೆ ಬಂದಿತ್ತು. ಈ ವಿಚಾರವಾಗಿ, ಅನನ್ಯಾ ಭಟ್ ತಾಯಿ ಎನ್ನಲಾದ ಸುಜಾತಾ ಭಟ್ ಸಹ ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೆಗಳನ್ನು ನೀಡಿದ್ದಾರೆ.
ಇದನ್ನೂ ನೋಡಿ: ಧರ್ಮಸ್ಥಳ ಕೇಸ್: ‘ಸುಜಾತಾ ಭಟ್ ತೋರಿಸಿದ್ದು ಅನನ್ಯಾ ಫೋಟೊ ಅಲ್ಲ’! ಮತ್ಯಾರದ್ದು? ಇಲ್ಲಿದೆ ನೋಡಿ
ಅಚ್ಚರಿ ವಿಚಾರ ಬಿಚ್ಚಿಟ್ಟ ಸುಜಾತಾ ಭಟ್ ಸಹೋದರ
ಪ್ರಕರಣ ಸಂಬಂಧ ಅನನ್ಯ ಭಟ್ ತಾಯಿ ಎನ್ನಲಾಗಿರುವ ಸುಜಾತ ಭಟ್ ಅವರ ಸಹೋದರ ಮಾಧ್ಯಮ ಟಿವಿ9ಗೆ ಪ್ರತಿಕ್ರಿಯಿಸಿದ್ದು, ಅಚ್ಚರಿ ಸಂಗತಿಯನ್ನು ರಿವಿಲ್ ಮಾಡಿದ್ದಾರೆ. “ಸುಜಾತ ಭಟ್ 1964 ಅಥವಾ 65 ಜನಿಸಿದ್ದಾರೆ. 10ನೇ ತರಗತಿಯಲ್ಲಿರುವಾಗ ಮನೆ ಬಿಟ್ಟು ಹೋಗಿದ್ದರು. ಆ ಬಳಿಕ ಅವರು ಯಾರ ಜೊತೆ ಇದ್ದಾರೆ, ಎಲ್ಲಿದ್ದಾರೆ ಎಂಬುದರ ಬಗ್ಗೆ ನಮಗೆ ಮಾಹಿತಿಯೇ ಇಲ್ಲ. ಮನೆಯಿಂದ ಹೋದವರು ಕೆಲವು ದಿನಗಳ ಬಳಿಕ ಉಡುಪಿಯ ನಿಟ್ಟೂರಿನ ರಿಮೈಂಡ್ ಹೋಮನಲ್ಲಿ ಇದ್ದರೂ ಎಂಬ ಮಾಹಿತಿ ನಮಗೆ ಬಂದಿತ್ತು ಎಂದು ಹೇಳಿದರು.
ಅಲ್ಲಿ ಎಷ್ಟು ದಿವಸ ಇದ್ದರು ಎನ್ನುವ ಬಗ್ಗೆ ನಮಗೆ ಮಾಹಿತಿ ಸಿಗಲಿಲ್ಲ. ಮನೆಯಲ್ಲಿರುವಾಗ ಮದುವೆಯಾಗಿರಲಿಲ್ಲ. ಸುಜಾತ ಭಟ್ ಹೇಳುವುದೆಲ್ಲವೂ ಸುಳ್ಳು. ಪರೀಕದಲ್ಲಿರುವ ಜಾಗ ಅಜ್ಜನಿಗೆ ದಾನವಾಗಿ ಬಂದದ್ದು. ಅಜ್ಜನೊಟ್ಟಿಗೆ ಇದ್ದು ಪರಿಕದ ಜಾಗವನ್ನು ತಂದೆ ನೋಡಿಕೊಳ್ಳುತ್ತಿದ್ದರು. ಧರ್ಮಸ್ಥಳದ ಹೆಸರಿಗೆ ಪರಿಕ ಜಾಗವನ್ನು ದುಡ್ಡಿಗೆ ಕೊಟ್ಟಿದ್ದಾರ! ದಾನವಾಗಿ ಕೊಟ್ಟಿದ್ದರ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದರು.



